ಹೆಲ್ಸಿಂಕಿ(ಜ.07): ವಾರದ ಏಳು ದಿನ ಅಥವಾ ಆರು ದಿನ ಕೆಲಸ, ದಿನಕ್ಕೆ ಎಂಟು ಗಂಟೆಯ ಶಿಫ್ಟ್ ಸಮಯ. ಇದು ಭಾರತವೂ ಸೇರಿದಂತೆ ಬಹುತೇಕ ದೇಶಗಳಲ್ಲಿರುವ ಕೆಲಸದ ನಿಯಮ.

ಭಾರತಕ್ಕೆ ಐಟಿ ಕಂಪನಿಗಳು ಕಾಲಿಟ್ಟಾಗಿನಿಂದ ವಾರಕ್ಕೆ ಐದು ದಿನ ಕೆಲಸ ಹಾಗೂ ಎರಡು ದಿನಗಳ ನಿರಂತರ ರಜೆಯ ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು. ಆದರೆ ಇಷ್ಟಕ್ಕೂ ನಮ್ಮ ಬಹುತೇಕ ಯುವ ಕಾರ್ಮಿಕರು ತೃಪ್ತರಾಗಿಲ್ಲ ಎಂಬುದು ಸತ್ಯ.

ಕೆಲಸದ ಅವಧಿ ಹಾಗೂ ದಿನ ಇನ್ನೂ ಕಡಿಮೆಯಾಗಬೇಕು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಇದು ವಿಶ್ವದಾದ್ಯಂತ ಚರ್ಚೆಯಾಗುತ್ತಿರುವ ಗಂಭೀರ ವಿಷಯವೂ ಹೌದು.

ಸರ್ಕಾರಿ ನೌಕರರ ರಜೆ ಪಡೆಯುವ ವಿಧಾನವಿನ್ನು ಸುಲಭ

ಅದರಂತೆ ವಾರದಲ್ಲಿ ನಾಲ್ಕು ದಿನಗಳ ಕೆಲಸ ಹಾಗೂ ಕೇವಲ ಆರು ಗಂಟೆಯ ಶಿಫ್ಟ್'ನ ಬೇಡಿಕೆಗೆ ಫಿನ್'ಲ್ಯಾಂಡ್ ಪ್ರಧಾನಿ ಸನ್ನಾ ಮಾರಿನ್ ಬೆಂಬಲ ಸೂಚಿಸಿದ್ದಾರೆ.

ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳಲ್ಲಿ ಈಗಾಗಲೇ ಕೇವಲ ಆರು ಗಂಟೆಯ ಶಿಫ್ಟ್ ನಿಗದಿ ಮಾಡಲಾಗಿದ್ದು, ಸನ್ನಾ ಮಾರಿನ್ ಇದೀಗ ಕೆಲಸದ ದಿನಗಳಲ್ಲೂ ಕಡಿತ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹಲವು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಸಂಶೋಧನೆ ನಡೆಸಿದ್ದು, ಇದೇ ಕಾರಣಕ್ಕೆ ಸ್ವಿಡನ್ ಹಾಗೂ ಇತರ ರಾಷ್ಟ್ರಗಳಲ್ಲಿ ಕೇವಲ ಆರು ಗಂಟೆಯ ಶಿಫ್ಟ್ ಇರುವುದನ್ನು ನಾವು ಕಾಣಬಹುದು.

ಆದರೆ ವಾರದಲ್ಲಿ ಆರು ಅಥವಾ ಐದು ದಿನಗಳ ಕೆಲಸದ ಅವಧಿಯೂ ಉದ್ಯೋಗಗಿಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಎಂಬುದು ಹಲವು ಸಂಶೋಧನೆಗಳಿಂದ ಬಹಿರಂಗಗೊಂಡಿದ್ದು, ಈ ಕಾರಣಕ್ಕೆ ಕೆಲಸದ ದಿನಗಳಲ್ಲೂ ಕಡಿತ ಮಾಡುವ ಇಂಗಿತವನ್ನು ಸನ್ನಾ ಮಾರಿನ್ ವ್ಯಕ್ತಪಡಿಸಿದ್ದಾರೆ.

EQ ಹೆಚ್ಚಿರುವವರು ಉದ್ಯೋಗದಲ್ಲಿ ಒತ್ತಡ ನಿಭಾಯಿಸುವುದು ಹೀಗೆ

ನಾಲ್ಕು ದಿನದಲ್ಲಿ ದಿನವೊಂದಕ್ಕೆ ಆರು ಗಂಟೆಯಂತೆ ಕೆಲಸ ಎಂದಾದರೆ ಉದ್ಯೋಗಿಯೋರ್ವ ವಾರದಲ್ಲಿ ಕೇವಲ 24 ಗಂಟೆ ಕೆಲಸ ಮಾಡುತ್ತಾನೆ. ಇದರಿಂದ ಉದ್ಯೋಗಿಯ ಕ್ಷಮತೆಯಲ್ಲಿ ಏರಿಕೆಯಾಗುತ್ತದೆ ಎಂಬುದು ಫಿನ್'ಲ್ಯಾಂಡ್ ಪ್ರಧಾನಿಯ ಅಭಿಮತವಾಗಿದೆ.