Price Fall:ಎಸಿ, ಫ್ರಿಜ್, ವಾಷಿಂಗ್ ಮಷಿನ್ ಬೆಲೆ ಶೀಘ್ರದಲ್ಲೇ ಇಳಿಕೆ! ಅಗ್ಗವಾಗಲಿವೆಯಾ ಎಲೆಕ್ಟ್ರಾನಿಕ್ ಸಾಮಗ್ರಿಗಳು?

*ಜಾಗತಿಕ ಮಟ್ಟದಲ್ಲಿ ವಸ್ತುಗಳ ಬೆಲೆಯಲ್ಲಿ ಇಳಿಕೆ
*ಕಚ್ಚಾ ಸಾಮಗ್ರಿಗಳ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಫ್ರಿಜ್, ಎಸಿ, ವಾಷಿಂಗ್ ಮಷಿನ್ ಬೆಲೆ ತಗ್ಗುವ ಸಾಧ್ಯತೆ
*ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಒಳ್ಳೆಯ ಡಿಸ್ಕೌಂಟ್ ಸಿಗೋ ನಿರೀಕ್ಷೆ 
 

Fridge AC Washing Machine Prices May Come Down As Commodity Rates Cooling Off

Business Desk: ಆರ್ಥಿಕ ಹಿಂಜರಿಕೆ (recession) ಭೀತಿಯಿಂದ ಜಾಗತಿಕ ಮಟ್ಟದಲ್ಲಿ ವಸ್ತುಗಳ ಬೆಲೆಗಳಲ್ಲಿ ಈಗ ಇಳಿಕೆ ಕಂಡುಬರುತ್ತಿರುವ ಬೆನ್ನಲ್ಲೇ ಫ್ರಿಜ್ (fridge), ಎಸಿ (AC), ಮೈಕ್ರೋವೇವ್ಸ್ ( microwaves) ಹಾಗೂ ವಾಷಿಂಗ್ ಮಷಿನ್ ಗಳ (washing machines) ಬೆಲೆಗಳಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಉತ್ಪಾದನಾ ವೆಚ್ಚಗಳು ತಗ್ಗುತ್ತಿರುವ ಕಾರಣ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಗಳು ನಿರ್ಧಾರ ಕೈಗೊಂಡ ಬಳಿಕ ಬೆಲೆಯಲ್ಲಿ ಇಳಿಕೆಯಾಗೋ ಸಾಧ್ಯತೆಯಿದೆ.

ಕಚ್ಚಾ ಸಾಮಗ್ರಿಗಳು (raw material) ದುಬಾರಿಯಾಗಿವೆ ಎಂಬ ಕಾರಣಕ್ಕೆ ಇತ್ತೀಚೆಗೆ ಕಂಪನಿಗಳು ವಿವಿಧ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ್ದವು ಕೂಡ. ರಷ್ಯಾ-ಉಕ್ರೇನ್ (Russia-Ukraine) ಯುದ್ಧದ ಹಿನ್ನೆಲೆಯಲ್ಲಿ ಬಹುತೇಕ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದವು. ಆದ್ರೆ ಈಗ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಈ ವರ್ಷದ ಏಪ್ರಿಲ್ ಗೆ ಹೋಲಿಸಿದ್ರೆ ತಾಮ್ರ (copper) ಈಗ ಶೇ.21ರಷ್ಟು ಅಗ್ಗವಾಗಿದೆ. ಹಾಗೆಯೇ ಉಕ್ಕು ( steel) ಹಾಗೂ ಅಲ್ಯುಮಿನಿಯಂ (aluminium) ಬೆಲೆಗಳಲ್ಲಿ ಕ್ರಮವಾಗಿ  ಶೇ.19 ಹಾಗೂ ಶೇ.36ರಷ್ಟು ಇಳಿಕೆಯಾಗಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ (ICICI Securities) ಸಂಸ್ಥೆಯ ಇತ್ತೀಚಿಗಿನ ವರದಿ ಹೇಳಿದೆ. ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿರೋದು ಕಂಪನಿಗಳ ಲಾಭದ ಮಟ್ಟವನ್ನು ಕೂಡ ಹೆಚ್ಚಿಸಲಿದೆ. ಇದ್ರಿಂದ ಹಣದುಬ್ಬರವನ್ನು (Inflation) ನಿಯಂತ್ರಿಸಲು ಸಾಧ್ಯವಾಗಲಿದೆ.

Wheat Flour Export:ಗೋಧಿ ಹಿಟ್ಟು,ರವೆ, ಮೈದಾ ರಫ್ತಿಗೆ ನಿರ್ಬಂಧ; ಬೆಲೆ ಇಳಿಕೆ ಆಗುತ್ತಾ?

