ನವದೆಹಲಿ (ಆ. 17) ಕೊರೋನಾ ಲಾಕ್ ಡೌನ್ ಆನ್‌ಲೈನ್‌ನಲ್ಲಿ ಮದ್ಯ  ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಟ್ಟಿತು. ಒಂದೊಂದೇ ಕಂಪನಿಗಳು ಮದ್ಯ ಮಾರಾಟ ಶುರುಮಾಡಿಕೊಂಡವು. ಇದೀಗ  ಇ-ಕಾಮರ್ಸ್ ಕ್ಷೇತ್ರದ ದಿಗ್ಗಜ ಫ್ಲಿಪ್ ಕಾರ್ಟ್ ಸಹ  ಮದ್ಯ ಸರಬರಾಜು ಮಾಡಲು ಮುಂದಾಗಿದೆ.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಪ್ರಾಯೋಗಿಕವಾಗಿ ಎರಡು ಮಹಾನಗರದಲ್ಲಿ ಸರಬರಾಜು ಮಾಡಲು ಮುಂದಾಗಿರುವ ವರದಿ ಸಿಕ್ಕಿದೆ. ಮದ್ಯ ತಯಾರಕ ಸಂಸ್ಥೆ ಡಿಯಾಗೊ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಐಡಬ್ಲ್ಯೂಎಸ್​ಆರ್( International Wines and Spirits Record)​​ ವಿಶ್ಲೇಷಣೆ ಪ್ರಕಾರ ಭಾರತದಲ್ಲಿ ಪ್ರಸ್ತುತ ಆಲ್ಕೋಹಾಲ್​​ ಮಾರುಕಟ್ಟೆಯು 2.03 ಲಕ್ಷ ಕೋಟಿ ಆದಾಯ ಗಳಿಸಿಕೊಡುತ್ತಿದೆ.  ಪಶ್ವಿಮ ಬಂಗಾಳ ಮತ್ತು ಒಡಿಶಾ ರಾಜ್ಯದ ಸರ್ಕಾರಗಳು ಫ್ಲಿಪ್​​ಕಾರ್ಟ್​ ಮೂಲಕ ಲಿಕ್ಕರ್​​ ಮಾರಾಟ ಮಾಡಲು ಮುಂದಾಗಿದೆ. 

ಮದ್ಯ ಸಿಕ್ಕಿಲ್ಲ ಎಂದು ಕೊರೋನಾ ಸೋಂಕಿತ ಮಹಿಳೆ ಆಸ್ಪತ್ರೆಯಿಂದ ಎಸ್ಕೇಪ್

ಅಮೆಜಾನ್​ ಈಗಾಗಲೇ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಲಿಕ್ಕರ್​​ ತಲುಪಿಸುವ ಸೇವೆಯನ್ನು ಮಾಡುತ್ತಿದೆ. ಅಲ್ಲಿನ ಬೇವರೇಜರ್ಸ್​ ಕಾರ್ಪ್​ ಆನ್​ಲೈನ್​​  ಮೂಲಕ ಮದ್ಯ ಸರಬರಾಜು ಮಾಡುತ್ತಿದೆ. ಇನ್ನು ಬಿಗ್​ ಬಾಸ್ಕೆಟ್​ ಕೂಡ ಮದ್ಯ ಸರಬರಾಜು ಮಾಡಲು ಅನುಮತಿ ಪಡೆದುಕೊಂಡಿದ್ದು ಕೆಲಸ ಆರಂಭಿಸುತ್ತೇನೆ ಎಂದಿದೆ.

ಆಹಾರ ಸರಬರಾಜು ಸ್ಟಾರ್ಟ್ಅಪ್‌ಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೋ ಕೂಡ ಕೆಲವು ನಗರಗಳಲ್ಲಿ ಮನೆ ಮನೆಗೆ ಮದ್ಯ ಪೂರೈಕೆ ಸೌಲಭ್ಯ ಆರಂಭಿಸಿದ್ದವು. ಕೊರೋನಾ ವೈರಸ್ ಲಾಕ್ ಡೌನ್ ವಿಧಿಸಿದ ಸಂದರ್ಭದಲ್ಲಿ ಮದ್ಯ ಸಿಗದ ಕಾರಣ ಆನ್‌ಲೈನ್ ಮದ್ಯಕ್ಕೆ ವಿಪರೀತ ಬೇಡಿಕೆ ಉಂಟಾಗಿತ್ತು. 

ಫ್ಲಿಪ್​ಕಾರ್ಟ್​ ಬಳಕೆದಾರರು ಆನ್​ಲೈನ್​​ನಲ್ಲಿ ಆರ್ಡರ್ ಮಾಡಿದ ಮದ್ಯವನ್ನ ಹಿಪ್​ ಬಾರ್​ ಮೂಲಕ ಡೆಲಿವೆರಿ ಮಾಡುತ್ತದೆ. ಹಿಪ್​ಬಾರ್​ ಅಪ್ಲಿಕೇಶನ್​ ಮೂಲಕ ಫ್ಲಿಪ್​ಕಾರ್ಟ್​ನಲ್ಲಿ ಮಾರಾಟ ಮಾಡುವ ಮದ್ಯವನ್ನು ಖರೀದಿಸಲು ಅವಕಾಶ ಲಭ್ಯವಾಗುತ್ತದೆ.