ವಜ್ರೋದ್ಯಮದ ದೊರೆಯಾದ ರೈತನ ಮಗ; ಸಾವ್ಜಿ ಧಂಜಿ ಧೋಲಕಿಯಾ ಯಶಸ್ಸಿನ ಕಥೆ ಇಲ್ಲಿದೆ

ಭಾರತದ ವಜ್ರೋದ್ಯಮದಲ್ಲಿ ಸಾವ್ಜಿ ಧಂಜಿ ಧೋಲಕಿಯಾ ಅವರ ಹೆಸರು ಮುಂಚೂಣಿಯಲ್ಲಿದೆ. ಸಾಧಾರಣ ರೈತ ಕುಟುಂಬದಿಂದ ಬಂದ ಅವರು ವಜ್ರೋದ್ಯಮ ಸಾಮ್ರಾಜ್ಯ ಕಟ್ಟಿದ ಕಥೆ ನಿಜಕ್ಕೂ ಪ್ರೇರಣೆ ಪ್ರೇರಣಾದಾಯಿ.
 

Farmers Son to Diamond Tycoon Tracing Savji Dhanjis Remarkable Journey To Success anu

Business Desk: ವಜ್ರ ಉದ್ಯಮದಲ್ಲಿ ಜನಪ್ರಿಯತೆ ಗಳಿಸಿರೋರಲ್ಲಿ ಸಾವ್ಜಿ ಧಂಜಿ ಧೋಲಕಿಯಾ ಕೂಡ ಒಬ್ಬರು. ಹರಿಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥಾಪಕ ಅಧ್ಯಕ್ಷರಾಗಿರುವ ಇವರು, ಸೂರತ್ ನ ಅತ್ಯಂತ ಯಶಸ್ವಿ ಉದ್ಯಮಿ ಎಂದೇ ಗುರುತಿಸಿಕೊಂಡಿದ್ದಾರೆ. ವಿನಯ ಹಾಗೂ ವ್ಯವಹಾರ ನೈಪುಣ್ಯತೆಯಿಂದ ಇವರು ತಮ್ಮ ಕಂಪನಿಯನ್ನು ಭಾರತದ ಅತ್ಯಂತ ಪ್ರಮುಖ ವಜ್ರ ತಯಾರಿಕಾ ಹಾಗೂ ರಫ್ತು ಸಂಸ್ಥೆಯಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಈ ಕಂಪನಿ ಕೇಂದ್ರ ಕಚೇರಿಯನ್ನು ಹೊಂದಿದೆ. ಧೋಲಕಿಯಾ ಅವರು ಸರಳತೆಗೆ ಹೆಸರಾದವರು. ಅವರು ಉದ್ಯಮದಲ್ಲಿ ಜನಪ್ರಿಯತೆ ಹಾಗೂ ಯಶಸ್ಸು ಗಳಿಸಿದ್ದರೂ ಅದು ಅವರ ಸ್ವಭಾವದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅವರ ಸಮಯೋಚಿತ ನಿರ್ಧಾರಗಳು ಹಾಗೂ ಯೋಜನೆಗಳು ಅವರ ಕಂಪನಿಯನ್ನು ಪ್ರಬಲಗೊಳಿಸಿರುವ ಜೊತೆಗೆ ಮುಂದಿನ ಜನಾಂಗಕ್ಕೆ ಕೂಡ ಭದ್ರ ಅಡಿಪಾಯವನ್ನು ಹಾಕಿಕೊಟ್ಟಿದೆ. ಇನ್ನು ಅವರ ಪುತ್ರ ಧ್ರುವ ಧೋಲಕಿಯಾ ಕೂಡ ಸಂಸ್ಥೆಯನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ.

ಗುಜರಾತಿನ ರೈತ ಕುಟುಂಬದಲ್ಲಿ 1962ರ ಏಪ್ರಿಲ್ 12ರಂದು ಜನಿಸಿದ ಧೋಲಕಿಯಾ, ಬಾಲ್ಯದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟಗಳನ್ನು ಅನುಭವಿಸಿದ್ದರು. ಇದೇ ಕಾರಣಕ್ಕೆ ಅವರು 4ನೇ ತರಗತಿಗೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದರು. ಆ ಬಳಿಕ ಸಹೋದರರಾದ ಹಿಮ್ಮತ್ ಹಾಗೂ ತುಳಸಿ ಒತೆಗೆ ಸೂರತ್ ನಲ್ಲಿ ಚಿಕ್ಕಪ್ಪಮ ವಜ್ರೋದ್ಯಮಕ್ಕೆ ಸೇರ್ಪಡೆಗೊಂಡರು. ಇಲ್ಲಿ ಅವರಿಗೆ ವಜ್ರೋದ್ಯಮದ ಸಂಪೂರ್ಣ ಪರಿಚಯ ಸಿಕ್ಕಿತು. 

760ರೂ. ವೇತನ ಪಡೆಯುತ್ತಿದ್ದ ವ್ಯಕ್ತಿ ಈಗ ಪ್ರತಿಷ್ಟಿತ ಕಂಪನಿ ಮುಖ್ಯಸ್ಥ; ಕೊಡುಗೈ ದಾನಿಯಾಗಿರುವ ಈತ ಯಾರು ಗೊತ್ತಾ?

