ನವದೆಹಲಿ(ಏ.06) ಭಾರತದ ಆರ್ಥಿಕ ಚೇತರಿಕೆಯ ಹಾದಿಯಲ್ಲಿ ವಿದೇಶಿ ಬಂಡವಾಳ ಒಳಹರಿವಿನ ವೇಗ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ವಿಶೇಷ ಪ್ಯಾಕೇಜ್ ಹಾಗೂ ನೀತಿ ಉಪಕ್ರಮಗಳನ್ನು ಕೈಗೊಂಡಿತ್ತು.  ವಿದೇಶಿ ಬಂಡವಾಳ ಹೂಡಿಕೆ ನಿಯಂತ್ರಕ ಆಡಳಿತದ ಸರಳೀಕರಣ ಸೇರಿದಂತೆ ಹಲವು ಕ್ರಮಗಳಿಂದ ಭಾರತದಲ್ಲಿನ ಬಂಡವಾಳ ಹೂಡಿಕೆಯ ವೇಗ ಹೆಚ್ಚಾಗಿದೆ. 

ದೇಶದಲ್ಲೇ ಅತಿ ಹೆಚ್ಚು ಬಂಡವಾಳ ಹೂಡಿಕೆಗೆ ಆಕರ್ಷಿಸಿದ ಕರ್ನಾಟಕ

 ಹಣಕಾಸು ವರ್ಷ (ಎಫ್‌ವೈ) 2020-21 ಭಾರತೀಯ ಷೇರು ಮಾರುಕಟ್ಟೆಗಳಲ್ಲಿ 2,74,034 ಕೋಟಿ ರೂ.ಗಳ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಪಿಐ) ಒಳಹರಿವು ಕಂಡಿದ್ದು, ಇದು ಭಾರತೀಯ ಆರ್ಥಿಕತೆಯ ಮೂಲಭೂತ ವಿಷಯಗಳಲ್ಲಿ ವಿದೇಶಿ ಹೂಡಿಕೆದಾರರ ಅಚಲ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.

 

FPI ನಿಯಂತ್ರಕ ಆಡಳಿತದ ಸರಳೀಕರಣ, ಸೆಬಿಯಲ್ಲಿ ನೋಂದಣಿ ಮಾಡಲು ಆನ್‌ಲೈನ್ ಅರ್ಜಿ (CAF) ಕಾರ್ಯಗತಗೊಳಿಸುವುದು, ಪ್ಯಾನ್ ಹಂಚಿಕೆ , ಬ್ಯಾಂಕ್ ಮತ್ತು ಡಿಮ್ಯಾಟ್ ಖಾತೆ ತೆರೆಯುವ ವಿಧಾನಗಳ ಸರಳೀಕರಣ ಮಾಡಲಾಗಿದೆ. ಭಾರತೀಯ ಕಂಪೆನಿಗಳಲ್ಲಿ ಒಟ್ಟಾರೆ ಎಫ್‌ಪಿಐ ಹೂಡಿಕೆಯ ಮಿತಿಯನ್ನು 24% ರಿಂದ ವಲಯ ಕ್ಯಾಪ್‌ಗೆ ಹೆಚ್ಚಿಸುವುದ, ಪ್ರಮುಖ ಷೇರು ಸೂಚ್ಯಂಕಗಳಲ್ಲಿ ಭಾರತೀಯ ಸೆಕ್ಯೂರಿಟಿಗಳ ತೂಕ ಹೆಚ್ಚಳಕ್ಕೆ ಕಾರಣವಾಗಿದೆ.

ನಿಷ್ಕ್ರಿಯ ಮತ್ತು ಸಕ್ರಿಯ ಎರಡೂ ಬೃಹತ್ ಇಕ್ವಿಟಿ ಒಳಹರಿವುಗಳನ್ನು ಭಾರತೀಯ ಬಂಡವಾಳ ಮಾರುಕಟ್ಟೆಗಳ ಆರ್ಥಿಕ ಬೆಳವಣಿಗೆ ಸಹಕಾರಿಯಾಗಿದೆ.  2021-22ರ ಆರ್ಥಿಕ ವರ್ಷದಲ್ಲಿ ಭಾರತಕ್ಕೆ ಬೆಳವಣಿಗೆಯ ಮುನ್ಸೂಚನೆಯನ್ನು ವಿಶ್ವ ಬ್ಯಾಂಕ್, IMF ಮತ್ತು ಹಲವಾರು ಜಾಗತಿಕ ಸಂಶೋಧನಾ ಸಂಸ್ಥೆಗಳು ಶೇಕಡಾ 10 ರಷ್ಟು ದಾಖಲಿಸಿದೆ.  ಇದು ಭಾರತವನ್ನು ಭವಿಷ್ಯದಲ್ಲಿ ಆಕರ್ಷಕ ಹಾಗೂ ದಾಖಲೆಯ ಹೂಡಿಕೆ ತಾಣವಾಗಿ ಮಾಡಲಿದೆ.