ನೀತಾ ಅಂಬಾನಿ ಕೈಗೆ ಮುತ್ತಿಟ್ಟ ಫ್ರೆಂಚ್ ಅಧ್ಯಕ್ಷ; ಅಂಬಾನಿ ಪರ ಬ್ಯಾಟ್ ಬೀಸಿದ ನೆಟ್ಟಿಗರು!
ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಸದ್ಯ ಪ್ಯಾರಿಸ್ ನಲ್ಲಿದ್ದಾರೆ. ಒಲಿಂಪಿಕ್ಸ್ ಸಮಿತಿ ಸದಸ್ಯೆಯಾಗಿ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿರುವ ನೀತಾ ಅಂಬಾನಿಗೆ ಫ್ರಾನ್ಸ್ ನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ.
ಮಗ ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ ಎಲ್ಲರ ಕೇಂದ್ರಬಿಂದುವಾಗಿದ್ದ ನೀತಾ ಅಂಬಾನಿ ಸದ್ಯ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನೀತಾ ಅಂಬಾನಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ತಲುಪಿದ್ದು, ಪ್ಯಾರಿಸ್ ನಲ್ಲಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್, ನೀತಾ ಅಂಬಾನಿಯವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ರು. ಅವರ ಕೈ ಚುಂಬಿಸಿ ಅವರನ್ನು ಬರಮಾಡಿಕೊಂಡಿದ್ದಾರೆ. ನೀತಾ ಅಂಬಾನಿ ಹಾಗೂ ಇಮ್ಯಾನುಯೆಲ್ ಮ್ಯಾಕ್ರೋನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಟ್ರೋಲರ್ ಬಾಯಿಗೆ ಆಹಾರವಾಗಿದೆ. ನೀತಾ ಕೈಗೆ ಮ್ಯಾಕ್ರೋನ್ ಚುಂಬಿಸಿದ್ದು, ನೆಟ್ಟಿಗರಿಗೆ ಸರಿಕಂಡಿಲ್ಲ. ಬಹುತೇಕರು ಮುಖೇಶ್ ಅಂಬಾನಿ ಪರ ಬ್ಯಾಟ್ ಬೀಸಿದ್ದಾರೆ.
ಫೋಟೋ (Photo) ದಲ್ಲಿ ಎಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron), ನೀತಾ ಅಂಬಾನಿ (Nita Ambani) ಯವರ ಮುಂದೆ ನಮಸ್ಕರಿಸುತ್ತಿರುವುದನ್ನು ಮತ್ತು ಅವಳ ಕೈಗೆ ಮುತ್ತಿಡುತ್ತಿರುವುದನ್ನು ಕಾಣಬಹುದು. ಫ್ರಾನ್ಸ್ ಪದ್ಧತಿಗಳ ಪ್ರಕಾರ, ಮಹಿಳೆಯರಿಗೆ ಇದೇ ರೀತಿಯಲ್ಲಿ ಗೌರವವನ್ನು ನೀಡಲಾಗುತ್ತದೆ. ಆದ್ರೆ ನೆಟ್ಟಿಗರು ಇದಕ್ಕೆ ಕೆಂಡಕಾರಿದ್ದಾರೆ.
2 ರಾಜ್ಯಕ್ಕೆ ತಟ್ಟೆ ತುಂಬಾ ಜಿಲೇಬಿ, ಪಕೋಡಾ, ಉಳಿದ ರಾಜ್ಯಗಳಿಗೆ ಖಾಲಿ ತಟ್ಟೆ: ಖರ್ಗೆ
ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ ವಿಡಿಯೋ ಒಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಮದುವೆ ಸಮಾರಂಭದಲ್ಲಿ ಮುಖೇಶ್ ಅಂಬಾನಿ, ನೀತಾ ಅಂಬಾನಿ ಕೈ ಹಿಡಿದಿದ್ದರೆ, ನೀತಾ ಕೈ ಬಿಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಈ ವಿಡಿಯೋ ಹಾಗೂ ಈಗಿನ ಫೋಟೋವನ್ನು ನೆಟ್ಟಿಗರು ಹೋಲಿಸಿದ್ದಾರೆ. ಗಂಡನ ಕೈ ಬಿಡಿಸಿಕೊಳ್ಳುವ ನೀತಾ ಬೇರೆಯವರಿಗೆ ಕೈ ಕೊಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೀತಾಗೆ, ಮುಖೇಶ್ ಅಂಬಾನಿ ಬಿಟ್ಟು ಎಲ್ಲರೂ ಇಷ್ಟವಾಗ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.
