Asianet Suvarna News Asianet Suvarna News

Budget 2022:ವಿವಿಧ ವಲಯಗಳ ಪ್ರತಿನಿಧಿಗಳೊಂದಿಗೆ ವಿತ್ತ ಸಚಿವರ ಬಜೆಟ್ ಪೂರ್ವ ಸಭೆ

ಬಜೆಟ್ ಪೂರ್ವಸಿದ್ಧತೆಯ ಭಾಗವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವಿಧ ವಲಯಗಳ ಪ್ರತಿನಿಧಿಗಳೊಂದಿಗೆ ಗುರುವಾರ  (ಡಿ.16) ಮತ್ತು ಶುಕ್ರವಾರ  (ಡಿ.17) ವರ್ಚುವಲ್ ಸಭೆಗಳನ್ನು ನಡೆಸಿದ್ದಾರೆ.

Finance Minister Nirmala Sitharaman holds virtual meet with financial sector representatives anu
Author
Bangalore, First Published Dec 17, 2021, 7:29 PM IST

ನವದೆಹಲಿ (ಡಿ.17):  ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಹಣಕಾಸು ವಲಯ ಹಾಗೂ ಕ್ಯಾಪಿಟಲ್ ಮಾರ್ಕೆಟ್ ಗೆ ಸಂಬಂಧಿಸಿದ ವಿವಿಧ ಪ್ರತಿನಿಧಿಗಳೊಂದಿಗೆ ಬಜೆಟ್ ಪೂರ್ವ  (Budget) ಸಮಾಲೋಚನೆಯನ್ನು ನಡೆಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ವರದಿ ಪ್ರಕಾರ ಈ ವಲಯಗಳ ಪ್ರತಿನಿಧಿಗಳು ಪ್ರಸ್ತಾವನೆಯೊಂದನ್ನು ಸಲ್ಲಿಸಿದ್ದಾರೆ ಹಾಗೂ ಅದ್ರಲ್ಲಿ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ ನಿಯಂತ್ರಣದಲ್ಲಿ ಹೆಚ್ಚಿನ ಹೊಂದಾಣಿಕೆ ತರಬೇಕಾದ ಅಗತ್ಯವಿದೆ ಎಂಬ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ.

ಆರ್ಥಿಕತೆಯ ಪ್ರಮುಖ ವಲಯಗಳಿಗೆ ಸುಸ್ಥಿರ ಹಣದ ಹರಿವು, ಕಾರ್ಪೋರೇಟ್ ಬಾಂಡ್ (Corporate bond) ಮಾರುಕಟ್ಟೆಯ ಅಭಿವೃದ್ಧಿ, ಬ್ಯಾಂಕ್(bank) ಹಾಗೂ ಇತರ ಹಣಕಾಸು ಸಂಸ್ಥೆಗಳ ನಡುವೆ ತೆರಿಗೆ ನಿಬಂಧನೆಗಳಿಗೆ ಸಂಬಂಧಿಸಿ ಸಮಾನತೆ ತರಬೇಕಾದ ಅಗತ್ದದ ಬಗ್ಗೆ ಕೂಡ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಯಿತು. ಹಣಕಾಸು ಸಚಿವರು(Finance Minister) ಕೈಗಾರಿಕಾ ಸಂಸ್ಥೆಗಳು(Industries) ಮೂಲಸೌಕರ್ಯ (Infrastructure)) ಹಾಗೂ ಹವಾಮಾನ ವೈಪರೀತ್ಯಕ್ಕೆ (Climate change) ಸಂಬಂಧಿಸಿದ ತಜ್ಞರ ಜೊತೆ ಕೂಡ ಸಭೆ ನಡೆಸಿದ್ದಾರೆ. ಇನ್ನು ಶುಕ್ರವಾರ ಸೇವಾ(Service)) ಹಾಗೂ ವ್ಯಾಪಾರ ವಲಯಕ್ಕೆ(business) ಸಂಬಂಧಿಸಿದವರ ಜೊತೆ ಕೂಡ ಚರ್ಚೆ ನಡೆಸಿದ್ದಾರೆ. ಈ ಎಲ್ಲ ಸಮಾಲೋಚನಾ ಸಭೆಗಳನ್ನು ವಿಡಿಯೋ ಕಾನ್ಫರೆನ್ಸ್(Video conference) ಅಥವಾ ವರ್ಚುವಲ್(virtual) ಆಗಿ ನಡೆಸಲಾಗುತ್ತದೆ ಎಂದು ವಿತ್ತ ಸಚಿವಾಲಯ (Finance Ministry) ಟ್ವೀಟ್ (Tweet) ಮುಖಾಂತರ ತಿಳಿಸಿದೆ. 

Women Retirement Plan: ಪುರುಷರಿಗಿಂತ ಹೆಚ್ಚು ಉಳಿಸೋದು ಹೆಣ್ಮಕ್ಕಳು!

