30 ವರ್ಷದ ಮಾಜಿ ಎಫ್‌ಟಿಎಕ್ಸ್‌ ಸಹ ಸಂಸ್ಥಾಪಕ ಸ್ಯಾಮ್‌ ಬ್ಯಾಂಕ್‌ಮನ್‌ ಫ್ರೀಡ್‌ ಅವರ ಸಂಪೂರ್ಣ ಕ್ರಿಪ್ಟೋಕರೆನ್ಸಿ ಆಸ್ತಿ ಕರಗಿಹೋಗಿದೆ. ಒಂದು ವಾರದ ಹಿಂದೆ 160 ಕೋಟಿ ಕ್ರಿಪ್ಟೋಕರೆನ್ಸಿ ಸಂಪತ್ತು ಹೊಂದಿದ್ದ ಫ್ರೀಡ್‌ ಅವರ ಆಸ್ತಿ ಈಗ ಸಂಪೂರ್ಣವಾಗಿ ಬರಿದಾಗಿದೆ. 

ನವದೆಹಲಿ (ನ.12): ಕೆಲ ದಿನಗಳ ಹಿಂದೆ ಸ್ಯಾಮ್‌ ಬ್ಯಾಂಕ್‌ಮನ್‌ ಫ್ರೀಡ್‌ ಎನ್ನುವ ಹೆಸರು ಕ್ರಿಪ್ಟೋಕರೆನ್ಸಿ ಸೆಕ್ಟರ್‌ನ ಮಹಾ ಉದ್ಯಮಿಯಾಗಿ ಕಾಣುತ್ತಿದ್ದ. ಆದರೆ, ಅವರ ಕ್ರಿಪ್ಟೋ ಸಾಮ್ರಾಜ್ಯದ ಮಹಾ ಕುಸಿತ ಯಾವ ರೀತಿ ಇತ್ತೆಂದರೆ, ಕೆಲ ದಿನಗಳ ಹಿಂದೆ 160 ಕೋಟಿಯ ಸಂಪತ್ತು ಹೊಂದಿದ್ದ ಬ್ಯಾಂಕ್‌ಮನ್‌ ಫ್ರೀಡ್‌ ಅವರ ಸಂಪತ್ತು ಇಂದಿಗೆ ಅಕ್ಷರಶಃ ಸೊನ್ನೆ. ಕ್ರಿಪ್ಟೋಕರೆನ್ಸಿಯ ವಂಡರ್‌ ಕಿಡ್‌ ಎನಿಸಿಕೊಂಡಿದ್ದ ಬ್ಯಾಂಕ್‌ಮನ್‌ ಫ್ರೀಡ್‌ ವಿಶ್ವದ ಮೂರನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ ಎಫ್‌ಟಿಎಕ್ಸ್‌ನ ಸಹ ಸಂಸ್ಥಾಪಕರಾಗಿದ್ದರು. ಕೇವಲ ಮೂರು ವರ್ಷಗಳ ಅವಧಿಯಲ್ಲಿ ತನ್ನ ಮಾಜಿ ಹೂಡಿಕೆದಾರರೂ ಆಗಿದ್ದ ಬಿನಾನ್ಸೆಯನ್ನೂ ಸಹ ಹಿಂದಿಕ್ಕಿದ್ದರು. ಆದರೆ, ಎಫ್‌ಟಿಎಕ್ಸ್‌ನ ಮಾಜಿ ಸಹ ಸಂಸ್ಥಾಪಕ ಸ್ಯಾಮ್‌ ಬ್ಯಾಂಕ್‌ಮನ್‌ ಫ್ರೀಡ್‌ ಅವರ ಸಂಪೂರ್ಣ ಕ್ರಿಪ್ಟೋಕರೆನ್ಸಿ ಆಸ್ತಿ ಶುಕ್ರವಾರದ ವೇಳೆಗೆ ಶೂನ್ಯಕ್ಕೆ ಇಳಿದಿದೆ. ಇದು ಇತಿಹಾಸದಲ್ಲಿಯೇ ಸಂಪತ್ತಿನ ಅತಿದೊಡ್ಡ ನಿರ್ನಾಮಗಳಲ್ಲಿ ಒಂದಾಗಿದೆ. ಶುಕ್ರವಾರ ಅವರ ರಾಜೀನಾಮೆ ಹಾಗೂ ದಿವಾಳಿತನದ ಅರ್ಜಿಯೊಂದಿಗೆ ಅವರ ಕ್ರಿಪ್ಟೋ ಸಾಮ್ರಾಜ್ಯ ಸಂಪೂರ್ಣ ಬರಿದಾಗಿದೆ. ಜಾನ್ ಪಿಯರ್‌ಪಾಂಟ್ ಮಾರ್ಗನ್‌ರಿಂದಲೇ ಮೆಚ್ಚುಗೆ ಪಡೆದುಕೊಂಡಿದ್ದ ಶ್ರೀಮಂತನ ಒಟ್ಟಾರೆ ಕ್ರಿಪ್ಟೋ ಆಸ್ತಿಗಳೀಗ ನಿಷ್ಪ್ರಯೋಜಕವಾಗಿವೆ ಎನ್ನುವ ಅರ್ಥ ಇದಾಗಿದೆ.

