ಫೆಬ್ರವರಿ ತಿಂಗಳಲ್ಲಿ ವಿವಿಧ ಹಬ್ಬ ಹಾಗೂ ರಾಜ್ಯೋತ್ಸವಗಳ ಕಾರಣದಿಂದಾಗಿ ಹಲವು ದಿನ ಬ್ಯಾಂಕ್‌ಗಳು ಬಂದ್ ಆಗಿರುತ್ತವೆ. ಈ ತಿಂಗಳಲ್ಲಿ ಯಾವ್ಯಾವ ದಿನಗಳಲ್ಲಿ ಬ್ಯಾಂಕ್‌ಗಳು ರಜೆ ಹೊಂದಿವೆ ಎಂಬುದನ್ನು ತಿಳಿದುಕೊಂಡು ನಿಮ್ಮ ಕೆಲಸಗಳನ್ನು ಪ್ಲಾನ್ ಮಾಡಿ.

2025ರ ಮೊದಲ ತಿಂಗಳಾದ ಜನವರಿ ಮುಗಿದೇ ಹೋಯ್ತು, ಓಡೋಡುತ್ತಾ ಫೆಬ್ರವರಿಯೂ ಬರುತ್ತಿದ್ದು, ಈ ತಿಂಗಳಲ್ಲಿ ಬ್ಯಾಂಕ್‌ಗಳು ಯಾವ ದಿನಗಳಲ್ಲಿ ರಜೆ ಹೊಂದಿವೆ ಎಂಬ ಮಾಹಿತಿ ಇಲ್ಲಿದೆ. ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾದ ಪ್ರಕಾರ ಇಲ್ಲಿ ರಾಜ್ಯವಾರು ಯಾವ ಯಾವ ದಿನ ಬ್ಯಾಂಕ್‌ಗಳಿಗೆ ರಜೆ ಇದೆ ಎಂಬ ಮಾಹಿತಿ ಇದೆ. ಸಾರ್ವಜನಿಕ ರಜಾದಿನಗಳಂದು ಬ್ಯಾಂಕ್‌ಗಳಿಗೆ ರಜೆ ಇರುತ್ತವೆ. ಇದರ ಜೊತೆಗೆ ಕೆಲವು ಪ್ರಾದೇಶಿಕ ರಜೆಗಳು ಆಯಾಯ ಪ್ರದೇಶವನ್ನು ಅವಲಂಬಿಸಿರುತ್ತವೆ. ಹಾಗೆಯೇ ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಕೆಲವು ಪ್ರಾದೇಶಿಕ ರಜಾದಿನಗಳನ್ನು, ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ.

ಫೆಬ್ರವರಿಯಲ್ಲಿ ವಿವಿಧ ಹಬ್ಬಗಳ ಕಾರಣಕ್ಕೆ ಬ್ಯಾಂಕುಗಳು ಹಲವಾರು ದಿನಗಳವರೆಗೆ ಮುಚ್ಚಲ್ಪಟ್ಟಿವೆ. ನಿಮಗೆ ಪ್ರಮುಖ ಬ್ಯಾಂಕಿಂಗ್ ಕೆಲಸಗಳನ್ನು ಪೂರ್ಣಗೊಳಿಸಬೇಕಿದ್ದರೆ ಈ ರಜಾ ದಿನಾಂಕಗಳನ್ನು ಗಮನದಲ್ಲಿರಿಸಿಕೊಂಡು ನೀವು ಬ್ಯಾಂಕ್ ಗಳಿಗೆ ಭೇಟಿ ನೀಡಿ ನಿಮ್ಮ ಕೆಲಸಗಳನ್ನು ಮುಗಿಸಬೇಕಿದೆ. ಹಾಗಾಗಿ ನಾವಿಲ್ಲಿ ಫೆಬ್ರವರಿ ತಿಂಗಳ ಬ್ಯಾಂಕ್ ರಜಾ ದಿನಗಳನ್ನು ಇಲ್ಲಿ ನೀಡುತ್ತಿದ್ದೇವೆ. 

