Asianet Suvarna News Asianet Suvarna News

ವಾರ್ಷಿಕವಾಗಿ 5 ಲಕ್ಷ ರೂ. ಆದಾಯ ನಿಮ್ಮದಾ?: ಟ್ಯಾಕ್ಸ್ ಕಟ್ಟಲು ಮರೆತುಬಿಡಿ!

ಲೋಕಸಭೆಯಲ್ಲಿ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆ| ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ ಕೇಂದ್ರ ಹಣಕಾಸು ಸಚಿವೆ| ಅರ್ಥ ಪಥದ ನೀಲನಕ್ಷೆ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್|ವಾರ್ಷಿಕವಾಗಿ 5 ಲಕ್ಷ ರೂ. ಆದಾಯಕ್ಕೆ ತೆರಿಗೆ ಇಲ್ಲ| ದೇಶದ ಮಧ್ಯಮ ವರ್ಗಕ್ಕೆ ಮೋದಿ 2.0 ಸರ್ಕಾರ ಭರ್ಜರಿ ಕೊಡುಗೆ| ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸಿದ ಕೇಂದ್ರ ಸರ್ಕಾರ| 'ನೇರ ತೆರಿಗೆ 11 ಲಕ್ಷ ಕೋಟಿ ರೂ.ಗೆ ಏರಿಕೆ'| ತೆರಿಗೆ ಪಾವತಿ ವೇಳೆ ಪ್ಯಾನ್ ಕಾರ್ಡ್ ಬದಲಾಗಿ ಆಧಾರ್ ಕಾರ್ಡ್ ಬಳಸುವ ಅವಕಾಶ| ಇನ್ಮುಂದೆ ಡಿಜಿಟಲ್ ಪೇಮೆಂಟ್ಸ್'ಗೆ TDS ಇಲ್ಲ|ಬ್ಯಾಂಕ್‌ಗಳ ಏಕೀಕರಣಕ್ಕೆ ಒತ್ತು ನೀಡಲು ಸರ್ಕಾರ ಮುಂದು|

Finance Minister Announces No Tax For Upto 5 lakhs Annual Income
Author
Bengaluru, First Published Jul 5, 2019, 1:23 PM IST

ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಟ್ಟಿದ್ದಾರೆ. ಬಜೆಟ್ ಭಾಷಣ ಪೂರ್ಣಗೊಳಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಮೋದಿ ಸರ್ಕಾರ ಈ ಹಿಂದೆ ನೀಡಿದ್ದ ವಾರ್ಷಿಕ 5 ಲಕ್ಷ ರೂ. ಆದಾಯವರೆಗೆ ತೆರಿಗೆ ವಿನಾಯ್ತಿಯನ್ನು ಈ ಬಾರಿಯೂ ಮುಂದುವರೆಸಲಾಗಿದೆ. ಈ ಮೂಲಕ ದೇಶದ ಮಧ್ಯಮ ವರ್ಗಕ್ಕೆ ಮೋದಿ 2.0 ಸರ್ಕಾರ ಭರ್ಜರಿ ಕೊಡುಗೆ ನೀಡಿದೆ.

ತೆರಿಗೆ ಸಂಗ್ರಹದಲ್ಲಿ ಶೇ.78ರಷ್ಟು ಏರಿಕೆಯಾಗಿದ್ದು, ಜನರ ಮೇಲೆ ಹೆಚ್ಚಿನ ತೆರಿಗೆ ಹೊರಿಸಲು ಬಯಸುವಿದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇದೇ ವೇಳೆ ವಾರ್ಷಿಕ 400 ಕೋಟಿ ರೂ. ಆದಾಯ ಇರುವ ಉದ್ಯಮಕ್ಕೆ ಶೇ.25ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಜೊತೆಗೆ ನೇರ ತೆರಿಗೆ 11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವಿತ್ತ ಸಚಿವೆ ಘೋಷಿಸಿದ್ದಾರೆ.

ಇನ್ನು ಕೋಟ್ಯಾಧಿಪತಿಗಳಿಗೆ ಹೆಚ್ಚಿನ ತೆರಿಗೆ ಬರೆ ವಿಧಿಸಿರುವ ಸರ್ಕಾರ, 2 ರಿಂದ 5 ಕೋಟಿ ರೂ. ಆದಾಯ ಹೊಂದಿರುವವರಿಗೆ ಶೇ.3ರಷ್ಟು ಹಾಗೂ 5 ರಿಂದ 10 ಕೋಟಿ ರೂ. ಆದಾಯಕ್ಕೆ ಶೇ. 7ರಷ್ಟು ಹೆಚ್ಚಿನ ತೆರಿಗೆ ವಿಧಿಸಲಾಗಿದೆ.

ಇನ್ನು ತೆರಿಗೆ ಪಾವತಿ ವೇಳೆ ಪ್ಯಾನ್ ಕಾರ್ಡ್ ಬದಲಾಗಿ ಆಧಾರ್ ಕಾರ್ಡ್ ಬಳಸುವ ಅವಕಾಶವನ್ನು ಸರ್ಕಾರ ಒದಗಿಸಿದೆ. ಒಂದು ವೇಳೆ ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಆಧಾರ್ ಕಾರ್ಡ್ ಬಳಸಿ ತೆರಿಗೆ ಪಾವತಿಸಬಹುದಾಗಿದೆ.

ಡಿಜಿಟಲ್ ಪೇಮೆಂಟ್ಸ್'ಗೆ TDS ಇಲ್ಲ ಎಂದು ಘೋಷಿಸಿರುವ ಕೇಂದ್ರ, 1 ಕೋಟಿ ರೂ.ಗಿಂತ ಹೆಚ್ಚಿನ ಹಣ ಪಾವತಿ ವೇಳೆ ಮಾತ್ರ ಶೇ. TDS ವಿಧಿಸಲಾಗಿದೆ.

ಬ್ಯಾಂಕ್‌ಗಳ ಏಕೀಕರಣಕ್ಕೆ ಒತ್ತು ನೀಡಲು ಸರ್ಕಾರ ಮುಂದಾಗಿದ್ದು, ಎಲ್ಲಾ ಬ್ಯಾಂಕ್‌ಗಳ 1 ಲಕ್ಷ ಕೋಟಿ ರೂ. ಅನುತ್ಪಾದಕ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ನಿರ್ಮಲಾ ಸದನಕ್ಕೆ ಮಾಹಿತಿ ನೀಡಿದರು.

ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಗೆ 70 ಸಾವಿರ ಕೊಟಿ ರೂ. ಮರುಪೂರ್ಣ ಮಾಡಲಾಗಿದೆ ಎಂದು ಹಣಕಾಸು ಸಚಿವೆ ಘೋಷಿಸಿದರು.

Follow Us:
Download App:
  • android
  • ios