ಇದು ಕೋಟ್ಯಧಿಪತಿಗಳ ಮದ್ಯವಂತೆ..! ಜಗತ್ತಿನ 10 ದುಬಾರಿ ಆಲ್ಕೋಹಾಲ್‌ಗಳ ಲಿಸ್ಟ್!
ಆಕರ್ಷಕ ಕರಕುಶಲ ವಿನ್ಯಾಸ, ಚಿನ್ನದಿಂದ ಅಲಂಕೃತ, ವಜ್ರಗಳನ್ನು ಫಿಟ್ ಮಾಡಲಾದ ಕೋಟ್ಯಂತರ ವೆಚ್ಚದ ಈ ಆಲ್ಕೋಹಾಲ್ ಬಾಟಲ್‌ಗಳು ಎಲ್ಲರಿಗೂ ಅಲ್ಲ. ಕೋಟ್ಯಧಿಪತಿಗಳು ಮಾತ್ರವೇ ಇದನ್ನು ಖರೀದಿಸಬಹುದು. ಇವುಗಳನ್ನು ಸೇವನೆ ಮಾಡಲು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬರೀ ಲಕ್ಷಗಳಿದ್ದರೆ ಸಾಲೋದಿಲ್ಲ.
ದಿವಾ ವೋಡ್ಕಾ (Diva Vodka): ವಿಶ್ವದ ಅತ್ಯಂತ ದುಬಾರಿ ಆಲ್ಕೋಹಾಲ್‌ಗಳ ಲಿಸ್ಟ್‌ನಲ್ಲಿ 10ನೇ ಸ್ಥಾನದಲ್ಲಿರುವುದು ದಿವಾ ವೋಡ್ಕಾ. ಟ್ರಿಪಲ್ ಡಿಸ್ಟಿಲೇಷನ್ ಪ್ರಕ್ರಿಯೆ ಇದರಲ್ಲಾಗುತ್ತದೆ. ಐಸ್, ನಾರ್ಡಿಕ್ ಬರ್ಚ್ ಇದ್ದಿಲು ಮತ್ತು ವಜ್ರಗಳ ಮೂಲಕ ಫಿಲ್ಟರೇಷನ್ ನಡೆಯುತ್ತದೆ. ಇದರ ಬೆಲೆ ಒಂದು ಬಾಟಲ್‌ಗೆ 8.37 ಕೋಟಿ ರೂಪಾಯಿ.
ಮೆಂಡಿಸ್ ಕೊಕನಟ್ ಬ್ರ್ಯಾಂಡಿ (Mendis Coconut Brandy): ಇದರ ಬೆಲೆ ಕೂಡ ಒಂದು ಬಾಟಲ್‌ಗೆ 8.37 ಕೋಟಿ ರೂಪಾಯಿ. ಮೆಂಡಿಸ್ ತೆಂಗಿನಕಾಯಿ ಬ್ರಾಂಡಿ ಶ್ರೀಲಂಕಾದ ತೆಂಗಿನಕಾಯಿ ಸ್ಪಿರಿಟ್‌ನ ವಿಶಿಷ್ಟ ಮಿಶ್ರಣವಾಗಿದ್ದು, ಓಕ್ ಪೀಪಾಯಿಗಳಲ್ಲಿ ಪಕ್ವತೆಗಾಗಿ ವರ್ಷಗಟ್ಟಲೆ ಇರಿಸಲಾಗಿರುತ್ತದೆ. ರತ್ನದ ಕಲ್ಲುಗಳಿಂದ ಅಲಂಕರಿಸಲ್ಪಟ್ಟ ಕೈಯಿಂದ ಮಾಡಿದ ಸ್ಫಟಿಕ ಡಿಕಾಂಟರ್‌ನಲ್ಲಿ ಪ್ಯಾಕ್ ಮಾಡಲಾಗುತ್ತದೆ.
