ಬೆಂಗಳೂರು(ಆ.24): ದೇಶದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್​ಕಾರ್ಟ್​, ಇದೇ ಮೊದಲ ಬಾರಿಗೆ ನವೀಕರಣಗೊಂಡ ಇಲೆಕ್ಟ್ರಾನಿಕ್​ ವಸ್ತುಗಳ ಮಾರಾಟಕ್ಕೆ ಮೊಬೈಲ್​ ಆ್ಯಪ್ ಬಿಡುಗಡೆಗೊಳಿಸಿದೆ.

'2ಗುಡ್' ಎಂಬ ಹೆಸರಿನ ಆ್ಯಪ್ ನಲ್ಲಿ ಗುಣಮಟ್ಟ ಅಪೇಕ್ಷಿಸುವ ಗ್ರಾಹಕರಿಗೆ ಬೇರೆ ಬೇರೆ ಬ್ರಾಂಡ್​ನ ನವೀಕರಣಗೊಂಡ ಪ್ರೊಡಕ್ಟ್​ಗಳು ​ಲಭ್ಯವಿರಲಿದೆ ಎಂದು ಫ್ಲಿಪ್​ಕಾರ್ಟ್​ ಸಂಸ್ಥೆಯ ಉಪಾಧ್ಯಕ್ಷ ಅನೀಲ್​ ಗೋಟೇಟಿ ಹೇಳಿದ್ದಾರೆ.

ಆರಂಭದ ಹಂತದಲ್ಲಿ ಮೊಬೈಲ್​ ಆ್ಯಪ್ ಆಗಿ ಬಿಡುಗಡೆಗೊಂಡಿರುವ '2ಗುಡ್' ಮುಂದೆ ಡೆಸ್ಕ್​ಟಾಪ್ ವಿನ್ಯಾಸದಲ್ಲೂ ಜನರ ಕೈಸೇರಲಿದೆ. ನವೀಕರಣಗೊಂಡ ಮೊಬೈಲ್​ ಫೋನ್​, ಲಾಪ್​ಟಾಪ್​, ಸ್ಮಾರ್ಟ್​ವ್ಯಾಚ್​, ಹೀಗೆ ಎಲ್ಲಾ ಇಲೆಕ್ಟ್ರಾನಿಕ್​ ಉಪಕರಣಗಳೂ ಇಲ್ಲಿ ಸಿಗಲಿದೆ. ಜೊತೆಗೆ ಈ ಆಪ್ ಗೂಗಲ್​ ಪ್ಲೇಸ್ಟೋರ್​ ಮತ್ತು ಆಪಲ್ ಆಪರೇಟಿಂಗ್​ ಸಿಸ್ಟೆಮ್​ನಲ್ಲೂ ಲಭ್ಯವಿರಲಿದೆ.