30 ವರ್ಷದ ಸ್ಯಾಮ್‌ ಬ್ಯಾಂಕ್‌ಮನ್‌ ಫ್ರೀಡ್‌ ಅವರ ಬಳಿ ಅಂದಾಜು 260 ಕೋಟಿ (26 ಬಿಲಿಯನ್‌ ಅಮೆರಿಕನ್‌ ಡಾಲರ್‌) ಸಂಪತ್ತು ಇತ್ತು. ಈ ವಾರದ ಆರಂಭದ ವೇಳೆ ಅವರ ಬಳಿ ಇದ್ದ ಕ್ರಿಪ್ಟೋಕರೆನ್ಸಿಯ ಮೌಲ್ಯವೇ 160 ಕೋಟಿ ರೂಪಾಯಿ ಆಗಿತ್ತು. ಎಫ್‌ಟಿಎಕ್ಸ್‌ ಎನ್ನುವುದು ಭಾರತದಲ್ಲಿ ವಜೀರೆಕ್ಸ್‌ ಇರುವಂತೆಯೇ ಇದ್ದ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್‌ ವೇದಿಕೆಯಾಗಿದೆ. ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ ಹೇಳುವ ಪ್ರಕಾರ, ಎಫ್‌ಟಿಎಕ್ಸ್‌ನ ಯುಎಸ್‌ ಉದ್ಯಮವೀಗ 1 ಡಾಲರ್‌ಗೆ ಇಳಿದಿದೆ. ಈ ಎಫ್‌ಟಿಎಕ್ಸ್‌ನಲ್ಲಿ ಬ್ಯಾಂಕ್‌ಮನ್‌ ಫ್ರೀಡ್‌ ಶೆ.70ರಷ್ಟು ಮಾಲೀಕತ್ವ ಹೊಂದಿದ್ದರು. ಜನವರಿಯಲ್ಲಿ ಎಫ್‌ಟಿಎಕ್ಸ್‌ನ ಫಂಡ್‌ರೈಸಿಂಗ್‌ ರೌಂಡ್‌ನಲ್ಲಿ ಇದರ ಮೌಲ್ಯ ಬರೋಬ್ಬರಿ 8 ಬಿಲಿಯನ್‌ ಯುಎಸ್‌ ಡಾಲರ್‌ ಆಗಿತ್ತು.

$500 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ರಾಬಿನ್‌ಹುಡ್ ಮಾರ್ಕೆಟ್ಸ್ ಇಂಕ್‌ನಲ್ಲಿ ಬ್ಯಾಂಕ್‌ಮ್ಯಾನ್-ಫ್ರೈಡ್ ಅವರ ಪಾಲನ್ನು ಅವರ ಸಂಪತ್ತಿನ ಲೆಕ್ಕಾಚಾರದಿಂದ ತೆಗೆದು ಹಾಕಲಾಗಿದೆ. ರಾಯಿಟರ್ಸ್ ವರದಿಯ ಪ್ರಕಾರ, ಅವರ ವ್ಯಾಪಾರ ಸಂಸ್ಥೆಯಾದ ಅಲ್ಮೇಡಾ ರಿಸರ್ಚ್ ಮೂಲಕ ಇದನ್ನು ಹೊಂದಿದ್ದರು. ಇದನ್ನು ಸಾಲಗಳಿಗೆ ಮೇಲಾಧಾರವಾಗಿ ಬಳಸಿರಬಹುದು ಎಂದು ವರದಿ ಮಾಡಿದೆ. FTX.US ಮತ್ತು Alameda ಸಹ ದಿವಾಳಿತನದ ಫೈಲಿಂಗ್‌ನ ಭಾಗವಾಗಿದೆ.

