ನವದೆಹಲಿ(ಮೇ.18): ಶೌಚಗೃಹಗಳಿಗೆ ಬಳಸುವ ಟೈಲ್ಸ್ ಮತ್ತು ಮ್ಯಾಟ್‌ಗಳ ಮೇಲೆ ಹಿಂದೂ ದೇವರ ಚಿತ್ರ ಹಾಕಿರುವ ಅಮೆಜಾನ್ ವಿರುದ್ಧ ದೂರು ದಾಖಲಾಗಿದೆ.

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ವಿಶ್ವದ ಪ್ರಸಿದ್ಧ ಇ-ಕಾಮರ್ಸ್ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ಈ ಕುರಿತು ನೋಯ್ಡಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಶೌಚಗೃಹಗಳಿಗೆ ಬಳಸುವ ಟೈಲ್ಸ್ ಮತ್ತು ಮ್ಯಾಟ್‌ಗಳ ಮೇಲೆ ಹಿಂದೂ ದೇವರ ಚಿತ್ರ ಹಾಕಿರುವ ಅಮೆಜಾನ್ ವಿರುದ್ಧ ಈಗಾಗಲೇ ಆನ್‌ಲೈನ್‌ನಲ್ಲಿ ಬ್ಯಾನ್ ಅಮೆಜಾನ್ ಅಭಿಯಾನ ಆರಂಭವಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.