ಸರ್ಕಾರಿ ನೌಕರರ ರಜೆ ಪಡೆಯುವ ವಿಧಾನವಿನ್ನು ಸುಲಭ
ಸರ್ಕಾರಿ ನೌಕರರು ರಜೆ ಪಡೆಯುವುದಿನ್ನು ಸುಲಭವಾಗಲಿದೆ. ಇದಕ್ಕೆ ಇ ತಂತ್ರಾಂಶ ಅಳವಡಿಕೆ ಮಾಡಲಾಗುತ್ತಿದೆ.
ಬೆಂಗಳೂರು [ಡಿ.25]: ರಾಜ್ಯ ಸರ್ಕಾರದ ಇ-ಆಫೀಸ್ (ಇ-ಲೀವ್) ತಂತ್ರಾಂಶ ಬರುವ ಜ.1ರಿಂದ ಅನುಷ್ಠಾನಕ್ಕೆ ಬರಲಿದ್ದು, ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನುಮುಂದೆ ರಜೆ ಪಡೆಯುವ ವಿಧಾನ ಸುಲಭವಾಗಲಿದೆ.
ಸಚಿವಾಲಯದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ರಜೆ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ ತರಬೇಕೆಂದು ಸರ್ಕಾರ ನಿರ್ಧರಿಸಿದೆ. ಹೀಗಾಗಿ ರಜೆ ಪಡೆಯುವ ಹಾಗೂ ಅಂಗೀಕಾರ ವಿಧಾನವನ್ನು ಸಹ ವಿದ್ಯುನ್ಮಾನಗೊಳಿಸಲಾಗಿದೆ. ಇದರಿಂದ ಅಧಿಕಾರಿ ಮತ್ತು ನೌಕರರಿಗೆ ಇ-ಲೀವ್ ವ್ಯವಸ್ಥೆ ಅನ್ವಯವಾಗಲಿದೆ. ಆದರೆ, ಗ್ರೂಪ್ ಸಿ ವರ್ಗದ ವಾಹನ ಚಾಲಕರು ಹಾಗೂ ಗ್ರೂಪ್ ಡಿ ವರ್ಗದ ನೌಕರರಿಗೆ ಇ-ಲೀವ್ ವ್ಯವಸ್ಥೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಸಚಿವಾಲಯದ ಅಧಿಕಾರಿ ಮತ್ತು ನೌಕರರು ಇ-ಆಫೀಸ್‌ನಲ್ಲಿ ಈಗಾಗಲೇ ನೀಡಲಾಗಿರುವ ತಮ್ಮ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಉಪಯೋಗಿಸಿ ಲಾಗಿನ್ ಆಗಿ ಇ-ಆಫೀಸ್ (ತಂತ್ರಾಂಶ) ಸವೀರ್‍ಸಸ್‌ನ ಲೀವ್ ಮ್ಯಾನೇಜ್ಮೆಂಟ್ ಸವೀರ್‍ಸಸ್‌ಲ್ಲಿಯೇ ರಜೆಯ ಮನವಿ ಸಲ್ಲಿಸುವಂತೆ ಸೂಚಿಸಲಾಗಿದೆ.
ವಿವಾದದ ನಡುವೆಯೇ ಏಪ್ರಿಲ್‌ನಿಂದ ಎನ್‌ಪಿಆರ್ ಪ್ರಕ್ರಿಯೆ ಶುರು!..
ಗ್ರೂಪ್ ಸಿ ವರ್ಗದ ವಾಹನ ಚಾಲಕರು ಮತ್ತು ಗ್ರೂಪ್ ಡಿ ವೃಂದದ ಸಿಬ್ಬಂದಿಗಳು ಇ-ಕಚೇರಿಯ ತಂತ್ರಾಂಶವನ್ನು ಉಪಯೋಗಿಸದೇ ಇರುವುದರಿಂದ ಸದರಿ ಸಿಬ್ಬಂದಿ ಎಂದಿನಂತೆ ಹಸ್ತ ಚಾಲಿತ ವ್ಯವಸ್ಥೆಯಲ್ಲಿಯೇ ರಜೆ ಅರ್ಜಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.