Crypto Market:ಮತ್ತೆ ಕುಸಿದ ಕ್ರಿಪ್ಟೋ ಮಾರುಕಟ್ಟೆ; ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ

ದಿವಾಳಿತನದ ಕಾನೂನು ಚಾಪ್ಟರ್‌-11ಅನ್ನು ಫಿಲ್‌ ಮಾಡಿರುವ ಬ್ಯಾಂಕ್‌ಮನ್‌ ಫ್ರೀಡ್‌, ಕಂಪನಿಯ ಮುಖ್ಯ ವ್ಯವಸ್ಥಾಪಕ ಅಧಿಕಾರಿಯಾಗಿ ಬ್ಯಾಂಕ್‌ಮನ್‌ ಫ್ರೀಡ್‌ ರಾಜೀನಾಮೆ ನೀಡಿದ್ದಾರೆ. ಜಾನ್‌ ಜೆ ರೇ-3 ಮುಂದಿನ ಸಿಇಒ ಆಗಿರಲಿದ್ದಾರೆ ಎಂದು ಎಫ್‌ಟಿಎಕ್ಸ್‌ ಕಂಪನಿ ಶುಕ್ರವಾರ ಪ್ರಕಟಿಸಿದ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ದಿವಾಳಿತನದ ಅವಧಿಯಲ್ಲಿ ವೈಯಕ್ತಿಕ ಉದ್ಯೋಗಿಗಳಾಗಿ ಜನರು ರೇ ಅವರಿಗೆ ಸಹಾಯ ಮಾಡಬಹುದು ಎಂದು ಕಂಪನಿ ಹೇಳಿರುವ ಕಾರಣ ಕೆಲವು ಉದ್ಯೋಗಿಗಳು ಕಂಪನಿಯಲ್ಲಿಯೇ ಉಳಿದುಕೊಳ್ಳಬಹುದು ಎನ್ನಲಾಗಿದೆ.

Cryptocurrency: ತೀವ್ರ ಕುಸಿತ ಕಂಡ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ; ಇದಕ್ಕೇನು ಕಾರಣ? ಹೂಡಿಕೆದಾರರು ಏನ್ ಮಾಡ್ಬೇಕು?

ಬ್ಯಾಂಕ್‌ಮನ್‌ ಫ್ರೀಡ್‌ ಸಾಮ್ರಾಜ್ಯವು ಈ ವಾರ ಸಂಪೂರ್ಣವಾಗಿ ಕುಸಿದಿದೆ. ಅದಕ್ಕೆ ಕಾರಣ ಕಂಪನಿಯ ಅಂಗಸಂಸ್ಥೆಗಳಲ್ಲಿ ಒಂದರಲ್ಲಿ ನಗದು ಬಿಕ್ಕಟ್ಟು ಕಾಣಿಸಿಕೊಂಡಿದೆ. ಎಫ್‌ಟಿಎಕ್ಸ್‌ ಯುಎಸ್‌ ಎಕ್ಸ್‌ಚೇಂಜ್‌ಗೆ ಗುರುವಾರ ತಿಳಿಸಿರುವ ಮಾಹಿತಿಯಂತೆ ತನ್ನ ಗ್ರಾಹಕರು, ಯಾವುದೇ ಸ್ಥಾನದಲ್ಲಿ ಬೇಕಾದರೆ ವ್ಯಾಪಾರವನ್ನು ಕ್ಲೋಸ್‌ ಮಾಡಬಹುದು. ಕೆಲವೇ ದಿನಗಳಲ್ಲಿ ಕಂಪನಿಯ ಟ್ರೇಡಿಂಗ್ ನಿಂತು ಹೋಗಲಿದೆ ಎಂದಿತ್ತು. ಎಫ್‌ಟಿಕ್‌ಸ್‌ ನೆಲೆಗೊಂಡಿರುವ ಬಹಾಮಾಸ್‌ನಲ್ಲಿ, ಅಧಿಕಾರಿಗಳು ಅದರ ಸ್ಥಳೀಯ ವ್ಯಾಪಾರ ಅಂಗಸಂಸ್ಥೆ ಮತ್ತು ಸಂಬಂಧಿತ ಪಕ್ಷಗಳ ಆಸ್ತಿಗಳನ್ನು ಮುಟ್ಟುಗೋಲು ಮಾಡಿಕೊಂಡಿದ್ದಾರೆ.