ರುಸ್ಸೋ-ಬಾಲ್ಟಿಕ್ ವೋಡ್ಕಾ (Russo-Baltique Vodka): ಈ ವೋಡ್ಕಾದ ಒಂದು ಬಾಟಲಿಯ ಬೆಲೆ 10.88 ಕೋಟಿ ರೂಪಾಯಿ. ರಷ್ಯಾದ ಆಟೋಮೋಟಿವ್ ಮತ್ತು ವೋಡ್ಕಾ ತಯಾರಿಕೆಯ ಶ್ರೇಷ್ಠತೆಯ ಸಂಕೇತ ಇದಾಗಿದೆ. ರುಸ್ಸೋ-ಬಾಲ್ಟಿಕ್ ವೋಡ್ಕಾವು ರಷ್ಯಾದ ಸಾಮ್ರಾಜ್ಯಶಾಹಿ ಹೋಲುವ ಬಾಟಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಡಿಕ್ಟಡಾರ್ ಎಂ-ಸಿಟಿ ಗೋಲ್ಡನ್ ಸಿಟೀಸ್ ಸಿರೀಸ್ (Dictador M-City Golden Cities Series): ಪ್ರತಿ ಬಾಟಲಿಗೆ 12.55 ಕೋಟಿ ರೂಪಾಯಿ. ಡಿಕ್ಟಡಾರ್ ಎಂ-ಸಿಟಿ ಗೋಲ್ಡನ್ ಸಿಟೀಸ್ ಸರಣಿ ರಮ್ ಬಾಟಲಿಗಳನ್ನು ಚಿನ್ನ ಮತ್ತು ಅಮೂಲ್ಯ ರತ್ನಗಳಿಂದ ವಿನ್ಯಾಸ ಮಾಡಲಾಗಿದೆ.
ದಿ ಮಕಲನ್ ವಲೇರಿಯೊ ಅದಾಮಿ 1926 ( The Macallan Valerio Adami 1926): ಪ್ರತಿ ಬಾಟಲಿಯ ಬೆಲೆ 15.90 ಕೋಟಿ ರೂಪಾಯಿ. ಮಕಲನ್ ವ್ಯಾಲೆರಿಯೊ ಅದಾಮಿ ತನ್ನ ಅಪರೂಪತನಕ್ಕೆ ಹೆಸರುವಾಸಿಯಾಗಿದೆ.ಇಲ್ಲಿಯವರೆಗೂ ಕೇವಲ 12 ಬಾಟಲ್ ಅನ್ನು ಮಾತ್ರವೇ ಉತ್ಪಾದನೆ ಮಾಡಲಾಗಿದೆ. ವ್ಯಾಲೆರಿಯೊ ಅದಾಮಿ ಆರ್ಟ್‌ವರ್ಕ್ ಈ ಬಾಟಲಿಗಳಲ್ಲಿದೆ. ವಿಸ್ಕಿಯ ಜಗತ್ತಿನಲ್ಲಿ ಇದಕ್ಕಿರುವ ಮೌಲ್ಯವೇ ಬೇರೆ.
ಹೆನ್ರಿ IV ಡುಡೋಗ್ನಾನ್ ಹೆರಿಟೇಜ್ ಕಾಗ್ನ್ಯಾಕ್ ಗ್ರಾಂಡೆ ಷಾಂಪೇನ್ (Henry IV Dudognon Heritage Cognac Grande Champagne): ಹೆನ್ರಿ IV ಅವರ ಪ್ರದೇಶದಲ್ಲಿಯೇ ಓಕ್ ಮರದಿಂದ ಮಾಡಲಾದ ಬ್ಯಾರಲ್‌ನಲ್ಲಿ ಶತಮಾನಗಳ ಕಾಲ ಇಷ್ಟು ಸಂಸ್ಕರಿಸಲಾಗಿದೆ. ಇದರ ಪ್ರತಿ ಬಾಟಲ್‌ನ ಬೆಲೆ 15.90 ಕೋಟಿ ರೂಪಾಯಿ. 24-ಕ್ಯಾರೆಟ್ ಚಿನ್ನ ಮತ್ತು ಸ್ಟರ್ಲಿಂಗ್ ಪ್ಲಾಟಿನಂ ಅಲಂಕಾರ ಇದಕ್ಕಿದೆ.
ಟಕಿಲಾ ಲೇ 925 ಡೈಮಂಟೆ (Tequila Ley 925 Diamante): ಇದರ ಪ್ರತಿ ಬಾಟಲ್‌ನ ಬೆಲೆ 29.30 ಕೋಟಿ ರೂಪಾಯಿ. ಟಕಿಲಾ ಲೇ 925 ಡೈಮಂಟೆ ಕೇವಲ ಸ್ಪಿರಿಟ್ ಅಲ್ಲ ಇದು ಮಾಸ್ಟರ್ ಪೀಸ್. ಅತ್ಯಂತ ಕಾಳಜಿಯಿಂದ ವಜ್ರ-ಹೊದಿಕೆಯ ಲೋಗೋವನ್ನು ಒಳಗೊಂಡಿರುವ ಬಿಳಿ ಚಿನ್ನ ಮತ್ತು ಪ್ಲಾಟಿನಂ ಬಾಟಲಿಯಿಂದ ಇದನ್ನು ಅಲಂಕರಿಸಲಾಗಿದೆ.
