Asianet Suvarna News Asianet Suvarna News

ಇನ್ಮುಂದೆ ಉಡುಪುಗಳು ಬಾಡಿಗೆಗೆ ಸಿಗುತ್ತದೆ, ಪ್ರಸಿದ್ಧ ಕಂಪನಿಯ ದಿಟ್ಟ ಹೆಜ್ಜೆ

ಕಾಲ ಬದಲಾಗುತ್ತಿರುತ್ತದೆ ಅದರ ಜತೆಗೆ ನಮ್ಮ ಸುತ್ತಲಿನ ಪರಿಸರ ಕೂಡಾ. ಪರಿಸರ ಮಾಲಿನ್ಯ ತಡೆಯುವಲ್ಲಿ ನಾವು ಇಡುವ ಒಂದು ಚಿಕ್ಕ ಹೆಜ್ಜೆಯೂ ಸಹ ಮುಂದೆ ಅಷ್ಟೇ ಪ್ರಾಮುಖ್ಯ ಪಡೆದುಕೊಳ್ಳಬಹುದು. ಇಂಥದ್ದೇ ಒಂದು ಸಾಹಸಕ್ಕೆ ಈ ಕಂಪನಿ ಹೆಜ್ಜೆ ಇಟ್ಟಿದೆ.
 

Fashion retailer H and M company starts dress materials for rent scheme
Author
Bengaluru, First Published Dec 7, 2019, 10:44 AM IST

ಬೆಂಗಳೂರು(ಡಿ. 07)  ಹವಾಮಾನ ವೈಪರೀತ್ಯ ಜನರನ್ನು ಕಂಗೆಡಿಸಿದೆ. ಪ್ರಕೃತಿಯಲ್ಲಿ ಕಂಡು ಬರುತ್ತಿರುವ ಈ ಸಮಸ್ಯೆಗಳಿಗೆ ಫ್ಯಾಷನ್ ಇಂಡಸ್ಟ್ರಿ ಪಾತ್ರ ಬಹುದೊಡ್ಡದು. ಹೀಗಿರುವಾಗ ಈ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಒಂದು ಉಡುಪುಗಳ ಬಾಡಿಗೆ ಸೇವೆ ಆರಂಭಿಸಲು ಸಜ್ಜಾಗಿದೆ.

ಸ್ವೀಡಿಶ್ ನ ಪ್ರಸಿದ್ಧ ಕಂಪನಿ ಎಚ್ ಆ್ಯಂಡ್ ಎಂ ಪರಿಸರ ಮಾಲಿನ್ಯ ಹಾಗೂ ಹಾನಿ ತಡೆಯುವ ನಿಟ್ಟಿನಲ್ಲಿ ಉಡುಪುಗಳನ್ನು ಬಾಡಿಗೆಗೆ ನೀಡುವ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ. ಬನಾನಾ ರಿಪಬ್ಲಿಕ್ ಹಾಗೂ ಅರ್ಬನ್ ಔಟ್ ಫಿಟ್ಟರ್ಸ್ ಕಂಪನಿಗಳು ಇಂತಹ ಈ ವರ್ಷದ ಆರಂಭದಲ್ಲಿ ಇಂತಹ ಸೇವೆಯನ್ನಾರಂಭಿಸಿದ್ದವು. ಇದರ ಬೆನ್ನಲ್ಲೇ ಫ್ಯಾಷನ್ ಕ್ಷೇತ್ರದ ದಿಗ್ಗಜ ಕಂಪನಿ ಎಚ್ ಆ್ಯಂಡ್ ಎಂ ಕೂಡಾ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ಎಚ್ ಆ್ಯಂಡ್ ಎಂ ಕಂಪನಿ ಆರಂಭಿಸಿರುವ ಈ ಬಾಡಿಗೆ ಬಟ್ಟೆಗಳ ಸೇವೆ ಸದ್ಯ ಸ್ವೀಡನ್ ರಾಜಧಾನಿ ಸ್ಟಾಕ್ ಹೋಂನಲ್ಲಿರುವ ಮಳಿಗೆಯಲ್ಲಷ್ಟೇ ಲಭ್ಯವಿದ್ದು, ಆರಂಭದಲ್ಲಿ ಕೇವಲ 50 ಬಟ್ಟೆಗಳನ್ನಷ್ಟೇ ಬಾಡಿಗೆಗೆ ಇಡಲಾಗಿದೆ. ಇವುಗಳನ್ನು ಕಂಪೆನಿಯ ನಿಷ್ಟಾವಂತ ಸದಸ್ಯರಿಗಷ್ಟೇ ನೀಡಲಾಗುತ್ತಿದೆ.

ಬೆಂಗಳೂರು: ಪ್ರಮುಖ ಜ್ಯುವೆಲರಿ ಶಾಪ್ ಗಳ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ...

ಈ ಯೋಜನೆಯನ್ನು ತನ್ನೆಲ್ಲಾ ಶಾಖೆಗಳಿಗೂ ವಿಸ್ತರಿಸುವ ಮುನ್ನ, ಕಂಪೆನಿಯು ಮೂರು ತಿಂಗಳ ಕಾಲ ತನ್ನ ಸೇವೆಯಿಂದ ಉಪಯೋಗವಾಗುತ್ತದೆಯೇ ಎಂಬುವುದನ್ನು ಅವಲೋಕಿಸಲಿದೆ. ಇವೆಲ್ಲವನ್ನು ಹೊರತುಪಡಿಸಿ ಕಂಪೆನಿಯು ಬಟ್ಟೆಗಳ ಹೊಲಿಗೆ ಸೌಲಭ್ಯ, ಕಾಫೀ ಶಾಪ್ ಹಾಗೂ ಬ್ಯೂಟಿ ಬಾರ್ ವ್ಯವಸ್ಥೆಯನ್ನೂ ಮಾಡಲಿದೆ.

Follow Us:
Download App:
  • android
  • ios