ತಿಂಗಳಿಗೆ 82 ಸಾವಿರ ರೂಪಾಯಿ ಸಂಬಳವಿದ್ದರೂ ಸಾಲದ ಕಂತು ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಮನೆ ಸಾಲದ ಕಂತು ಕಟ್ಟುವುದಕ್ಕೆ ವೇತನದ ಬಹುಪಾಲು ಹಣ ಹೋಗುತ್ತಿದ್ದು, ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ದಿನದಿಂದ ದಿನಕ್ಕೆ ಜೀವನ ವೆಚ್ಚ ಹೆಚ್ಚುತ್ತಿದೆ. ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆಯಿಂದಾಗಿ ಜನ ಸಂಕಷ್ಟಪಡುತ್ತಿದ್ದಾರೆ ಹೀಗಿರುವಾಗ ಎಷ್ಟು ವೇತನ ಸಿಕ್ಕಿದರೂ ತಿಂಗಳಾಂತ್ಯಕ್ಕೆ ಜೋಬು ಖಾಲಿ ಖಾಲಿಯಾಗಿ ಬೇರೆಯವರ ಬಳಿ ಸಾಲ ಕೇಳುವಂತಹ ಸ್ಥಿತಿ ಅನೇಕರದ್ದು, ಹೀಗಿರುವಾಗ ತಿಂಗಳಿಗೆ 82 ಸಾವಿರ ರೂಪಾಯಿ ದುಡಿಮೆ ಮಾಡುತ್ತಿರುವ ವ್ಯಕ್ತಿಯೊಬ್ಬರು ತನಗೆ ಇದು ಏನೇನು ಸಾಲುತ್ತಿಲ್ಲ ಎಂದು ಹೇಳಿದ್ದಾರೆ. ಇವರ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಚಾರವಾಗಿದೆ.
ಸಾಮಾಜಿಕ ಜಾಲತಾಣವಾದ ರೆಡಿಟ್‌ನಲ್ಲಿ ತನಗೆ ತಿಂಗಳಿಗೆ 82 ಸಾವಿರ ರೂಪಾಯಿ ವೇತನವಿದ್ದು, ಆದರೆ ಭಾರೀ ಪ್ರಮಾಣದ ಮನೆ ಸಾಲ ಇರುವುದರಿಂದಾಗಿ ಕುಟುಂಬಕ್ಕೆ ನೆರವಾಗುವುದಕ್ಕೆ ಈ ವೇತನ ಏನೇನೂ ಸಾಲುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಇವರ ಪೋಸ್ಟ್ ಅನೇಕ ಚರ್ಚೆಗಳನ್ನು ಸೃಷ್ಟಿಸಿದ್ದು, ಆರಾಮವಾಗಿ ಬದುಕಲು ನಮ್ಮ ದೇಶದಲ್ಲಿ ಏನು ಮಾಡಬೇಕು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
46 ಲಕ್ಷ ರೂಪಾಯಿ ಮನೆ ಸಾಲ
ಹೀಗೆ ಪೋಸ್ಟ್ ಮಾಡಿದ ಈ ರೆಡಿಟ್ ಯೂಸರ್ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇವರ ವೇತನದಲ್ಲಿ 36 ಸಾವಿರ ರೂಪಾಯಿಯೂ ಮನೆಗಾಗಿ ಮಾಡಿದ್ದ 46 ಲಕ್ಷ ರೂಪಾಯಿ ಸಾಲದ ಕಂತು ಕಟ್ಟುವುದಕ್ಕೆ ಹೋಗುತ್ತದೆ. ತನ್ನ ಪಟ್ಟಣದಲ್ಲಿ ಸೀಮಿತ ಉದ್ಯೋಗಾವಕಾಶಗಳು ಮತ್ತು ಕುಟುಂಬದ ನಿರ್ಬಂಧಗಳಿಂದಾಗಿ ಸ್ಥಳಾಂತರಗೊಳ್ಳಲು ಯಾವುದೇ ಆಯ್ಕೆಯಿಲ್ಲದಿದ್ದರೂ ಇದರ ಜೊತೆಗೆ ತಿಂಗಳಿಗೆ ಹೆಚ್ಚುವರಿಯಾಗಿ 15,000 ರಿಂದ 20,000 ರೂ. ಗಳಿಸುವ ಬೇರೆ ಮಾರ್ಗಗಳನ್ನು ಹುಡುಕುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
₹62ಲಕ್ಷ ವೇತನಕ್ಕೆ ನಾಯಿ ಫುಡ್ ತಿನ್ನಬೇಕಾ? ಈ ವಿಚಿತ್ರ ಉದ್ಯೋಗದ ಬಗ್ಗೆ ಗೊತ್ತೇ?