ಸಹೋದರರ ಜೊತೆ ಸೇರಿ ಕಂಪನಿ ಸ್ಥಾಪನೆ
ಸಾವ್ಜಿ ಧಂಜಿ ಧೋಲಕಿಯಾ 1992 ರಲ್ಲಿ ಸಹೋದರರಾದ ತುಳಸಿ, ಹಿಮ್ಮತ್ ಮತ್ತು ಘನಶ್ಯಾಮ್ ಅವರ ಜೊತೆಗೂಡಿ ವಜ್ರ ತಯಾರಿಕಾ ಸಂಸ್ಥೆ ಸ್ಥಾಪಿಸಿದರು. ಸೂರತ್ ನಲ್ಲಿ ಸ್ಥಾಪನೆಗೊಂಡ ಹರಿ ಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಈ ಸಂಸ್ಥೆಯನ್ನು ಅವರು ಯಶಸ್ವಿಯಾಗಿ ಮುನ್ನಡೆಸಿದರು. ಕಂಪನಿಯ ಡೈಮಂಡ್-ಕಟ್ಟಿಂಗ್ ಹಾಗೂ ಪಾಲಿಶಿಂಗ್ ಘಟಕವನ್ನು ಸೂರತ್ ನಲ್ಲಿ ಸ್ಥಾಪಿಸಿದರು. ಇನ್ನು ರಫ್ತು ಕಚೇರಿಯನ್ನು ಮುಂಬೈನಲ್ಲಿ ಸ್ಥಾಪಿಸಿದರು. 

ನಾಲ್ವರು ಮಕ್ಕಳು
ಸಾವ್ಜಿ ಧಂಜಿ ಧೋಲಕಿಯಾ ಗೌರಿಬೆನ್ ಧೋಲಕಿಯಾ ಅವರನ್ನು ವಿವಾಹವಾಗಿದ್ದು, ಮೇನಾ, ನಿಮಿಷಾ, ದ್ರವ್ಯ ಮತ್ತು ಕಿಸ್ನಾ ಎಂಬ ನಾಲ್ವರು ಮಕ್ಕಳಿದ್ದಾರೆ. ಧೋಲಕಿಯಾ ಅವರ ಉದ್ಯಮವನ್ನು ಅವರ ಪುತ್ರ ದ್ರವ್ಯ ಮುನ್ನಡೆಸುತ್ತಿದ್ದಾರೆ. ಧೋಲಕಿಯಾ ಅದೆಷ್ಟೇ ಯಶಸ್ಸು, ಸಂಪತ್ತು ಗಳಿಸಿದ್ದರು ಸರಳ ಜೀವನ ನಡೆಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಅನೇಕರಿಗೆ ನೆರವು ನೀಡುತ್ತಿದ್ದಾರೆ ಕೂಡ.

ನಿವ್ವಳ ಸಂಪತ್ತು ಎಷ್ಟು ಗೊತ್ತಾ?
ಸಾವ್ಜಿ ಧಂಜಿ ಧೋಲಕಿಯಾ ಸುಮಾರು 12,000 ಕೋಟಿ ರೂ. ನಿವ್ವಳ ಸಂಪತ್ತು ಹೊಂದಿದ್ದಾರೆ. ಇನ್ನು ಧೋಲಕಿಯಾ ತಮ್ಮ ಉದ್ಯೋಗಿಗಳಿಗೆ ದೀಪಾವಳಿಗೆ ದುಬಾರಿ ಉಡುಗೊರೆಗಳನ್ನು ನೀಡುವ ಮೂಲಕ ಕೂಡ ಆಗಾಗ ಸುದ್ದಿಯಲ್ಲಿರುತ್ತಾರೆ. ಇವರು ತಮ್ಮ ಉದ್ಯೋಗಿಗಳಿಗೆ ಕಾರುಗಳು, ಫ್ಲ್ಯಾಟ್ ಗಳು ಹಾಗೂ ಸ್ಥಿರ ಠೇವಣಿಗಳು ಸೇರಿದಂತೆ ದುಬಾರಿ ಮೌಲ್ಯದ ಉಡುಗೊರೆಗಳನ್ನು ನೀಡುತ್ತಾರೆ. 2016ರಲ್ಲಿ ಅವರು  400 ಫ್ಲಾಟ್‌ಗಳು ಮತ್ತು 1,260 ಕಾರುಗಳನ್ನು ದೀಪಾವಳಿ ಬೋನಸ್‌ ರೂಪದಲ್ಲಿ ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು  2018ರ ಅಕ್ಟೋಬರ್ ನಲ್ಲಿ ಅವರು ತಮ್ಮ ಉದ್ಯೋಗಿಗಳಿಗೆ ಸುಮಾರು 600 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು. 

ಭಾರತದ ರೈತ ಕುಟುಂಬದಲ್ಲಿ ಹುಟ್ಟಿದ ಈತ ಇಂದು ಅಮೆರಿಕದ ಎರಡು ಕಂಪನಿಗಳ ಮಾಲೀಕ; ಈತನ ಆಸ್ತಿ ಎಷ್ಟು ಗೊತ್ತಾ?

ಸಾವ್ಜಿ ಧಂಜಿ ಧೋಲಕಿಯಾ ವಿವಿಧ ಉದ್ಯಮ ತಂತ್ರಗಳು, ಮಾರುಕಟ್ಟೆ ಜ್ಞಾನದ ಮೂಲಕ ತಮ್ಮ ಕಂಪನಿಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆ ಮೂಲಕ ಭಾರತದ  ಉದ್ಯಮ ಕ್ಷೇತ್ರದಲ್ಲಿ ಹೆಸರು ಹಾಗೂ ಮನ್ನಣೆ ಗಳಿಸಿದ್ದಾರೆ.


 

Latest Videos
Follow Us:
Download App:
  • android
  • ios