ನವದೆಹಲಿ(ಫೆ.01): ನಿರ್ಮಲಾ ಸೀತಾರಾಮನ್ 2021ನೇ ವರ್ಷದ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಬೆಂಗಳೂರಿಗೆ ಮತ್ತೆರಡು ಮೆಟ್ರೋ ಮಾರ್ಗ ಘೋಷಣೆ ಮಾಡಿದ್ದಾರೆ.

"

ive| Budget 2021: ಕ್ಷಣ ಕ್ಷಣದ ಮಾಹಿತಿಗಾಗಿ ನೋಡಿ ಲೈವ್ ಬ್ಲಾಗ್!

ಹೌದು ಬೆಂಗಳೂರು ಮೆಟ್ರೊ 2ಎ, 2ಬಿ ಹಂತದ ಮೆಟ್ರೋ ಮಾರ್ಗ ಘೋಷಣೆ ಮಾಡಲಾಗಿದೆ.  ಈ ನಿಟ್ಟಿನಲ್ಲಿ  58.19 ಕಿಮೀ ಮೆಟ್ರೋ ಮಾರ್ಗ ವಿಸ್ತರಣೆಗೆ ಅನುದಾನ ಘೋಷಣೆ ಮಾಡಲಾಗಿದೆ. ಒಟ್ಟು 14,788 ಸಾವಿರ ಕೋಟಿ ಈ ಬಾರಿಯ ಬಜೆಟ್‌ನಲ್ಲಿ ಬೆಂಗಳೂರು ಮೆಟ್ರೋ ಅಭಿವೃದ್ದಿಗೆ ಸಿಗುತ್ತಿದೆ.

ಇನ್ನುಳಿದಂತೆ 2ನೇ ಹಂತದ ಕೊಚ್ಚಿ ಮೆಟ್ರೋಗೆ 1109 ಕೋಟಿ  ರೂ. ಹಾಗೂ ಚೆನ್ನೈ ಮೆಟ್ರೋ 63 ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.