ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ| ಆರ್ಥಿಕ ಪುನಶ್ಚೇತನಕ್ಕೆ ಹಲವು ಸುಧಾರಣಾ ಕ್ರಮಗಳ ಘೋಷಣೆ| FPI ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಶುಲ್ಕವನ್ನು ರದ್ದತಿಯ ನಿರ್ಧಾರ| ಸ್ಟಾರ್ಟಪ್‌ಗಳ ಮೇಲಿನ ಏಜೆಂಲ್‌ ಟ್ಯಾಕ್ಸ್‌ ರದ್ದುಗೊಳಿಸಿದ ಕೇಂದ್ರ ಸರ್ಕಾರ| ಆಟೋಮೊಬೈಲ್‌ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಲವು ಕ್ರಮ  ಘೋಷಿಸಿದ ನಿರ್ಮಲಾ| ಬ್ಯಾಂಕ್‌ಗಳ ಪುನಶ್ಚೇತನಕ್ಕಾಗಿ 70 ಸಾವಿರ ಕೋಟಿ ರೂ. ಪ್ಯಾಕೇಜ್‌|

ನವದೆಹಲಿ(ಆ.23): ದೇಶದ ಆರ್ಥಿಕತೆ ಪುನಶ್ಚೇತನಕ್ಕೆ ಹಲವು ಸುಧಾರಣಾ ಕ್ರಮಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಫಾರಿನ್‌ ಪೋರ್ಟ್‌ಫೋಲಿಯೊ ಇನ್‌ವೆಸ್ಟರ್ಸ್(FPI) ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಶುಲ್ಕವನ್ನು ರದ್ದುಪಡಿಸಿದೆ.

Scroll to load tweet…

ಈ ಕುರಿತು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕ ಪ್ರಗತಿ ಗಣನೀಯವಾಗಿ ಏರಿಕೆಯಲ್ಲಿದೆ ಎಂದು ಹೇಳಿದರು.

Scroll to load tweet…

ದೀರ್ಘಾವಧಿ/ಅಲ್ಪಾವಧಿ ಬಂಡವಾಳ ಲಾಭದ ಮೇಲಿನ ಸುಂಕಗಳನ್ನು ತೆಗೆಯುವುದು, ಸ್ಟಾರ್ಟಪ್‌ಗಳ ಮೇಲಿನ ಏಜೆಂಲ್‌ ಟ್ಯಾಕ್ಸ್‌ ರದ್ದು ಸೇರದಿಂತೆ ಹಲವು ಸುಧಾರಣಾ ಕ್ರಮಗಳನ್ನು ವಿತ್ತ ಸಚಿವೆ ಘೋಷಿಸಿದರು. 

Scroll to load tweet…

ಕಾರ್ಪೊರೆಟ್‌ ಸಾಮಾಜಿಕ ಜವಾಬ್ದಾರಿ ಕುರಿತ ಪ್ರಕರಣಗಳನ್ನು ಕ್ರಿಮಿನಲ್‌ ಪ್ರಕರಣಗಳಾಗಿ ಪರಿಗಣಿಸದಿರಲು ನಿರ್ಧರಿಸಲಾಗಿದ್ದು, ಕಾರ್ಪೊರೇಟ್‌ ಸಾಮಾಜಿಕ ಬದ್ಧತೆ ಉಲ್ಲಂಘನೆ ಮಾಡುವುದು ಯಾವುದೇ ರೀತಿಯಲ್ಲೂ ಅಪರಾಧ ಅಲ್ಲ ಎಂದು ಹಣಕಾಸು ಸಚಿವರು ಸ್ಪಷ್ಟಪಡಿಸಿದರು.

Scroll to load tweet…

ಆಟೋಮೊಬೈಲ್‌ ಕ್ಷೇತ್ರಕ್ಕೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಬಾಕಿ ಇರುವ ಜಿಎಸ್‌ಟಿ ರಿಟರ್ನ್ಸ್ ಅನ್ನು 30 ದಿನಗಳೊಳಗೆ ಪಾವತಿಸುವುದಾಗಿ ಭರವಸೆ ನೀಡಿದರು.

Scroll to load tweet…

ಭಾರತೀಯ ರಿಸರ್ವ್‌ ಬ್ಯಾಂಕ್‌ ಇತ್ತೀಚೆಗೆ ರೆಪೊ ದರ ಕಡಿತಗೊಳಿಸಿದೆ. ಹೀಗಾಗಿ ಬ್ಯಾಂಕ್‌ಗಳು ಗ್ರಾಹಕರಿಗೆ ಬಡ್ಡಿದರ ಕಡಿತ ಮಾಡಲು ನಿರ್ಧರಿಸಿವೆ, ಇದರಿಂದ ಗೃಹ ಮತ್ತು ವಾಹನ ಸಾಲ ಬಡ್ಡಿದರ ಕಡಿಮೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದರು. 

Scroll to load tweet…

ತೆರಿಗೆ ಪಾವತಿಯ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗುವುದು, ಸುಧಾರಣೆ ನಮ್ಮ ಪ್ರಮುಖ ಅಜೆಂಡಾ ಆಗಿದೆ. ಆರ್ಥಿಕತೆ ಕುಸಿತದ ಭೀತಿಯನ್ನು ಹೋಗಲಾಡಿಸಲಾಗುವುದು ಎಂದು ಅವರು ಹೇಳಿದರು. ತೆರಿಗೆ ಪಾವತಿಯ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗುವುದು, ಸುಧಾರಣೆ ನಮ್ಮ ಪ್ರಮುಖ ಅಜೆಂಡಾ ಆಗಿದೆ. ಆರ್ಥಿಕತೆ ಕುಸಿತದ ಭೀತಿಯನ್ನು ಹೋಗಲಾಡಿಸಲಾಗುವುದು ಎಂದು ಅವರು ಹೇಳಿದರು.

Scroll to load tweet…

ಇದೇ ವೇಳೆ ಬ್ಯಾಂಕ್‌ಗಳ ಪುನಶ್ಚೇತನಕ್ಕಾಗಿ 70 ಸಾವಿರ ಕೋಟಿ ರೂ. ಪ್ಯಾಕೇಜ್‌ ಘೋಷಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.