Asianet Suvarna News Asianet Suvarna News

ಎಸ್ ಬಿಐ ಖಾತೆ ಯೂಸರ್ ನೇಮ್, ಪಾಸ್ ವರ್ಡ್ ಮರೆತು ಹೋಗಿದೆಯಾ? ಡೋಂಟ್ ವರಿ, ಹೀಗೆ ಮಾಡಿ

ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್ ಸೇವೆ ಬಳಸಿಕೊಳ್ಳಲು ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಅಗತ್ಯ. ಒಂದು ವೇಳೆ ನಿಮಗೆ ಯೂಸರ್ ನೇಮ್ ಮರೆತು ಹೋಗಿದ್ರೆ ಮರಳಿ ಪಡೆಯಲು ಬ್ಯಾಂಕಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಆನ್ ಲೈನ್ ನಲ್ಲೇ ಪಡೆಯಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ. 

Forgot SBI username and password Here is how you can recover both
Author
First Published Dec 27, 2022, 1:07 PM IST

Business Desk:ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಗ್ರಾಹಕರಿಗೆ ಅನೇಕ ವಿಧದ ಇಂಟರ್ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಆನ್ ಲೈನ್ ಬ್ಯಾಂಕಿಂಗ್ ಸೇವೆಗಳ ಮೂಲಕ ಯಾವುದೇ ತೊಂದರೆಯಿಲ್ಲದೆ ಗ್ರಾಹಕರು ವಹಿವಾಟುಗಳನ್ನು ನಡೆಸಬಹುದಾಗಿದೆ. ಈ ಸೇವೆಯಿಂದ ಗ್ರಾಹಕರು ನಗದಿಗಾಗಿ ಬ್ಯಾಂಕ್ ಅಥವಾ ಎಟಿಎಂಗೆ ಹೋಗಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಪಾವತಿ ಮಾಡಬಹುದಾಗಿದೆ. ಆನ್ ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ನಿಮಗೆ ನೀಡಿರುವ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಬಳಸಿದ್ರೆ ಆಯ್ತು.  ಕೆಲವು ಸಂದರ್ಭಗಳಲ್ಲಿ ಯೂಸರ್ ನೇಮ್ ಅಥವಾ ಪಾಸ್ ವರ್ಡ್ ಮರೆತು ಹೋಗಿ ನೀವು ಸಮಸ್ಯೆ ಎದುರಿಸಿರಬಹುದು. ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಇಲ್ಲದಿದ್ರೆ ನೀವು ಬ್ಯಾಂಕ್ ಖಾತೆಯಿಂದ ವಹಿವಾಟು ನಡೆಸಲು ಸಾಧ್ಯವಾಗೋದಿಲ್ಲ. ಇಂಥ ಸಮಯದಲ್ಲಿ ಕೆಲವು ಸರಳವಾದ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಯೂಸರ್ ನೇಮ್ ಮರಳಿ ಪಡೆಯಬಹುದು ಹಾಗೂ ಪಾಸ್ ವರ್ಡ್ ಅನ್ನು ರೀಸೆಟ್ ಮಾಡಬಹುದು. 

ಯೂಸರ್ ನೇಮ್ ಮರಳಿ ಪಡೆಯುವುದು ಹೇಗೆ?
*ಮೊದಲಿಗೆ ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್ ಅಧಿಕೃತ ವೆಬ್ ಸೈಟ್ https://www.onlinesbi.com ಭೇಟಿ ನೀಡಿ. 
*ನಿಮ್ಮ ಯೂಸರ್ ನೇಮ್ ಮರಳಿ ಪಡೆಯಲು 'Forgot Username link' ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಪಾಸ್ ಬುಕ್ ನಲ್ಲಿ ನಮೂದಿಸಿರುವ CISF ಸಂಖ್ಯೆ ನಮೂದಿಸಿ. 
*ದೇಶವನ್ನು ಆಯ್ಕೆ ಮಾಡಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ.
*ಕ್ಯಾಪ್ಚ ಕೋಡ್ ನಮೂದಿಸಿ ಮಾಹಿತಿಗಳನ್ನು ಸಲ್ಲಿಕೆ ಮಾಡಿ.
*ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ ನಮೂದಿಸಿ. 'Confirm' ಬಟನ್ ಮೇಲೆ ಕ್ಲಿಕ್ ಮಾಡಿ.
*ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಯೂಸರ್ ನೇಮ್ ಬರುತ್ತದೆ. 

ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡೋದು ಹೇಗೆ? ಇದ್ರಿಂದ ಏನ್ ಲಾಭ?

ಪಾಸ್ ವರ್ಡ್ ರೀಸೆಟ್ ಮಾಡಲು ಹೀಗೆ ಮಾಡಿ
*ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ. ಆ ಬಳಿಕ ಎಡ ಭಾಗದಲ್ಲಿರುವ  My Accounts & Profile ಅಯ್ಕೆ ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಲಾಗಿನ, ಖಾತೆ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ, ಜನ್ಮದಿನಾಂಕ ಮುಂತಾದ ಮಾಹಿತಿಗಳನ್ನು ನೀಡಬೇಕು.
*ಕ್ಯಾಪ್ಚ ಕೋಡ್ ನಮೂದಿಸಿ. ಆ ಬಳಿಕ 'Submit' ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ ನಮೂದಿಸಿ. 'Confirm' ಬಟನ್ ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಪಾಸ್ ವರ್ಡ್ ರೀಸೆಟ್ ಮಾಡಲು ಮೂರು ಮಾರ್ಗಗಳಿರುತ್ತವೆ. ನಿಮ್ಮ ಎಟಿಎಂ ಕಾರ್ಡ್ ಮಾಹಿತಿ, ಪ್ರೊಫೈಲ್ ಪಾಸ್ ವರ್ಡ್ ಹಾಗೂ ನಿಮ್ಮ ಎಟಿಎಂ ಕಾರ್ಡ್ ಅಥವಾ ಪ್ರೊಫೈಲ್ ಪಾಸ್ ವರ್ಡ್ ಬಳಸದೆ ಪಾಸ್ ವರ್ಡ್ ರೀಸೆಟ್ ಮಾಡುವುದು. 
*ನೀವು ಯಾವ ಆಯ್ಕೆ ಬಯಸುತ್ತೀರೋ ಅದನ್ನು ಆಯ್ಕೆ ಮಾಡಿ ಆ ಬಳಿಕ ‘Submit'ಬಟನ್ ಮೇಲೆ ಕ್ಲಿಕ್ ಮಾಡಿ. 

2023ನೇ ಸಾಲಿನಲ್ಲಿ ತೆರಿಗೆ ಉಳಿತಾಯದ ಪ್ಲ್ಯಾನ್ ಹೇಗಿರಬೇಕು? ಯಾವ ಯೋಜನೆಯಲ್ಲಿ ಹೂಡಿಕೆ ಮಾಡ್ಬಹುದು?

ಆನ್ ಲೈನ್ ನಲ್ಲೇ ಶಾಖೆ ಬದಲಾವಣೆ
ನೀವು ಖಾತೆ ಹೊಂದಿರುವ ಎಸ್ ಬಿಐ ಶಾಖೆ  ಬದಲಾಯಿಸಲು ಬಯಸಿದ್ರೆ ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳ ಮೂಲಕ ಮನೆಯಿಂದಲೇ ಈ ಕೆಲಸ ಮಾಡಿ ಮುಗಿಸಬಹುದು. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಖಾತೆಯನ್ನು ಇನ್ನೊಂದು ಶಾಖೆಗೆ ಬದಲಾಯಿಸಲು ನಿಮಗೆ ಆ ಶಾಖೆಯ ಕೋಡ್ ಗೊತ್ತಿರೋದು ಅಗತ್ಯ. ಹಾಗೆಯೇ ಬ್ಯಾಂಕಿನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿ ಆಗಿರೋದು ಅಗತ್ಯ. ಆನ್ ಲೈನ್  ಮೂಲಕವೇ ಬ್ಯಾಂಕ್ ಶಾಖೆ ಬದಲಾವಣೆ ಮಾಡೋದ್ರಿಂದ ಬ್ಯಾಂಕಿಗೆ ಓಡಾಟ ನಡೆಸಬೇಕಾದ ಅಗತ್ಯವಿಲ್ಲ. ಆನ್ ಲೈನ್ ಪ್ರಕ್ರಿಯೆ ಹೊರತಾಗಿ ಯೋನೋ ಅಪ್ಲಿಕೇಷನ್ ಅಥವಾ ಯೋನೋ ಲೈಟ್ ಮೂಲಕ ನೀವು ನಿಮ್ಮ ಶಾಖೆಯನ್ನು ಬದಲಾಯಿಸಬಹುದು.


 

Follow Us:
Download App:
  • android
  • ios