Asianet Suvarna News Asianet Suvarna News

ಮತ್ತೆ ಭಾರತದ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ; ಒಂದು ವರ್ಷದಲ್ಲಿ ಹೆಚ್ಚಾಗಿದ್ದೆಷ್ಟು ಆಸ್ತಿ?

Forbes India's Rich List: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಭಾರತದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಫೋರ್ಬ್ಸ್ ವರದಿಯ ಪ್ರಕಾರ ಅವರ ಒಟ್ಟು ಆಸ್ತಿ 108.3 ಬಿಲಿಯನ್ ಡಾಲರ್

Forbes richest Indian tycoons List release mukesh ambani is number one mrq
Author
First Published Oct 10, 2024, 11:52 AM IST | Last Updated Oct 10, 2024, 11:52 AM IST

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೆ ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್ ಭಾರತದ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಸ್ಥಾನದಲ್ಲಿ ಮುಕೇಶ್ ಅಂಬಾನಿ ಅವರ ಹೆಸರಿದೆ. ಫೋರ್ಬ್ಸ್ ವರದಿ ಪ್ರಕಾರ, ಮುಕೇಶ್ ಅಂಬಾನಿ ಅವರ ಒಟ್ಟು ಆಸ್ತಿ 108.3 ಬಿಲಿಯನ್ ಡಾಲರ್ ಆಗಿದೆ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮುಕೇಶ್ ಅಂಬಾನಿ, ವಿಶ್ವದಲ್ಲಿ 13ನೇ ಸ್ಥಾನದಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮುಕೇಶ್ ಅಂಬಾನಿ ಆಸ್ತಿ 27.5 ಬಿಲಿಯನ್ ಡಾಲರ್ ನಷ್ಟು ಹೆಚ್ಚಳವಾಗಿದೆ. ರಿಲಯನ್ಸ್ ಹೂಡಿಕೆದಾರರಿಗೆ ದೀಪಾವಳಿ ಬೋನಸ್ ಷೇರುಗಳನ್ನು ಘೋಷಿಸಿದ ಬಳಿಕ ಮುಕೇಶ್ ಅಂಬಾನಿ ಆಸ್ತಿ ಏರಿಕೆಯಾಗಿದೆ. ಕಿರಿಯ ಮಗ ಅನಂತ್ ಮದುವೆ ಸಂಭ್ರಮದಲ್ಲಿ ಮುಕೇಶ್ ಅಂಬಾನಿ ಈ ಘೋಷಣೆ ಮಾಡಿದ್ದರು. 

ಫೋರ್ಬ್ಸ್ ಬಿಡುಗಡೆ ಮಾಡಿರುವ 2024ರ ವರದಿ ಪ್ರಕಾರ, ಅಗ್ರ 100 ವ್ಯಕ್ತಿಗಳ ಒಟ್ಟು ಸಂಪತ್ತು $1.1 ಟ್ರಿಲಿಯನ್ ತಲುಪಲಿದೆ.ಇದು ಕಳೆದ ವರ್ಷ $799 ಶತಕೋಟಿ ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಬಿಎಸ್‌ಇ ಸೆನ್ಸೆಕ್ಸ್ ಶೇ. 30 ರಷ್ಟು ಏರಿಕೆಯನ್ನು  ದಾಖಲಿಸಿರುವ ಭಾರತೀಯ ಷೇರು ಮಾರುಕಟ್ಟೆಯಲ್ಲಿನ ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಇದರಲ್ಲಿ ಶೇ.80ರಷ್ಟು ಜನರ ಸಂಪತ್ತು ಹೆಚ್ಚಾಗಿದೆ. 58 ವ್ಯಕ್ತಿಗಳು $1 ಬಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಸಂಪತ್ತಿನ ಪ್ರಮಾಣ ಏರಿಕೆಯಾಗಿದೆ. 

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ ಆಸ್ತಿ 116 ಬಿಲಿಯನ್ ಡಾಲರ್ ಎಂದು ಫೋರ್ಬ್ಸ್ ರಿವೀಲ್ ಮಾಡಿದೆ. ಮೂರನೇ ಸ್ಥಾನದಲ್ಲಿರುವ ಓ.ಪಿ.ಜಿಂದಾಲ್ ಗ್ರೂಪ್ ನ ಸಾವಿತ್ರಿ ಜಿಂದಾಲ್ ಅವರ ಒಟ್ಟು ನಿವ್ವಳ ಆಸ್ತ 43.7 ಬಿಲಿಯನ್ ಡಾಲರ್ ಆಗಿದೆ.

ಜಿಯೋದಿಂದ Port ಆಗ್ತಿರೋ ಗ್ರಾಹಕರನ್ನು ತಡೆಯಲು ಮುಕೇಶ್ ಅಂಬಾನಿ ಮಾಸ್ಟರ್ ಪ್ಲಾನ್

ಮುಕೇಶ್ ಅಂಬಾನಿ: 119.5 ಬಿಲಿಯನ್ ಡಾಲರ್
ಗೌತಮ್ ಅದಾನಿ: 116 ಬಿಲಿಯನ್ ಡಾಲರ್
ಸಾವಿತ್ರಿ ಜಿಂದಾಲ್: 43.7 ಬಿಲಿಯನ್ ಡಾಲರ್
ಶಿವ್ ನಾದರ್: 40.2 ಬಿಲಿಯನ್ ಡಾಲರ್
ದಿಲೀಪ್ ಶಾಂಗವಿ: 32.4 ಬಿಲಿಯನ್ ಡಾಲರ್
ರಾಧಾಕೃಷ್ಣ ದಮಾನಿ: 31.5 ಬಿಲಿಯನ್ ಡಾಲರ್
ಸುನೀಲ್ ಮಿತ್ತಲ್: 30.7 ಬಿಲಿಯನ್ ಡಾಲರ್
ಕುಮಾರ್ ಬಿರ್ಲಾ: 24.8 ಬಿಲಿಯನ್ ಡಾಲರ್
ಸೈರಸ್ ಪೂನಾವಾಲಾ 24.5 ಬಿಲಿಯನ್ ಡಾಲರ್
ಬಜಾಜ್ ಕುಟುಂಬ: 23.4 ಬಿಲಿಯನ್ ಡಾಲರ್

ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಇಷ್ಟದ ಆಹಾರ ಕೇವಲ 230 ರೂ!

Latest Videos
Follow Us:
Download App:
  • android
  • ios