ನಾನು ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ತಿಂಗಳಿಗೆ 82,000 ರೂಪಾಯಿ ವೇತನಕ್ಕೆ ದುಡಿಯುತ್ತಿದ್ದೇನೆ. ಆದರೆ, ನನ್ನ ಆದಾಯವು ಕುಟುಂಬವನ್ನು ನಡೆಸಲು ಸಾಕಾಗುವುದಿಲ್ಲ ಏಕೆಂದರೆ ನನ್ನ ಬಳಿ ಗೃಹ ಸಾಲದ ದೊಡ್ಡ ಭಾಗವಿದೆ. ನಾನು ಹೆಚ್ಚುವರಿ ಆದಾಯವನ್ನು ಗಳಿಸಬಹುದಾದ ಕೆಲಸವನ್ನು ಹುಡುಕುತ್ತಿದ್ದೇನೆ. ಕ್ಯಾನ್ವಾ ಮೂಲಕ ಡಿಸೈನಿಂಗ್ ಮಾಡುತ್ತೇನೆ. ಪವರ್‌ಪಾಯಿಂಟ್ ತಿಳಿದಿದೆ ಸಾರ್ವಜನಿಕ ಭಾಷಣ, ಗ್ರಾಹಕ ಸೇವೆ ಮತ್ತು ವಿನ್ಯಾಸ ತಿಳಿದಿದೆ ಎಂದು ತಮಗಿರುವ ಕೌಶಲ್ಯದ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.
82 ಸಾವಿರ ಸಾಲಲ್ಲ ಎಂದಿದ್ದಕ್ಕೆ ನೆಟ್ಟಿಗರು ಶಾಕ್
ನಾನು ಸಾರ್ವಜನಿಕ ಭಾಷಣ, ಗ್ರಾಹಕ ಸೇವೆ, ಕ್ಯಾನ್ವಾ ಮತ್ತು ಪವರ್‌ಪಾಯಿಂಟ್ ಮೂಲಕ ವಿನ್ಯಾಸ ಮಾಡುವುದರಲ್ಲಿ ಪರಿಣಿತನಾಗಿದ್ದೇನೆ ಮತ್ತು ಅವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಮಾನ್ಯವಾಗಿ ಇತಿಹಾಸ ಮತ್ತು ಸಾಹಿತ್ಯವನ್ನು ಓದುತ್ತೇನೆ. ನನ್ನ ವೇಳಾಪಟ್ಟಿಗೆ ಸರಿಹೊಂದುವಂತೆ ನಾನು ಏನು ಮಾಡಬಹುದು ಎಂಬುದರ ಕುರಿತು ನೀವೆಲ್ಲರೂ ದಯವಿಟ್ಟು ನನಗೆ ಮಾರ್ಗದರ್ಶನ ನೀಡಬಹುದೇ ಮತ್ತು ನಾನು ತಿಂಗಳಿಗೆ 15-20 ಸಾವಿರ ರೂಪಾಯಿಗಳಂತೆ ಸ್ವಲ್ಪ ಹೆಚ್ಚು ಗಳಿಸಬಹುದೇ? ಎಂದು ಅವರು ಕೇಳಿದ್ದಾರೆ. ಇವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಯ ಪ್ರವಾಹದ ಹೊಳೆಯೇ ಹರಿದಿದೆ. ಕೆಲವರು 82 ಸಾವಿರ ಸಂಬಳ ಸಾಲುತ್ತಿಲ್ಲ ಎಂಬ ಅವರ ಮಾತಿಗೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತೆ ಕೆಲವರು ಅವರಿಗೆ ಕೆಲವು ಪ್ರಯೋಗಿಕ ಸಲಹೆಗಳನ್ನು ನೀಡಿದ್ದಾರೆ.