ಬಿಲಿಯನೇರ್ ವೋಡ್ಕಾ (Billionaire Vodka): ಹೆಸರೇ ಹೇಳುವಂತೆ ಇದು ಬಿಲಿಯನೇರ್ ವೋಡ್ಕಾ. ಪ್ರತಿ ಬಾಟಲ್‌ನ ಬೆಲೆ 31 ಕೋಟಿ ರೂಪಾಯಿ.ಐಸ್, ನಾರ್ಡಿಕ್ ಬರ್ಚ್ ಇದ್ದಿಲು ಮತ್ತು ಪುಡಿಮಾಡಿದ ವಜ್ರಗಳಿಂದ ಮಾಡಿದ ಮರಳಿನ ಮೂಲಕ ಫಿಲ್ಟರ್ ಮಾಡಲಾಗುತ್ತದೆ. ಪ್ಲಾಟಿನಂ ಮತ್ತು ರೋಢಿಯಮ್ ಬಾಟಲಿಯಲ್ಲಿ ಇದನ್ನು ಅಲಂಕರಿಸಲಾಗುತ್ತದೆ.
ಇಸಾಬೆಲ್ಲಾಸ್ ಇಸ್ಲೇ ವಿಸ್ಕಿ ( Isabella's Islay Whisky): ಇದರ ಪ್ರತಿ ಬಾಟಲಿಯ ಬೆಲೆ 52 ಕೋಟಿ ರೂಪಾಯಿ. ಇಸಾಬೆಲ್ಲಾಳ ಇಸ್ಲೇ ವಿಸ್ಕಿಯು ಅದರ ರುಚಿಗೆ ಮಾತ್ರವಲ್ಲದೆ, 8,500 ವಜ್ರಗಳು ಮತ್ತು 300 ಮಾಣಿಕ್ಯಗಳಿಂದ ಅಲಂಕರಿಸಲ್ಪಟ್ಟ ಡಿಕಾಂಟರ್ ಅನ್ನು ಒಳಗೊಂಡಿದೆ.
ಡಿ'ಅಮಾಲ್ಫಿ ಲಿಮೊನ್‌ಸೆಲ್ಲೊ ಸುಪ್ರೀಮ್ ( D'Amalfi Limoncello Supreme): ಯೆಸ್ ಇದರ ಬೆಲೆ ಕೇಳಿದರೆ ನಿಮಗೆ ನಂಬಲು ಕೂಡ ಕಷ್ಟವಾಗಬಹುದು. ಒಂದು ಬಾಟಲಿ ಡಿ'ಅಮಾಲ್ಫಿ ಲಿಮೊನ್‌ಸೆಲ್ಲೊ ಸುಪ್ರೀಮ್ನ ಬೆಲೆ 368 ಕೋಟಿ ರೂಪಾಯಿ. ಇಟಲಿಯ ಅಮಾಲ್ಫಿ ಕರಾವಳಿಯಿಂದ ನಿಂಬೆ ಸಿಪ್ಪೆಗಳಿಂದ ತುಂಬಿದ ಸಾಂಪ್ರದಾಯಿಕ ನಿಂಬೆ-ಸುವಾಸನೆಯ ಮದ್ಯದ ಈ ಲಿಮೊನ್ಸೆಲ್ಲೊ ಬಾಟಲಿಯನ್ನು ಯುಕೆ ಲಿವರ್‌ಪೂಲ್‌ನಲ್ಲಿ ವಿನ್ಯಾಸಕ ಸ್ಟುವರ್ಟ್ ಹ್ಯೂಸ್ ರಚಿಸಿದ್ದಾರೆ. 13 ಕ್ಯಾರಟ್‌ನ ಮೂರು ವಜ್ರಗಳು ಈ ಬಾಟಲಿಯ ಕುತ್ತಿಗೆಯಲ್ಲ ಅಲಂಕಾರ ಮಾಡಲಾಗಿದೆ. ಅಸರೊದಿಗೆ ಬಾಟಲಿಯ ಮದ್ಯದಲ್ಲಿ 18.5 ಕ್ಯಾರಟ್ ತೂಕದ ಸಿಂಗಲ್ ಕಟ್ ವಜ್ರವಿದೆ.