Asianet Suvarna News Asianet Suvarna News

FDI Inflow:2021ನೇ ಸಾಲಿನಲ್ಲಿ ಭಾರತಕ್ಕೆ ಎಫ್ ಡಿಐ ಒಳಹರಿವಿನಲ್ಲಿ ಶೇ.15 ಇಳಿಕೆ; 74.01 ಬಿಲಿಯನ್ ಡಾಲರ್ ಗೆ ಕುಸಿತ

*2020ನೇ ಕ್ಯಾಲೆಂಡರ್ ಸಾಲಿನಲ್ಲಿ 87.55 ಬಿಲಿಯನ್ ಡಾಲರ್ ಎಫ್ ಡಿಐ ಒಳಹರಿವು 
*ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ
*ವಿವಿಧ ವಲಯಗಳಲ್ಲಿ ಎಫ್ ಡಿಐ ಹೂಡಿಕೆಗೆ ಸಂಬಂಧಿಸಿ ನಿಯಮಗಳಲ್ಲಿ ಸುಧಾರಣೆ
 

FDI inflow to India declines to 74.01 billion dollar in 2021
Author
Bangalore, First Published Mar 24, 2022, 8:21 PM IST

ನವದೆಹಲಿ (ಮಾ.24): 2021ನೇ ಕ್ಯಾಲೆಂಡರ್ ವರ್ಷದಲ್ಲಿ ಭಾರತಕ್ಕೆ (India) ಒಟ್ಟು ವಿದೇಶಿ ನೇರ ಹೂಡಿಕೆ (FDI) ಒಳಹರಿವು ಶೇ.15ರಷ್ಟು ಕುಸಿದಿದೆ. 2021ನೇ ಸಾಲಿನಲ್ಲಿ ಭಾರತಕ್ಕೆ  74.01 ಬಿಲಿಯನ್ ಡಾಲರ್ (Dollar) ಎಫ್ ಡಿಐ ಹರಿದು ಬಂದಿದ್ದು, ಅದರ ಹಿಂದಿನ ಸಾಲಿನಲ್ಲಿ 87.55 ಬಿಲಿಯನ್ ಡಾಲರ್ ಎಫ್ ಡಿಐ ಒಳಹರಿವು ದಾಖಲಾಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ (Ministry of Commerce & Industry) ಬುಧವಾರ ತಿಳಿಸಿದೆ. 

ಎಫ್ ಡಿಐ ಒಳಹರಿವು ಇಕ್ವಿಟಿ (equity) ಒಳಹರಿವು, ಅಸಂಘಟಿತ ಸಂಸ್ಥೆಗಳ ಇಕ್ವಿಟಿ ಕ್ಯಾಪಿಟಲ್ (equity capital ), ಗಳಿಕೆಯ ಮರುಹೂಡಿಕೆ ( re-invested earnings) ಹಾಗೂ ಇತರ ಬಂಡವಾಳಗಳನ್ನು (Capital) ಒಳಗೊಂಡಿದೆ. 'ಎಫ್ ಡಿಐ ವಾಣಿಜ್ಯ ವ್ಯವಹಾರಗಳ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ ಹಾಗೂ ಎಫ್ ಡಿಐ ಒಳಹರಿವು ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ, ಮಾರುಕಟ್ಟೆ ಗಾತ್ರ, ಮೂಲಸೌಕರ್ಯ, ರಾಜಕೀಯ ಹಾಗೂ ಸಾಮಾನ್ಯ ಹೂಡಿಕೆ ವಾತಾವರಣ ಹಾಗೂ ಸ್ಥೂಲ ಆರ್ಥಿಕ ಸ್ಥಿರತೆ (macro-economic stability)ಹಾಗೂ ವಿದೇಶಿ ಹೂಡಿಕೆದಾರರ ಹೂಡಿಕೆ ನಿರ್ಧಾರದ ಮೇಲೆ ಅವಲಂಬಿತವಾಗಿದೆ. 2020ನೇ ಕ್ಯಾಲೆಂಡರ್ ವರ್ಷಕ್ಕೆ ಹೋಲಿಸಿದ್ರೆ 2021ನೇ ಕ್ಯಾಲೆಂಡರ್ ವರ್ಷದಲ್ಲಿ ಎಫ್ ಡಿಐ (FDI) ಒಳಹರಿವು ಶೇ.15ರಷ್ಟು ತಗ್ಗಿದೆ' ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವರಾದ ಸೋಮ್ ಪ್ರಕಾಶ್ ಲೋಕಸಭೆಗೆ ನೀಡಿರೋ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

SBI Tax Savings FD: 5 ವರ್ಷದ FD ತೆರೆಯಿರಿ, ತೆರಿಗೆ ಉಳಿಸಿ; ಆನ್ ಲೈನ್ ನಲ್ಲಿ ಎಫ್ ಡಿ ಖಾತೆ ತೆರೆಯೋದು ಹೇಗೆ?