ನೇಮಕಾತಿ ಇಂಟರ್ವ್ಯೂವ್‌ಗೆ ತಡವಾಗಿ ಬಂದ ಬಾಸ್, ಉದ್ಯೋಗ ಆಫರ್‌ನ್ನೇ ತಿರಸ್ಕರಿಸಿದ ಮಹಿಳೆ
ನಿಮಗಿರುವ ಒಂದೇ ಆಯ್ಕೆ ಕೌಶಲ್ಯವನ್ನು ಹೆಚ್ಚಿಸಿ ಉದ್ಯೋಗ ಬದಲಾಯಿಸುವುದು ಎಂದು ಒಬ್ಬರು ಅವರಿಗೆ ಸಲಹೆ ನೀಡಿದ್ದಾರೆ ಮತ್ತೊಬ್ಬರು ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸುವಂತೆ ಅವರಿಗೆ ಸಲಹೆ ನೀಡಿದ್ದಾರೆ. ಎರಡನೇ ಕೆಲಸಕ್ಕಿಂತ ಹೆಚ್ಚಾಗಿ, ನಿಮ್ಮ ಪ್ರಸ್ತುತ ವೇಳಾಪಟ್ಟಿಯು ನಿಮಗೆ ಎರಡನೇ ಕೆಲಸಕ್ಕೆ ಅವಕಾಶ ನೀಡದಿರಬಹುದು, ಆದ್ದರಿಂದ ನಿಮಗೆ ಹೆಚ್ಚುವರಿ ಆದಾಯವನ್ನು ಗಳಿಸುವ ಹೆಚ್ಚುವರಿ ಕೆಲಸ ಬೇಕಾಗುತ್ತದೆ. ಆನ್‌ಲೈನ್ ಆದಾಯವನ್ನು ಗಳಿಸುವ ಮಾರ್ಗಗಳಿವೆ, ಇದು ತ್ವರಿತವಾಗಿ ಶ್ರೀಮಂತರಾಗುವ ಯೋಜನೆಯಲ್ಲ ಆದರೆ ಪ್ರಯತ್ನದ ಅಗತ್ಯವಿದೆ. ನಾನು ಕೆಲವು ಇಂಟರ್ನೆಟ್ ವ್ಯವಹಾರಗಳಲ್ಲಿಯೂ ಕೆಲಸ ಮಾಡುತ್ತಿದ್ದೇನೆ, ಹೆಚ್ಚುವರಿ ಹಣವನ್ನು ಗಳಿಸುತ್ತಿದ್ದೇನೆ. ನೀವು ಬಯಸಿದರೆ ನಾವು ಸಂಪರ್ಕಿಸಬಹುದು ಎಂದು ಬಳಕೆದಾರರಲ್ಲಿ ಒಬ್ಬರು ಅವರಿಗೆ ಸಲಹೆ ನೀಡಿದ್ದಾರೆ.
ಹಲವು ಸಲಹೆ ನೀಡಿದ ನೆಟ್ಟಿಗರು
ನೀವು ಹತ್ತಿರದ ಕೆಲವು ಸ್ಥಳೀಯ ಎಂಬಿಎ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಪಾತ್ರವನ್ನು ವಹಿಸಿಕೊಳ್ಳಬಹುದು. ನೀವು ಹೇಳಿದಂತೆ, ನೀವು ಸಾರ್ವಜನಿಕ ಭಾಷಣ, ಸಾಹಿತ್ಯ ಮತ್ತು ಇತಿಹಾಸದಲ್ಲಿ ಉತ್ತಮರು. ಯುದ್ಧಗಳಿಂದ ವ್ಯವಹಾರಗಳವರೆಗೆ ತಂತ್ರದ ವಿಕಸನದ ಬಗ್ಗೆ ಕುತೂಹಲವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ. ಈ ಪರಿಕಲ್ಪನೆಯು ಬಹಳಷ್ಟು ಯುವ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾಗಿರುತ್ತದೆ ಮತ್ತು ಕಾಲೇಜುಗಳಿಗೆ ತಮ್ಮ ವಿದ್ಯಾರ್ಥಿಗಳಿಗೆ ಈ ವಿಷಯಗಳ ಬಗ್ಗೆ ಕಲಿಸಲು ಉತ್ತಮ ಅತಿಥಿ ಅಧ್ಯಾಪಕರ ಅಗತ್ಯವಿರುತ್ತದೆ, ಏಕೆಂದರೆ ಅದೇ ವಿಷಯದ ಶೈಕ್ಷಣಿಕ ಪಠ್ಯಕ್ರಮವು ತುಂಬಾ ನೀರಸವಾಗಿರುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಅವರಿಗೆ ಸಲಹೆ ನೀಡಿದ್ದಾರೆ.
ಹಾಸಿಗೆ ಇದ್ದಷ್ಟೇ ಕಾಲು ಚಾಚಿ
ನಮ್ಮಲ್ಲಿ ಬಹುತೇಕರದ್ದು ವೇತನ ಹೆಚ್ಚಾಗುತ್ತಿದ್ದಂತೆ ಅವರ ಜೀವನಶೈಲಿಯೂ ಬದಲಾಗುತ್ತದೆ. ಸ್ಯಾಲರಿಗೆ ತಕ್ಕಂತೆ ಜೀವನಶೈಲಿಯನ್ನು ಬದಲಿಸಿಕೊಳ್ಳುವುದರಿಂದ ಲಕ್ಸುರಿ ವಸ್ತುಗಳು, ಕಾರುಗಳು, ಸ್ವಂತ ಮನೆಯ ಲೋನ್, ಬಟ್ಟೆಗಳು ಹೀಗೆ ಖರ್ಚಿಗೆ ದಾರಿ ಮಾಡುವ ವಸ್ತುಗಳೇ ಮನೆಯನ್ನು ತುಂಬುತ್ತವೆ. ಇದರಿಂದಾಗಿ ತಿಂಗಳ ಕೊನೆಯಲ್ಲಿ ಸಣ್ಣಪುಟ್ಟದಕ್ಕೂ ಯಾರನ್ನಾದರೂ ಬೇಡುವಂತಾಗುತ್ತದೆ. ಆದರೆ ನೀವು ಶ್ರೀಮಂತರಾಗುವುದು ನೀವು ಎಷ್ಟು ದುಡಿಮೆ ಮಾಡುತ್ತಿರಿ ಎಂಬುವುದರಿಂದ ಅಲ್ಲ, ನಿಮ್ಮ ದುಡಿಮೆಯಲ್ಲಿ ಎಷ್ಟು ಉಳಿಕೆ ಮಾಡುತ್ತಿರಿ ಎಂಬುವುದರಿಂದ ಎಂಬ ವಿಚಾರ ಬಹುತೇಕರಿಗೆ ತಿಳಿದೇ ಇಲ್ಲ. ಹೀಗಿರುವಾಗ ಈ ಪೋಸ್ಟ್ ಬಗ್ಗೆ ನಿಮಗೇನನಿಸುತ್ತೆ ಕಾಮೆಂಟ್ ಮಾಡಿ.
