ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಬಿಜೆಪಿ ಇದು ಜನಸಾಮಾನ್ಯರ ಬಜೆಟ್ ಎಂದು ಬಣ್ಣಿಸಿದ್ದರೆ, ವಿಪಕ್ಷಗಳು ಬಜೆಟ್‌ನಲ್ಲಿ ಏನಿಲ್ಲಾ ಏನಿಲ್ಲಾ ಎಂದಿದ್ದಾರೆ. ಕೇಂದ್ರದ ಈ ಬಾರಿಯ ಬಜೆಟ್ ನಿಜಕ್ಕೂ ಜನಸಾಮಾನ್ಯರ ಪರವಾಗಿದೆಯಾ? ಜನಸಾಮಾನ್ಯರಿಗಾಗಿ ಈ ಬಜೆಟ್‌ನಿಂದ ಆದ ಲಾಭವೇನು?
ನವದೆಹಲಿ(ಫೆ.01) ಇಡೀ ದೇಶವೇ ಕಾಯುತ್ತಿದ್ದ ಕೇಂದ್ರ ಬಜೆಟ್ 2025 ಮಂಡನೆಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಕುರಿತು ಇದೀಗ ಚರ್ಚೆಗಳು ನಡೆಯುತ್ತಿದೆ. ಮತ್ತೊಂದೆಡೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ವಿಪಕ್ಷಗಳು ಈ ಬಜೆಟ್ ಪರಾಮರ್ಶೆ ನಡೆಸುತ್ತಿದೆ. ಇದರ ನಡುವೆ 2025ರ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಸಿಕ್ಕಿದ್ದೇನು? ಈ ಕುರಿತ ಪ್ರಶ್ನೆಗಳಿಗೆ ತಜ್ಞರು ಉತ್ತರಿಸಿದ್ದಾರೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ಬಾರಿಯ ಕೆಲ ವಿನಾಯಿತಿಗಳು, ಕಡಿತಗಳು ಹಾಗೂ ಉಳಿತಾಯಗಳನ್ನು ಜನಸಾಮಾನ್ಯರಿಗೆ ನೀಡಲಾಗಿದೆ.
ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಆಗಿರುವ ಲಾಭ
12 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ
25 ಲಕ್ಷ ರೂಪಾಯಿ ಆದಾಯ ಗಳಿಸುವ ವ್ಯಕ್ತಿ 1,10,000 ರೂಪಾಯಿ ಆದಾಯ ತೆರಿಗೆ ಲಾಭ ಪಡೆಯಲಿದ್ದಾರೆ. 18 ಲಕ್ಷ ರೂಪಾಯಿ ಆದಾಯ ಗಳಿಸುವ ವ್ಯಕ್ತಿ 70,000 ರೂಪಾಯಿ ವರೆಗೆ ಆದಾಯ ತೆರಿಗೆ ಉಳಿತಾಯ ಮಾಡಬಹುದು
ಮೊಬೈಲ್ ಫೋನ್, ಬ್ಯಾಟರಿ ಸೇರಿದಂತೆ 28 ಬಂಡವಾಳ ಸರಕುಗಳ ನೇರ ತೆರಿಗೆಯಲ್ಲಿ ವಿನಾಯಿತಿ
ಸ್ಟಾರ್ಟ್‌ಅಪ್ ತೆರಿಗೆ ಪ್ರಯೋಜನಗಳನ್ನು ಮುಂದಿನ 5 ವರ್ಷಕ್ಕೆ ವಿಸ್ತರಿಸಲಾಗುತ್ತಿದೆ
ಪಿಎಂ ಜನ ಆರೋಗ್ಯ ಯೋಜನೆ ಮೂಲಕ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ ವಿಸ್ತರಣೆ
10 ಲಕ್ಷ ರೂಪಾಯಿ ವರೆಗಿನ ಶಿಕ್ಷಣ ಸಾಲದ ಮೇಲಿನ ಟಿಸಿಎಸ್ ವಿನಾಯಿತಿ
2.4 ಲಕ್ಷ ರೂಪಾಯಿಯಿಂದ 6 ಲಕ್ಷ ರೂಪಾಯಿ ವರೆಗಿನ ವಾರ್ಷಿಕ ಟಿಡಿಎಸ್ ಏರಿಕೆ
ಹಿರಿಯ ನಾಗರೀಕರ ತೆರಿಗೆ ಡಿಡಕ್ಷನ್ ಮಿತಿಯನ್ನು 1 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ
SWAMIH ನಿಧಿ 2 ಸ್ಥಾಪನೆ, ಈ ಮೂಲಕ ಮಧ್ಯಮ ವರ್ಗ ಕುಟುಂಬಗಳಿಗೆ ವಸತಿ ಯೋಜನೆ ಪ್ರಯೋಜನ
ಜೀವ ಉಳಿಸುವ 26 ಔಷಧಗಳ ಸುಂಕ ಸಂಪೂರ್ಣ ಕಡಿತ
ಕೆಲ ಔಷಧಗಳ ಸುಂಕ ಶೇಕಡಾ 5 ರಷ್ಟು ಕಡಿತ
ಈ ಬಾರಿಯ ಕೇಂದ್ರ ಬಜೆಟ್‌ನಿಂದ ಆಗಲಿರುವ 3 ಮಹತ್ವದ ಬದಲಾವಣೆ ಏನು?
