Asianet Suvarna News Asianet Suvarna News

ದಮ್ಮಯ್ಯ: ಮೋದಿ ಮಾತು ಕೇಳ್ದಿದ್ರೆ ಸಿಂಗ್ ಮಾತಾದ್ರೂ ಕೇಳ್ರಯ್ಯ!

ಕೇಂದ್ರಕ್ಕೆ, ಆರ್‌ಬಿಐ ಗೆ ಪಾಠವಾಗುತ್ತಾ ಡಾ. ಮನಮೋಹನ ಸಿಂಗ್ ಉಲ್ಲೇಖ! ಹಣಕಾಸು ಸಚಿವಾಲಯ ಆರ್‌ಬಿಐ ತಿಕ್ಕಾಟಕ್ಕೆ ಹಿಂದೆಯೇ ಸಲಹೆ ನೀಡಿದ್ದ ಮಾಜಿ ಪ್ರಧಾನಿ! ಪುಸ್ತಕದಲ್ಲಿ ಕೇಂದ್ರ ಮತ್ತು ಆರ್‌ಬಿಐ ಸಂಬಂಧ ಉಲ್ಲೇಖಿಸಿದ್ದ ಡಾ. ಸಿಂಗ್! ಆರ್‌ಬಿಐಗಿಂತ ಹಣಕಾಸು ಸಚಿವಾಲಯವೇ ಶ್ರೇಷ್ಠ ಎಂದಿದ್ದ ಸಿಂಗ್! ವಿತ್ತ ಸಚಿವಾಲಯದ ನಿರ್ದೇಶನದಂತೆ ಆರ್‌ಬಿಐ ಕೆಲಸ ಮಾಡಬೇಕು ಎಂದಿದ್ದ ಸಿಂಗ್

Former PM Manmohan Singh Views on Centre and RBI Relations
Author
Bengaluru, First Published Nov 7, 2018, 10:50 AM IST

ನವದೆಹಲಿ(ನ.7): ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ವೈಮನಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ನಡುವಿನ ಸಂಬಂಧದ ಮಹತ್ವದ ಕುರಿತು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ತಮ್ಮ ಪುಸ್ತಕದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ.

ಸದ್ಯದ ಬೇಗುದಿ ಕುರಿತಂತೆ ಮನಮೋಹನ ಬಹಳ ಹಿಂದೆಯೇ ತಮ್ಮ ಪುತ್ರಿ ಬರೆದಿರುವ ಪುಸ್ತಕದಲ್ಲಿ ಉಲ್ಲೇಖಿಸಿರುವುದು ವಿಶೇಷ. ಈ ಪುಸ್ತಕದಲ್ಲಿ ಡಾ. ಸಿಂಗ್, ಕೇಂದ್ರ ಹಣಕಾಸು ಸಚಿವಾಲಯ ಆರ್‌ಬಿಐ ಗಿಂತ ಶ್ರೇಷ್ಠ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆರ್ಥಿಕ ನೀತಿಯಲ್ಲಿ ಹಣಕಾಸು ಸಚಿವಾಲಯವೇ ಉನ್ನತ ಸಂಸ್ಥೆಯಾಗಿದ್ದು, ಆರ್‌ಬಿಐ ಹಣಕಾಸು ಸಚಿವಾಲಯದ ಮಾತನ್ನು ಕೇಳಬೇಕು ಎಂದು ಡಾ. ಸಿಂಗ್ ಈ ಪುಸ್ತಕದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಆರ್‌ಬಿಐ ಕೇಂದ್ರ ವಿತ್ತ ಸಚಿವಾಲಯದ ನಿರ್ದೇಶನದಂತೆ ಕಾರ್ಯ ನಿರ್ವಹಿಸುವುದು ಉತ್ತಮ ಎಂದಿರುವ ಸಿಂಗ್, ಪರಸ್ಪರ ಹೊಂದಾಣಿಕೆ ಮೂಲಕ ಎರಡೂ ಸಂಸ್ಥೆಗಳು ಮುಂದುವರೆಯುವುದು ಉತ್ತಮ ಎಂಬುದು ಸಿಂಗ್ ಅಭಿಪ್ರಾಯವಾಗಿದೆ.

ಡಾ. ಸಿಂಗ್ ಅವರ ಅಭಿಪ್ರಾಯ ಸದ್ಯ ನಡೆಯುತ್ತಿರುವ ಕೇಂದ್ರ ಮತ್ತು ಆರ್‌ಬಿಐ ನಡುವಿನ ತಿಕ್ಕಾಟಕ್ಕೆ ಮಾರ್ಗದರ್ಶನದಂತಿದೆ. ಆರ್‌ಬಿಐ ಗರ್ವನರ್ ಹಣಕಾಸು ಸಚಿವಾಲಯದ ನಿರ್ದೇಶನಗಳನ್ನು ಪಾಲಿಸಬೇಕು ಎಂಬುದು ಮಾಜಿ ಪ್ರಧಾನಿ ಅವರ ಅಭಿಮತ.

Follow Us:
Download App:
  • android
  • ios