ಅದೇನೇ ಇರಲಿ, ನೀತಾ ಅಂಬಾನಿ ಪ್ಯಾರಿಸ್ ಗೆ ಹೋಗಲು ಮಹತ್ವದ ಉದ್ದೇಶವಿದೆ. ಈ ವರ್ಷ, ಒಲಿಂಪಿಕ್ಸ್ 2024 ಅನ್ನು ಪ್ಯಾರಿಸ್‌ನಲ್ಲಿ ಆಯೋಜಿಸಲಾಗಿದೆ. ಶುಕ್ರವಾರ ಒಲಿಂಪಿಕ್ಸ್ ಶುರುವಾಗಲಿದ್ದು, ಉದ್ಘಾಟನಾ ಸಮಾರಂಭದ ಮೊದಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ನೀತಾ ಅಂಬಾನಿ ಕೂಡ ಭಾಗವಾಗಿದ್ದಾರೆ. ಲೂಯಿ ವಿಟಾನ್ ಫೌಂಡೇಶನ್‌ನಲ್ಲಿ 142 ನೇ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ನೀತಾ ಅಂಬಾನಿ ಪಾಲ್ಗೊಂಡಿದ್ದರು. ನೀತಾ ಅಂಬಾನಿ ಗೋಲ್ಡನ್ ವರ್ಕ್‌ನೊಂದಿಗೆ ಮೆರೂನ್ ಸೂಟ್ ಧರಿಸಿದ್ದರು. ವಿದೇಶಿ ರಾಯಲ್ ಸ್ವಾಗತ ಶೈಲಿಯ ಪ್ರಕಾರ ನೀತಾ ಅಂಬಾನಿಗೆ ಸ್ವಾಗತ ಸಿಕ್ಕಿತು.
ಇದಾದ ನಂತ್ರ ಮತದಾನ ನಡೆದಿದೆ. ನೀತಾ ಅಂಬಾನಿ, ಅಂತಾರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 142ನೇ ಸಭೆಯಲ್ಲಿ ಅವರು ಮರು ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ 2016ರಲ್ಲಿ ಅವರು ಸದಸ್ಯೆಯಾಗಿ ಮೊದಲ ಬಾರಿ ಆಯ್ಕೆಯಾಗಿದ್ದರು. ಈ ಮೂಲಕ ಈ ಸಮಿತಿಗೆ ಸದಸ್ಯೆಯಾದ ಭಾರತದ ಮೊದಲ ಮಹಿಳೆ ಎನ್ನಿಸಿಕೊಂಡಿದ್ದರು. ಜುಲೈ 26ರಂದು ನಡೆಯುವ ಒಲಂಪಿಕ್ಸ್ ಉದ್ಘಾಟನಾ ಕಾರ್ಯಕ್ರಮದವರೆಗೂ ನೀತಾ ಅಂಬಾನಿ ಪ್ಯಾರಿಸ್ ನಲ್ಲಿರಲಿದ್ದಾರೆ. ಅವರು ಈ ಸಮಯದಲ್ಲಿ ಒಲಿಂಪಿಕ್ಸ್ ಗಾಗಿ ಇಂಡಿಯಾ ಹೌಸ್ ನಿರ್ಮಾಣ ಮಾಡಿದ್ದಾರೆ.
ನೀತಾ ಅಂಬಾನಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವುದು ಹೆಮ್ಮೆಯ ವಿಷ್ಯ. ಅವರು ಭಾರತದ ಕೀರ್ತಿ ಪತಾಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ ಎಂಬ ಅಭಿಪ್ರಾಯ ಅನೇಕರಿಂದ ಕೇಳಿ ಬಂದಿದೆ. ಇದು ದೇಶ ಹೆಮ್ಮೆಪಡುವ ವಿಷ್ಯ.
ಇದು ಕೋಟ್ಯಧಿಪತಿಗಳ ಮದ್ಯವಂತೆ..! ಜಗತ್ತಿನ 10 ದುಬಾರಿ ಆಲ್ಕೋಹಾಲ್‌ಗಳ ಲಿಸ್ಟ್!
ನೀತಾ ಅಂಬಾನಿ ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪಕಿಯಾಗಿ ಲಕ್ಷಾಂತರ ಮಕ್ಕಳಿಗೆ ನೆರವಾಗಿದ್ದಾರೆ. ಸಂಸ್ಥೆ ದೇಶದಾದ್ಯಂತ ಕ್ರೀಡೆಗೆ ಮಹತ್ವ ನೀಡುತ್ತಿದೆ. ಎಲ್ಲೆಡೆ ಕ್ರೀಡೆಗೆ ಪ್ರೋತ್ಸಾಹ ನೀಡಲು ಮತ್ತು ಉಪಕರಣಗಳನ್ನು ಒದಗಿಸುವ ಪ್ರಯತ್ನ ನಡೆಸುತ್ತಿದೆ.