Asianet Suvarna News Asianet Suvarna News

ಭಾರತೀಯ ಷೇರು ಮಾರುಕಟ್ಟೆಗೆ ತಟ್ಟಿದ ಅಮೆರಿಕಾದ ಆರ್ಥಿಕ ಹಿಂಜರಿತ ಭೀತಿ : ದಿನದ ಆರಂಭದಲ್ಲೇ ಭಾರಿ ಕುಸಿತ

 ಅಮೆರಿಕಾ ಆರ್ಥಿಕತೆಯಲ್ಲಿ ಹಿಂಜರಿತ ಭೀತಿಯ ಪ್ರಭಾವವು ಭಾರತೀಯ ಷೇರು ಮಾರುಕಟ್ಟೆಯನ್ನು ಕೂಡ ತಟ್ಟಿದ್ದು,  ದಿನದ ಆರಂಭದಲ್ಲೇ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ. 

Fear of economic recession in America indian stock market fell sharply at the beginning of the day akb
Author
First Published Aug 5, 2024, 10:18 AM IST | Last Updated Aug 5, 2024, 10:48 AM IST

ಮುಂಬೈ: ಅಮೆರಿಕಾ ಆರ್ಥಿಕತೆಯಲ್ಲಿ ಹಿಂಜರಿತ ಭೀತಿಯ ಪ್ರಭಾವವು ಭಾರತೀಯ ಷೇರು ಮಾರುಕಟ್ಟೆಯನ್ನು ಕೂಡ ತಟ್ಟಿದ್ದು,  ದಿನದ ಆರಂಭದಲ್ಲೇ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಹಾಗೂ ಭಾರತೀಯ ಇಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಇಂದು ದಿನದ ವಹಿವಾಟಿನ ಆರಂಭದಲ್ಲೇ ಜಾಗತಿಕ ಏರುಪೇರುಗಳಿಂದಾಗಿ ಕುಸಿತ ಕಂಡವು.

ಬಿಎಸ್‌ಇ ಸೆನ್ಸೆಕ್ಸ್ 80,000 ಪಾಯಿಂಟ್ಕೆ ಳಗೆ ಚಲಿಸಿದರೆ, ನಿಫ್ಟಿ 50; 24,300 ರ ಸಮೀಪದಲ್ಲಿತ್ತು. ಬೆಳಗ್ಗೆ 9.17ರ ಸುಮಾರಿಗೆ ಬಿಎಸ್‌ಇ ಸೆನ್ಸೆಕ್ಸ್ 79,579.21ರಲ್ಲಿ ವ್ಯವಹಾರ ನಡೆಸುತ್ತಿದ್ದು, 1402 ಅಂಕ ಅಂದರೆ 1.73ರಷ್ಟು ಕುಸಿತ ಕಂಡಿತ್ತು. ಹಾಗೆಯೇ ನಿಫ್ಟಿಪಿಪ್ಟಿ 24,303.80 ಅಂಕಗಳಲ್ಲಿ ಟ್ರೇಡಿಂಗ್‌ ಮಾಡುತ್ತಿದ್ದು, 414 ಅಂದರೆ 1.67 ರಷ್ಟು ಕುಸಿತ ಕಂಡಿತ್ತು. ಈ ಸಮಯದಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಸನ್‌ ಫಾರ್ಮಾ ಹಾಗೂ ಹಿಂದೂಸ್ತಾನ್ ಯುನಿಲಿವರ್ ಮಾತ್ರ ಗಳಿಕೆ (ಏರಿಕೆ) ಮಾಡಿದ ಷೇರುಗಳಾಗಿವೆ. 

ಹಾಗೆಯೇ ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಅದಾನಿ ಪೋರ್ಟ್‌ ಎಸ್ಇಝೆಡ್, ಮಾರುತಿ ಸುಜುಕಿ, ಎಸ್‌ಬಿಐ, ಜೆಎಸ್‌ಡಬ್ಲ್ಯು ಸ್ಟೀಲ್ ಹಾಗೂ ಎಂ&ಎಂ ಪ್ರಸ್ತುತ ಇಳಿಕೆ ಕಂಡ ಪ್ರಮುಖ ಷೇರುಗಳಾಗಿವೆ. ಭಾರತದ ಷೇರು ಮಾರುಕಟ್ಟೆ ಮಾತ್ರವಲ್ಲದೇ ಜಾಗತಿಕ ಹಣಕಾಸು ಮಾರುಕಟ್ಟೆಗಳು ಇಂದು ಗಮನಾರ್ಹ ಪ್ರಕ್ಷುಬ್ಧ ಸ್ಥಿತಿಯನ್ನು ಹೊಂದಿವೆ.  ಏಷ್ಯಾದ ಷೇರು ಮಾರುಕಟ್ಟೆಗಳು ಕುಸಿಯುತ್ತಿದ್ದು ಹೂಡಿಕೆದಾರರು ಬಾಂಡ್‌ಗಳ ಆಶ್ರಯ ಪಡೆಯುತ್ತಿದ್ದಾರೆ. ಅಮೆರಿಕಾದ ಆರ್ಥಿಕತೆಯು ಆರ್ಥಿಕ ಹಿಂಜರಿತದತ್ತ ಸಾಗುತ್ತಿರಬಹುದು ಎಂಬ ವರದಿ ಹಾಗೂ ಭಯವೇ ಮಾರುಕಟ್ಟೆಯಲ್ಲಿ ಈ ರೀತಿಯ ಹಠಾತ್ ಏರುಪೇರಿಗೆ ಕಾರಣವಾಗಿದೆ.  ಇದರಿಂದ ಟ್ರೇಡರ್‌ಗಳು ಕ್ಷಿಪ್ರವಾಗಿ ತಮ್ಮ ನಿರೀಕ್ಷೆಗೆ ತಕ್ಕಂತೆ ಬಡ್ಡಿದರಗಳನ್ನು ಹೊಂದಿಸಲು ಪ್ರೇರೇಪಿಸುವಂತೆ ಮಾಡಿದವು. 

Latest Videos
Follow Us:
Download App:
  • android
  • ios