ಈ ಸಮಾಲೋಚನೆ ಏಕೆ?
ಬಜೆಟ್  ಸಿದ್ಧಪಡಿಸೋ ಮುನ್ನ ವಿವಿಧ ವಲಯಗಳ ಪ್ರತಿನಿಧಿಗಳೊಂದಿಗೆ ವಿತ್ತ ಸಚಿವರು ಸಮಾಲೋಚನೆ ನಡೆಸುತ್ತಾರೆ. ಈ ಸಮಾಲೋಚನೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ಸಲಹೆಗಳನ್ನು ಬಜೆಟ್ ಸಿದ್ಧಪಡಿಸೋ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಯಾವ ವಲಯದಲ್ಲಿ ಏನೆಲ್ಲ ಸಮಸ್ಯೆಯಿದೆ? ಬಜೆಟ್ ನಲ್ಲಿ ಅದಕ್ಕೆ ಯಾವ ರೀತಿ ಪರಿಹಾರ ಒದಗಿಸಬಹುದು? ಯಾವ ವಲಯದ ಮೇಲಿನ ತೆರಿಗೆ ಕಡಿತಗೊಳಿಸಬೇಕು ಅಥವಾ ಹೆಚ್ಚಿಸಬೇಕು ಎಂಬ ಕುರಿತು ಈ ಸಭೆಗಳಿಂದ ಒಂದಿಷ್ಟು ಮಾಹಿತಿ ಸಿಗುತ್ತದೆ.

ಬಜೆಟ್ ಯಾವಾಗ?
2022ರ ಫೆಬ್ರವರಿ 1ರಂದು 2022-23 ನೇ ಸಾಲಿನ ಬಜೆಟ್ ಮಂಡನೆಯಾಗೋ ಸಾಧ್ಯತೆಯಿದೆ. ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಅರ್ಧ ಭಾಗದಲ್ಲಿ ಬಜೆಟ್ ಮಂಡನೆಯಾಗುತ್ತದೆ. ಬಜೆಟ್ ಅಧಿವೇಶನ ಪ್ರತಿವರ್ಷ ಜನವರಿ ಕೊನೆಯ ವಾರದಲ್ಲಿ ಪ್ರಾರಂಭವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ನಾಲ್ಕನೇ ಬಜೆಟ್ ಇದಾಗಿದೆ. 

Life Insurance Premium Increase:ಹೊಸ ವರ್ಷದಲ್ಲಿ ಜೀವ ವಿಮಾ ಪ್ರೀಮಿಯಂ ದುಬಾರಿ?

ಬಜೆಟ್ ಮೇಲೆ ಕೋವಿಡ್ -19 ಪರಿಣಾಮ
ಈ ಬಾರಿಯ ಬಜೆಟ್ ನಲ್ಲಿ ಯಾವೆಲ್ಲ ವಲಯಗಳಿಗೆ ಕೇಂದ್ರ ಸರ್ಕಾರ (Central government) ಹೆಚ್ಚಿನ ಮಹತ್ವ ನೀಡಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಅದ್ರಲ್ಲೂ ಕೊರೋನಾ (Corona) ಕಾರಣದಿಂದ ದೇಶದ ಆರ್ಥಿಕತೆ ಮೇಲೆ ಸಾಕಷ್ಟು ಪೆಟ್ಟು ಕೂಡ ಬಿದ್ದಿದೆ. ಆದ್ರೆ ಈಗ ನಿಧಾನವಾಗಿ ದೇಶದ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದೆ. ಇತ್ತೀಚೆಗೆ ನಡೆದ ದ್ವಿಮಾಸಿಕ ಹಣಕಾಸು ನೀತಿ ಪರಿಶೀಲನೆ ಸಭೆಯಲ್ಲಿ  ಆರ್ ಬಿಐ(RBI) 2021-22ನೇ ಸಾಲಿನಲ್ಲಿ ಜಿಡಿಪಿ(GDP) ಪ್ರಗತಿ ಶೇ.9.5ರಷ್ಟಿತ್ತು ಎಂದು ಹೇಳಿದೆ. ಜಿಡಿಪಿಯಲ್ಲಿನ ವಿತ್ತೀಯ ಕೊರತೆ(Financial Deficit) ಶೇ.6.8ರಷ್ಟಿದೆ ಎಂದು ಸರ್ಕಾರ ಹೇಳಿತ್ತು. ಹೀಗಾಗಿ ಯಾವ ವಲಯದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬಹುದು. ಸರ್ಕಾರದ ಬೊಕ್ಕಸಕ್ಕೆ ಕೊರೋನಾ (corona) ಕಾರಣದಿಂದ ಉಂಟಾದ ನಷ್ಟವನ್ನು ತುಂಬಿಕೊಳ್ಳಲು ತೆರಿಗೆಗಳಲ್ಲಿ ಎಷ್ಟು ಏರಿಕೆ ಮಾಡಬಹುದು ಎಂಬ ಕುತೂಹಲವಂತೂ ಎಲ್ಲರಲ್ಲೂ ಇದೆ. 


 

Follow Us:
Download App:
  • android
  • ios