ಕೇಂದ್ರದಿಂದ ಐಟಿ ರಿಟರ್ನ್ಸ್‌ ಪರಿಷ್ಕರಣೆಗೆ ಹೊಸ ಫಾರ್ಮ್!

* ಆದಾಯ ತೆರಿಗೆ ಇಲಾಖೆಯು ಪರಿಷ್ಕೃತ ಆದಾಯದ ಮೇಲಿನ ತೆರಿಗೆ ಪಾವತಿ

* ಕೇಂದ್ರದಿಂದ ಐಟಿ ರಿಟರ್ನ್ಸ್‌ ಪರಿಷ್ಕರಣೆಗೆ ಹೊಸ ಫಾರ್ಮ್!

* ಆದಾಯದ ಮೊತ್ತದೊಂದಿಗೆ, ಅದನ್ನು ಸಲ್ಲಿಸುತ್ತಿರುವುದಕ್ಕೆ ನಿಖರವಾದ ಕಾರಣ

Income Tax dept notifies form for filing updated IT returns pod

ನವದೆಹಲಿ(ಮೇ.02): ಆದಾಯ ತೆರಿಗೆ ಇಲಾಖೆಯು ಪರಿಷ್ಕೃತ ಆದಾಯದ ಮೇಲಿನ ತೆರಿಗೆ ಪಾವತಿಸಲು ಹೊಸ ಫಾಮ್‌ರ್‍ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ತೆರಿಗೆ ಪಾವತಿದಾರರು ತೆರಿಗೆ ಸಲ್ಲಿಸಬೇಕಾದ ಆದಾಯದ ಮೊತ್ತದೊಂದಿಗೆ, ಅದನ್ನು ಸಲ್ಲಿಸುತ್ತಿರುವುದಕ್ಕೆ ನಿಖರವಾದ ಕಾರಣವನ್ನು ನೀಡಬೇಕಾಗಿದೆ.

‘2019-20 ಹಾಗೂ 2020-​21ರ ಹಣಕಾಸು ವರ್ಷದಲ್ಲಿ ಪರಿಷ್ಕೃತ ಆದಾಯ ತೆರಿಗೆ ರಿಟನ್ಸ್‌ರ್‍ (ಐಟಿಆರ್‌-ಯು) ಸಲ್ಲಿಸಲು ಹೊಸ ಫಾಮ್‌ರ್‍ ಅನ್ನು ತೆರಿಗೆ ಪಾವತಿದಾರರಿಗೆ ಒದಗಿಸಲಾಗುವುದು. ಈ ಫಾಮ್‌ರ್‍ನಲ್ಲಿ ತೆರಿಗೆ ಪಾವತಿದಾರರು ತಮ್ಮ ಆದಾಯವನ್ನು ಪರಿಷ್ಕರಿಸುವಾಗ ಅದರೊಂದಿಗೆ ಫಾಮ್‌ರ್‍ನಲ್ಲಿ ನಮೂದಿಸಲಾದ- ಈ ಮೊದಲು ತೆರಿಗೆ ರಿಟರ್ನ್‌ ಪಾವತಿಯಾಗಿರಲಿಲ್ಲ, ಆದಾಯವನ್ನು ಸರಿಯಾಗಿ ನಮೂದಿಸಿರಲಿಲ್ಲ, ಆದಾಯದ ತಪ್ಪು ಮೂಲಗಳನ್ನು ಸೂಚಿಸಲಾಗಿತ್ತು. ನಷ್ಟದಿಂದಾಗಿ ಆದಾಯ ಇಳಿಕೆಯಾಯಿತು ಮೊದಲಾದ ಕಾರಣಗಳಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡಬೇಕಾಗಿದೆ’ ಎಂದು ಇಲಾಖೆ ತಿಳಿಸಿದೆ.

‘ಐಟಿಆರ್‌-ಅಪ್‌ಡೇಟ್‌ ಅನ್ನು ತೆರಿಗೆ ಪಾವತಿಸಿದ 2 ವರ್ಷಗಳ ಒಳಗಾಗಿ ಸಲ್ಲಿಸಬೇಕಾಗಿದೆ. ಹೆಚ್ಚುವರಿ ಮೊತ್ತದ ಶೇ. 25ರಷ್ಟುಬಾಕಿ ತೆರಿಗೆ ಹಾಗೂ ಬಡ್ಡಿದರವನ್ನು ಇದರೊಂದಿಗೆ ಸಲ್ಲಿಸಬೇಕಾಗುತ್ತದೆ. ಇದರೊಂದಿಗೆ ತೆರಿಗೆ ಸಲ್ಲಿಕೆಯ ವೇಳೆಯಲ್ಲಿ ಸ್ಪಷ್ಟವಾದ ಕಾರಣವನ್ನು ಸೂಚಿಸುವುದು ಹೆಚ್ಚಿನ ಮಾಹಿತಿ ವಿಶ್ಲೇಷಣೆ ಹಾಗೂ ಸಂಸ್ಕರಣೆಗಾಗಿ ಅನುಕೂಲಕರವಾಗಿದೆ’ ಎಂದು ಇಲಾಖೆ ತಿಳಿಸಿದೆ.

Latest Videos
Follow Us:
Download App:
  • android
  • ios