ಸರ್ಕಾರ 87A ಅಡಿಯಲ್ಲಿ ಎರಡನೇ ಮತ್ತು ಮೂರನೇ ಸ್ಲ್ಯಾಬ್‌ಗಳ ತೆರಿಗೆಯನ್ನು ಮನ್ನಾ ಮಾಡುತ್ತದೆ. ಇದರ ಜೊತೆಗೆ, ₹75,000 ಪ್ರಮಾಣಿತ ಕಡಿತ ಸಿಗುತ್ತದೆ. ಈ ರೀತಿಯಾಗಿ, ಉದ್ಯೋಗಿಗಳ 12.75 ಲಕ್ಷ ರೂ.ವರೆಗಿನ ಆದಾಯ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಲಿದೆ. ಆದಾಗ್ಯೂ, ಈ ವಿನಾಯಿತಿ ಕೇವಲ ಸಂಬಳ ಪಡೆಯುವ ವರ್ಗಕ್ಕೆ ಮಾತ್ರ. ಇತರ ಮೂಲಗಳಿಂದ ಆದಾಯ ಪಡೆಯುವವರಿಗೆ ತೆರಿಗೆ ವಿನಾಯಿತಿ 12 ಲಕ್ಷ ರೂ.ವರೆಗೆ ಮಾತ್ರ ಇರುತ್ತದೆ.
ಹೊಸ ತೆರಿಗೆ ಸ್ಲ್ಯಾಬ್‌ಗಳ ಪ್ರಕಾರ, 10 ಲಕ್ಷ ರೂ.ವರೆಗಿನ ಆದಾಯ ಮೇಲೆ ಈಗ 50,000 ರೂ. ಉಳಿತಾಯವಾಗಲಿದೆ. ಉದಾಹರಣೆಗೆ, ಹಳೆಯ ತೆರಿಗೆ ಸ್ಲ್ಯಾಬ್‌ಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯ ಸಂಬಳ 10 ಲಕ್ಷ ರೂ. ಆಗಿದ್ದರೆ, ಅವರ ಮೇಲೆ 50,000 ರೂ. ತೆರಿಗೆ ವಿಧಿಸಲಾಗುತ್ತಿತ್ತು, ಆದರೆ ಇತ್ತೀಚಿನ ತೆರಿಗೆ ಸ್ಲ್ಯಾಬ್‌ಗಳ ಬದಲಾವಣೆಯ ನಂತರ ಅದು ಶೂನ್ಯವಾಗಿದೆ. ಅಂದರೆ, ವಾರ್ಷಿಕ 10 ಲಕ್ಷ ರೂ.ವರೆಗಿನ ಆದಾಯ ಹೊಂದಿರುವವರಿಗೆ ನೇರವಾಗಿ 50,000 ರೂ.ವರೆಗೆ ಉಳಿತಾಯವಾಗಲಿದೆ. ಇದರಲ್ಲಿ 12 ಲಕ್ಷ ರೂ.ವರೆಗಿನ ಸಂಪೂರ್ಣ ವಿನಾಯಿತಿಯ ಅಡಿಯಲ್ಲಿ 40,0000 ರೂ. ಲಾಭ, ಆದರೆ ತೆರಿಗೆ ಸ್ಲ್ಯಾಬ್‌ಗಳ ಬದಲಾವಣೆಯಿಂದ 10,000 ರೂ. ಲಾಭವಾಗಲಿದೆ.
ತೆರಿಗೆದಾರರಿಗೆ ಪ್ರಧಾನಿ ಮೋದಿ ಗುಡ್ ನ್ಯೂಸ್, ₹12 ಲಕ್ಷವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ
