Asianet Suvarna News Asianet Suvarna News

ಬ್ಯಾಂಕ್ ಲಾಕರ್ ಹೊಂದಿರೋರು ಗಮನಿಸಿ, ಜ.1ರಿಂದ ಹೊಸ ನಿಯಮ ಜಾರಿ

ಬ್ಯಾಂಕ್ ಲಾಕರ್ ಹೊಂದಿರೋರು ಅದಕ್ಕೆ ಸಂಬಂಧಿಸಿದ ಕೆಲವು ನಿಯಮಗಳ ಬಗ್ಗೆ ತಿಳಿದುಕೊಳ್ಳೋದು ಅಗತ್ಯ. 2023ರ ಜನವರಿ 1ರಿಂದ ಬ್ಯಾಂಕ್ ಲಾಕರ್ ಗೆ ಸಂಬಂಧಿಸಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಹಾಗಾದ್ರೆ ಬ್ಯಾಂಕ್ ಲಾಕರ್ ಹೊಸ ನಿಯಮ ಏನ್ ಹೇಳುತ್ತೆ? ಇಲ್ಲಿದೆ ಮಾಹಿತಿ. 

Bank locker update News rules to take effect on THIS date check revised rent compensation
Author
First Published Dec 23, 2022, 1:10 PM IST

ನವದೆಹಲಿ(ಡಿ.23): ಚಿನ್ನ, ಪ್ರಮುಖ ದಾಖಲೆಗಳು ಸೇರಿದಂತೆ ಅತ್ಯಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿಡಲು ನೀವು ಬ್ಯಾಂಕ್ ಲಾಕರ್ ಬಳಸುತ್ತಿದ್ದರೆ, 2023 ಜನವರಿ 1ರಿಂದ ಇದಕ್ಕೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. 2023 ಜನವರಿ 1ರಿಂದ ಬ್ಯಾಂಕ್ ಗಳು  ಹೊಸ ಲಾಕರ್ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಹಾಗೂ  ಗ್ರಾಹಕರಿಗೆ ಲಾಕರ್ ಒಪ್ಪಂದಗಳನ್ನು ನೀಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿರ್ದೇಶನ ನೀಡಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬ್ಯಾಂಕ್ ಲಾಕರ್ ನಿಯಮಗಳನ್ನು ಪರಿಷ್ಕರಿಸಿ  2021ರ ಆಗಸ್ಟ್ 18ರಂದು ಆರ್ ಬಿಐ ಮೊದಲ ಬಾರಿಗೆ ಅಧಿಸೂಚನೆ ಹೊರಡಿಸಿತ್ತು . ಈ ಹೊಸ ನಿಯಮಗಳು 2022ರ ಜನವರಿ 1ರಿಂದ ಜಾರಿಗೆ ಬಂದಿದ್ದವು. ಲಾಕರ್ ಹೊಂದಿರುವ ಎಲ್ಲ ಗ್ರಾಹಕರು ಲಾಕರ್ ಒಪ್ಪಂದದ ನವೀಕರಣ ಪತ್ರಕ್ಕೆ ಸಹಿ ಹಾಕುವ ಜೊತೆಗೆ ಅರ್ಹತ ದಾಖಲೆಗಳನ್ನು 2023ರ ಜನವರಿ 1ರೊಳಗೆ ನೀಡಬೇಕು ಎಂದು ಆರ್ ಬಿಐ ಸೂಚಿಸಿದೆ. ಲಾಕರ್ ಸೌಲಭ್ಯ ನೀಡಿರೋದಕ್ಕೆ ಬ್ಯಾಂಕ್ ಗಳು ಗ್ರಾಹಕರಿಗೆ ವಾರ್ಷಿಕ ಶುಲ್ಕವನ್ನು ಕೂಡ ವಿಧಿಸುತ್ತದೆ. ಆದರೆ, ಬ್ಯಾಂಕ್ ಲಾಕರ್ ನಲ್ಲಿಟ್ಟಿರುವ ವಸ್ತುಗಳ ಸುರಕ್ಷತೆಯ ಜವಾಬ್ದಾರಿಯನ್ನು ಈ ಹಿಂದೆ ಬ್ಯಾಂಕ್ ಗಳು ಪೂರ್ಣ ಪ್ರಮಾಣದಲ್ಲಿ ಹೊರಲು ಸಿದ್ಧವಿರಲಿಲ್ಲ. ಈ ಹಿನ್ನೆಲೆಯಲ್ಲಿ 2021ರ ಆಗಸ್ಟ್ ನಲ್ಲಿ ಆರ್ ಬಿಐ ಬ್ಯಾಂಕ್ ಲಾಕರ್ ನಿಯಮಗಳನ್ನು ಪರಿಷ್ಕರಿಸಿತ್ತು.

ಬ್ಯಾಂಕ್ ಲಾಕರ್ ಹೊಸ ನಿಯಮಗಳಲ್ಲಿ ಏನಿದೆ?
100 ಪಟ್ಟು ಪರಿಹಾರ
ಲಾಕರ್‌ನಲ್ಲಿ ಇಟ್ಟವಸ್ತು ಬ್ಯಾಂಕ್‌ ನಿರ್ಲಕ್ಷ್ಯದಿಂದ ನಾಪತ್ತೆಯಾದರೆ ಅಥವಾ ಕಳೆದು ಹೋದರೆ ಅದಕ್ಕೆ ಬ್ಯಾಂಕ್‌ ಹೊಣೆ. ಗ್ರಾಹಕನಿಗೆ ಬ್ಯಾಂಕುಗಳು ಬ್ಯಾಂಕ್‌ ಲಾಕರ್‌ ಬಾಡಿಗೆಯ 100 ಪಟ್ಟಿಗೆ ಸಮನಾದ ಪರಿಹಾರ ಮೊತ್ತವನ್ನು ನೀಡಬೇಕಾಗುತ್ತದೆ.

ಆಯ್ದ ಬ್ಯಾಂಕಿಂಗ್ ಸೇವೆಗಳ ಮೇಲೆ ಶೂನ್ಯ ಶುಲ್ಕ ಘೋಷಿಸಿದ ಐಡಿಎಫ್ ಸಿ ಫಸ್ಟ್ ಬ್ಯಾಂಕ್; ಯಾವೆಲ್ಲ ಸೇವೆಗಳಿಗೆ ಅನ್ವಯ?

ಸ್ಟ್ರಾಂಗ್ ರೂಮ್ನಲ್ಲಿ ಸಿಸಿಟಿವಿ
ಬ್ಯಾಂಕ್ (Bank) ತನ್ನ ಸ್ಟ್ರಾಂಗ್ ರೂಮ್ನಲ್ಲಿ (Strong room) ಸಿಸಿಟಿವಿ ಅಳವಡಿಸಿರಬೇಕು. ಅಲ್ಲದೆ, ಲಾಕರ್ ಸುತ್ತಮುತ್ತ ನಡೆಯೋ ಚಟುವಟಿಕೆಗಳ ಸಿಸಿಟಿವಿ ಫೋಟೇಜ್ ಅನ್ನು 180 ದಿನಗಳ ಕಾಲ ಸಂರಕ್ಷಿಸಿಡಬೇಕು ಎಂದು ಸೂಚಿಸಿದೆ. ಇದರಿಂದ ಅನ್ಯರು ಲಾಕರ್‌ಗೆ ಭೇಟಿ ನೀಡಿ ವಂಚನೆ ಎಸಗಿದ್ದರೆ ಸುಲಭವಾಗಿ ಪತ್ತೆ ಹಚ್ಚಬಹುದು. ಗ್ರಾಹಕರಿಗೆ 6 ತಿಂಗಳವರೆಗೂ ದೂರು ನೀಡಲು ಅವಕಾಶ ಸಿಗುತ್ತದೆ.

ಎಸ್ಸೆಮ್ಮೆಸ್‌, ಇಮೇಲ್‌ ಅಲರ್ಟ್
ಪ್ರತಿ ಬಾರಿ ಗ್ರಾಹಕನು ಲಾಕರ್‌ಗೆ ಭೇಟಿ ನೀಡಿದಾಗ ಆ ದಿನದ ಅಂತ್ಯದೊಳಗೆ ಬ್ಯಾಂಕ್‌ಗಳು ಗ್ರಾಹಕನಿಗೆ ಎಸ್ಸೆಮ್ಮೆಸ್‌ ಹಾಗೂ ಇ-ಮೇಲ್‌ ಅಲರ್ಟ್ ಸಂದೇಶ ಕಳಿಸಬೇಕು. ಇದರಿಂದ ಅನ್ಯರು ಭೇಟಿ ನೀಡಿದ್ರೆ ಗ್ರಾಹಕನಿಗೆ ಮಾಹಿತಿ ಲಭಿಸುತ್ತದೆ.

ಖಾಲಿ ಲಾಕರ್‌ ಮಾಹಿತಿ 
ಈ ನಿಯಮ ಜಾರಿಗೂ ಮುನ್ನ ಬ್ಯಾಂಕ್‌ನಲ್ಲಿ ಎಷ್ಟು ಲಾಕರ್‌ ಗಳು ಖಾಲಿ ಇವೆ ಎಂಬ ಮಾಹಿತಿಯನ್ನು ಗ್ರಾಹಕರಿಗೆ ಬ್ಯಾಂಕ್‌ಗಳು ನೀಡುತ್ತಿರಲಿಲ್ಲ. ಆದರೆ ಇನ್ನು ಮುಂದೆ ಎಷ್ಟು ಲಾಕರ್‌ಗಳು ಖಾಲಿ ಇವೆ ಎಂದು ಶಾಖೆಯ ಫಲಕದಲ್ಲಿ  ಪ್ರದರ್ಶಿಸಬೇಕು. ಹೊಸ ಅರ್ಜಿದಾರನಿಂದ ಅರ್ಜಿ ಸ್ವೀಕರಿಸಿದಾಗ ವೇಟಿಂಗ್‌ ಲಿಸ್ಟ್‌ ನಮೂದಿಸುವಿಕೆ ಕಡ್ಡಾಯ.

ಸುಸ್ತಿದಾರರಿಂದ ಬ್ಯಾಂಕ್‌ಗಳಿಗೆ 92 ಸಾವಿರ ಕೋಟಿ ರು. ಬಾಕಿ

ಗರಿಷ್ಠ 3 ವರ್ಷದ ಬಾಡಿಗೆ ಠೇವಣಿ
ಗ್ರಾಹಕರಿಗೆ ಬ್ಯಾಂಕ್‌ಗಳು ಲಾಕರ್‌ ಠೇವಣಿ ಇಡುವ ಮೊತ್ತಕ್ಕೆ ಆರ್‌ಬಿಐ ಮಿತಿ ಹೇರಿದೆ. ಗರಿಷ್ಠ 3 ವರ್ಷದ ಬಾಡಿಗೆ ಮೊತ್ತವನ್ನು ಠೇವಣಿ ರೂಪದಲ್ಲಿ ಇಡಬಹುದಾಗಿದೆ.  ಉದಾಹರಣೆಗೆ: ವರ್ಷಕ್ಕೆ 4 ಸಾವಿರ ರು. ಲಾಕರ್‌ ಬಾಡಿಗೆಯನ್ನು ಗ್ರಾಹಕ ಕಟ್ಟುತ್ತಿದ್ದರೆ, 12 ಸಾವಿರ ರು.ಗಳನ್ನು ಮಾತ್ರ ಠೇವಣಿಯಾಗಿ ಬ್ಯಾಂಕ್‌ಗಳು ಇರಿಸಿಕೊಳ್ಳಬೇಕು. ಇನ್ನೂ ಹೆಚ್ಚು ಮೊತ್ತ ಕೇಳುವಂತಿಲ್ಲ.

Follow Us:
Download App:
  • android
  • ios