ಲಾಭದ ಮಟ್ಟ ಹೆಚ್ಚಿದಂತೆ ಎಸಿ (AC), ಫ್ರಿಜ್ (Fridge), ಮೈಕ್ರೋವೇವ್ಸ್ ( microwaves) ಹಾಗೂ ವಾಷಿಂಗ್ ಮಷಿನ್ (washing machine) ಉತ್ಪಾದಕರು ಜಾಹೀರಾತು ಪ್ರಯತ್ನಗಳನ್ನು ಹೆಚ್ಚಿಸಲಿದ್ದಾರೆ ಹಾಗೂ ಗ್ರಾಹಕರಿಗೆ ಒಳ್ಳೆಯ ಡಿಸ್ಕೌಂಟ್ ಗಳನ್ನು (Discounts) ಕೂಡ ನೀಡಲಿದ್ದಾರೆ. ಈ ರೀತಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಪರಿಸ್ಥಿತಿಯು ಈ ವರ್ಷದ ಮಧ್ಯ ಭಾಗದಲ್ಲಿ ಘಟಿಸುವ ಸಾಧ್ಯತೆಯಿದೆ ಎನ್ನುತ್ತಾರೆ ತಜ್ಞರು. ಅದರಲ್ಲೂ ಹಬ್ಬಗಳ ಸೀಸನ್ ಗೆ ಇನ್ನು ಕೆಲವೇ ತಿಂಗಳು ಬಾಕಿಯಿದ್ದು, ಈ ಸಮಯದಲ್ಲಿ ಕಂಪನಿಗಳು ಡಿಸ್ಕೌಂಟ್ ಘೋಷಿಸುವ ಇಲ್ಲವೆ ಬೆಲೆ ಇಳಿಕೆ ಮಾಡುವ ಸಾಧ್ಯತೆಯಿದೆ.

ಫೆಬ್ರವರಿ ತಿಂಗಳ ಅಂತ್ಯದಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ಬಳಿಕ ಜಾಗತಿಕ ಆರ್ಥಿಕತೆಯಲ್ಲಿ ಹಲವು ದಶಕಗಳಲ್ಲೇ ಅತ್ಯಧಿಕ ಮಟ್ಟದ ಹಣದುಬ್ಬರ ಕಾಣಿಸಿಕೊಂಡಿದೆ. ಪರಿಣಾಮ ಆರ್ಥಿಕ ಬೆಳವಣಿಗೆ ನಿಧಾನವಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ನಿರ್ಬಂಧದ ಕಾರಣಕ್ಕೆ ಕಚ್ಚಾ ತೈಲ ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಆಹಾರ ಧಾನ್ಯಗಳ ಬೆಲೆ ಕೂಡ ಗಗನಕ್ಕೇರಿದೆ. 

ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಕೂಡ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಣದುಬ್ಬರ ಕೂಡ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದೆ. ಈಗಾಗಲೇ ಕೇಂದ್ರ ಸರ್ಕಾರ ಬೆಲೆಯೇರಿಕೆ ತಡೆಗೆ ಗೋಧಿ, ಗೋಧಿ ಹಿಟ್ಟು ಸೇರಿದತೆ ಕೆಲವು ಉತ್ಪನ್ನಗಳ ರಫ್ತಿನ ಮೇಲೆ ನಿರ್ಬಂಧ ವಿಧಿಸಿದೆ. ದೇಶದ ಆಹಾರ ಭದ್ರತೆ ಹಿತದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. 

ಎಣ್ಣೆ ಪ್ರಿಯರಿಗೊಂದು ಕಹಿ ಸುದ್ದಿ: ನಾಳೆಯಿಂದ ಮದ್ಯದಂಗಡಿ ಬಂದ್‌..!

ಭಾರತದಲ್ಲಿ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.7.04ರಷ್ಟಿತ್ತು. ಏಪ್ರಿಲ್ ನಲ್ಲಿ ಇದು ಶೇ.7.79ರಷ್ಟು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿತ್ತು. ಏಪ್ರಿಲ್ ಗೆ ಹೋಲಿಸಿದರೆ ಮೇನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದ್ದರೂ ಆರ್ ಬಿಐನ ಸಹನಾ ಮಟ್ಟವಾದ ಶೇ.2-6ಕ್ಕಿಂತ ಹೆಚ್ಚಿದೆ. 
ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ ಪ್ರಾರಂಭದಲ್ಲಿ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ ಏರಿಕೆ ಮಾಡಿತ್ತು. ಇದಕ್ಕೂ ಮುನ್ನ ಮೇನಲ್ಲಿ ಆರ್ ಬಿಐ (RBI) ತುರ್ತು ಹಣಕಾಸು ನೀತಿ ಸಮಿತಿ (MPC) ಸಭೆ ನಡೆಸಿ ರೆಪೋ ದರವನ್ನು  40 ಬೇಸಿಸ್ ಪಾಯಿಂಟ್ ಹೆಚ್ಚಿಸಿತ್ತು. 
 

Latest Videos
Follow Us:
Download App:
  • android
  • ios