ಎಫ್ ಡಿಐ (FDI) ಉತ್ತೇಜನಕ್ಕೆ ಸರ್ಕಾರ ಕೆಲವು ಹೂಡಿಕೆಸ್ನೇಹಿ (Investor friendly) ನೀತಿಗಳನ್ನು ಜಾರಿಗೊಳಿಸಿದೆ. ಕೆಲವು ಮಹತ್ವದ ವಲಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ವಲಯಗಳಲ್ಲೂ ಸ್ವಯಂಚಾಲಿತ ಮಾರ್ಗದಡಿಯಲ್ಲಿ ಶೇ.100ರಷ್ಟು ಎಫ್ ಡಿಐಗೆ ಅವಕಾಶ ನೀಡಲಾಗಿದೆ. ಅಲ್ಲದೆ, ಆಗಾಗ ಪರಿಸ್ಥಿತಿಯನ್ನು ಅವಲೋಕಿಸಿ ಎಫ್ ಡಿಐ ನೀತಿಗಳನ್ನು ಪರಿಷ್ಕರಿಸೋ ಮೂಲಕ ಹೂಡಿಕೆದಾರರಿಗೆ ಭಾರತ ಆಕರ್ಷಕ ಹಾಗೂ ಹೂಡಿಕೆಸ್ನೇಹಿ ತಾಣವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

'ಅಪೆಕ್ಸ್ ಇಂಡಸ್ಟ್ರಿ ಚೇಂಬರ್ಸ್, ಅಸೋಸಿಯೇಷನ್ಸ್, ಕೈಗಾರಿಕೆಗಳು ಅಥವಾ ಇತರ ಗುಂಪುಗಳ ಪ್ರತಿನಿಧಿಗಳು ಹಾಗೂ ಇತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಸಮಾಲೋಚನೆ ನಡೆಸಿದ ಬಳಿಕವೇ ಎಫ್ ಡಿಐ ನೀತಿಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಸರ್ಕಾರ ಇತ್ತೀಚೆಗೆ ವಿವಿಧ ವಲಯಗಳಿಗೆ ಸಂಬಂಧಿಸಿ ಸಾಕಷ್ಟು ಸುಧಾರಣೆಗಳನ್ನು ಕೈಗೊಂಡಿದೆ. ಇತ್ತೀಚೆಗೆ ವಿವಿಧ ವಲಯಗಳಿಗೆ ಸಂಬಂಧಿಸಿ ಸರ್ಕಾರ ಅನೇಕ ಸುಧಾರಣೆಗಳನ್ನು ಕೈಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ವಿಮೆ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ, ದೂರಸಂಪರ್ಕ ಇತ್ಯಾದಿ ವಲಯಗಳಿಗೆ ಸಂಬಂಧಿಸಿ ಎಫ್ ಡಿಐ ನೀತಿಯಲ್ಲಿ ಸುಧಾರಣೆಗಳನ್ನು ತರಲಾಗಿದೆ' ಎಂದು ಸಚಿವರು ತಿಳಿಸಿದ್ದಾರೆ. 

IT Raid:ಹೀರೋ ಮೋಟೋಕಾರ್ಪ್ ಅಧ್ಯಕ್ಷರಿಗೂ ಐಟಿ ದಾಳಿ ಬಿಸಿ; ನಿವಾಸ,ಕಚೇರಿ ಸೇರಿ 25 ಸ್ಥಳಗಳಲ್ಲಿ ಶೋಧ

2022ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ (Union Budget) ಕೂಡ ಹೂಡಿಕೆಗೆ ಪೂರಕವಾದ ವಿಷಯಗಳಿಗೆ ಆದ್ಯತೆ ನೀಡಲಾಗಿದೆ.ಭಾರತ ವಿದೇಶಿ ನೇರ ಬಂಡವಾಳ (FDI)ಆರ್ಕಷರ್ಣೆಗೆ ಪೂರಕವಾಗಿ ನೀತಿಗಳಲ್ಲಿ ಸುಧಾರಣೆ, ಹೂಡಿಕೆಗೆ ಉತ್ತೇಜನ ನೀಡುವಂತಹ ಕ್ರಮಗಳ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದೆ. 2021ರ ಏಪ್ರಿಲ್ ನಿಂದ ನವೆಂಬರ್ ತನಕ ಭಾರತಕ್ಕೆ 54.1ಬಿಲಿಯನ್ ಅಮೆರಿಕನ್ ಡಾಲರ್ ಎಫ್ ಡಿಐ (FDI) ಹರಿದು ಬಂದಿದೆ. ಕಂಪ್ಯೂಟರ್ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್, ಅಟೋಮೊಬೈಲ್ ಸೇವೆಗಳು, ಶಿಕ್ಷಣ, ವಾಣಿಜ್ಯ, ನಿರ್ಮಾಣ ಚಟುವಟಿಕೆಗಳು ಹಾಗೂ ರಕ್ಷಣಾ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಎಫ್ ಡಿಐ ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ ಎಂದು ಸರ್ಕಾರ ಈ ಹಿಂದೆ ಮಾಹಿತಿ ನೀಡಿತ್ತು ಕೂಡ.

Follow Us:
Download App:
  • android
  • ios