  • ಫೆಬ್ರವರಿ 3 ಸರಸ್ವತಿ ಪೂಜೆ - ಹರಿಯಾಣ, ಒಡಿಶಾ, ಪಂಜಾಬ್, ತ್ರಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ 
  • ಫೆಬ್ರವರಿ 11 - ಥಾಯ್ ಪೂಸಂ - ತಮಿಳುನಾಡಿನಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.
  • ಫೆಬ್ರವರಿ 15 ಲುಯಿ ನ್ಗೈ ನಿ - ಮಣಿಪುರದಲ್ಲಿ ಬ್ಯಾಂಕುಗಳಿಗ ರಜೆ ಇರುತ್ತದೆ. 
  • ಫೆಬ್ರವರಿ 19 ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ , ಮಹಾರಾಷ್ಟ್ರದಲ್ಲಿ ಬ್ಯಾಂಕುಗಳಿಗೆ ರಜೆ
  • ಫೆಬ್ರವರಿ 20 ಅರುಣಾಚಲ ಪ್ರದೇಶ ರಾಜ್ಯೋತ್ಸವ ದಿನ ಹಾಗೂ ಮಿಜೋರಾಂ ರಾಜ್ಯೋತ್ಸವ ಹೀಗಾಗಿ ಈ ಎರಡು ರಾಜ್ಯಗಳಲ್ಲಿ ಬ್ಯಾಂಕುಗಳು ಮುಖ್ಯ ಕಾರ್ಯನಿರ್ವಹಣೆಗೆ ಮುಚ್ಚಲಿವೆ
  • ಫೆಬ್ರವರಿ 26 ಮಹಾ ಶಿವರಾತ್ರಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಹೊರತುಪಡಿಸಿ ರಾಷ್ಟ್ರೀಯ ಮಟ್ಟದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತವೆ. 
  • ಫೆಬ್ರವರಿ 28 ಲೋಸರ್ ಸಿಕ್ಕಿಂನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಬರೀ ಇಷ್ಟೇ ಅಲ್ಲ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳಿಗೆ ರಜೆ ಇರೋದು ನಿಮಗೆ ಗೊತ್ತೆ ಇದೆ. ರಾಷ್ಟ್ರೀಯ ರಜಾ ದಿನಗಳು, ಸಾರ್ವಜನಿಕ ರಜಾದಿನಗಳು ಮತ್ತು ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಪ್ರಾದೇಶಿಕ ರಜಾದಿನಗಳ ಜೊತೆಗೆ ಬ್ಯಾಂಕ್ ರಜಾದಿನಗಳ ಬಗ್ಗೆ ಮುಂಚಿತವಾಗಿ ತಿಳಿದಿರುವುದರಿಂದ ಗ್ರಾಹಕರು ತಮ್ಮ ಭೇಟಿಗಳನ್ನು ಅದಕ್ಕೆ ಅನುಗುಣವಾಗಿ ಯೋಜಿಸಬಹುದಾಗಿದೆ. ಬ್ಯಾಂಕುಗಳು ಮುಚ್ಚಿದ್ದರೂ ಸಹ, ಗ್ರಾಹಕರು ಇನ್ನೂ ವಿವಿಧ ಬ್ಯಾಂಕಿಂಗ್ ಕಾರ್ಯಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸಬಹುದು. ಬ್ಯಾಂಕ್ ರಜಾದಿನಗಳಲ್ಲಿ UPI, ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ನಂತಹ ಸೇವೆಗಳು ಲಭ್ಯವಿರುತ್ತವೆ, ಗ್ರಾಹಕರು ತಮ್ಮ ಕೆಲಸವನ್ನು ಎಲ್ಲಿಂದಲಾದರೂ ಅನುಕೂಲಕರವಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. ಆದರೆ ಬ್ಯಾಂಕ್‌ಗೆ ಭೇಟಿ ನೀಡಿಯೇ ಮಾಡಬೇಕಾದ ಕೆಲಸಗಳಿದ್ದರೆ ಈ ರಜಾ ದಿನಗಳ ಬಗ್ಗೆ ನಿಮಗೆ ಗಮನದಲ್ಲಿರಲಿ.