ಕ್ಯಾನ್ ಗಳು ಹಾಗೂ ಬಾಟಲಿಗಳನ್ನು ಮರುಬಳಕೆ ಮಾಡುವ ಮೂಲಕ 7 .6 ಮಿಲಿಯನ್ ಡಾಲರ್ ಗಳಿಸಿದ ಕುಟುಂಬವೊಂದು ವಂಚನೆ ಆರೋಪದಲ್ಲಿ ಜೈಲು ಪಾಲಾಗಿದೆ. 

Business Desk:ಕೇವಲ ಕ್ಯಾನ್ ಹಾಗೂ ಬಾಟಲ್ ಗಳನ್ನು ಮರುಬಳಕೆ (ರಿಸೈಕಲ್) ಮಾಡುವ ಮೂಲಕ ಕ್ಯಾಲಿಫೋರ್ನಿಯಾದ ಕುಟುಂಬವೊಂದು 7.6 ಮಿಲಿಯನ್ ಡಾಲರ್ ಗಳಿಸಿದೆ. ಆದರೆ. ಇದು ಕುಟುಂಬವನ್ನು ಜೈಲು ಸೇರಿಸಿದೆ ಕೂಡ. ಕ್ಯಾನ್ ಮತ್ತು ಬಾಟಲ್ ಮೂಲಕ ಈ ಕುಟುಂಬ ಸಂಪಾದನೆ ಮಾಡಿರೋದನ್ನು ಅಮೆರಿಕ ಸರ್ಕಾರ ವಂಚನೆ ಎಂದು ಆಪಾದಿಸಿದೆ. ಹೌದು, ಸರ್ಕಾರದ ಮರುಬಳಕೆ ಕಾರ್ಯಕ್ರಮವೊಂದನ್ನು ದುರ್ಬಳಕೆ ಮಾಡಿಕೊಂಡು ಈ ಕುಟುಂಬ ಹಣ ಗಳಿಸಿದೆ. ಈ ತಿಂಗಳು ಸಲ್ಲಿಕೆಯಾದ ಅಪರಾಧ ದೂರಿನಲ್ಲಿ ಕುಟುಂಬದ ಎಂಟು ಸದಸ್ಯರು ಬಳಕೆಯಾದ ಕ್ಯಾನ್ ಗಳು ಹಾಗೂ ಬಾಟಲ್ ಗಳನ್ನು ಅರಿಝೋನದಿಂದ ರಫ್ತು ಮಾಡಿಕೊಂಡಿದ್ದರು. ಆ ಬಳಿಕ ಅದನ್ನು ಕ್ಯಾಲಿಫೋರ್ನಿಯಾದಲ್ಲಿ ರಿಸೈಕಲಿಂಗ್ ಮಾಡಿದ್ದರು ಎಂಬ ಮಾಹಿತಿ ನೀಡಲಾಗಿದೆ. ಎಂಟು ತಿಂಗಳ ಕಾಲಾವಧಿಯಲ್ಲಿ ನದಿತೀರದಲ್ಲಿ ವಾಸಿಸುತ್ತಿದ್ದ ಈ ಕುಟುಂಬ ಸುಮಾರು 178 ಟನ್ ಗಳಷ್ಟು ಕ್ಯಾನ್ ಗಳು ಹಾಗೂ ಬಾಟಲಿಗಳನ್ನು ರಾಜ್ಯ ರಿಸೈಕಲಿಂಗ್ ಯೋಜನೆ ಮುಖಾಂತರ ಮಾರಾಟ ಮಾಡಿ 7.6 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಕ್ಯಾಲಿಫೋರ್ನಿಯಾ ಬಿವರೇಜ್ ಕಂಟೇನರ್ ರಿಸೈಕಲಿಂಗ್ ಅಥವಾ ಕಾಲ್ ರಿಸೈಕಲ್ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದಲ್ಲಿರುವ 1,200 ರಿಸೈಕಲಿಂಗ್ ಕೇಂದ್ರಗಳಿಗೆ ನೀಡಿದ ಪ್ರತಿ ಕ್ಯಾನ್ ಅಥವಾ ಬಾಟಲ್ ಮೇಲೆ 5 ಅಥವಾ 10 ಸೆಂಟ್ಸ್ ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಗ್ರಾಹಕರು ಹಣಕಾಸಿನ ನೆರವು ನೀಡಿದ್ದಾರೆ. ಆದರೆ, ಕ್ಯಾಲಿಫೋರ್ನಿಯಾದಲ್ಲಿ ಖರೀದಿಸಿದ ಕ್ಯಾನ್ ಗಳು ಹಾಗೂ ಬಾಟಲ್ ಗಳು ಮಾತ್ರ ಈ ರಿಸೈಕಲಿಂಗ್ ಪ್ರಕ್ರಿಯೆಗೆ ಅರ್ಹವಾಗಿವೆ.

ಅರಿಜೋನ್ ನಲ್ಲಿ ಅಂಥ ಯಾವುದೇ ಕಾರ್ಯಕ್ರಮವಿಲ್ಲ
ಅರಿಜೋನ್ ನಿಂದ ಕ್ಯಾನ್‌ ಗಳು ಹಾಗೂ ಬಾಟಲಿಗಳನ್ನು ಆಮದು ಮಾಡಿಕೊಂಡು, ಆ ಬಳಿಕ ವಿವಿಧ ರಿಸೈಕಲಿಂಗ್ ಕೇಂದ್ರಗಳ ಮುಖಾಂತರ ಅವುಗಳನ್ನು ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಈ ಕುಟುಂಬ ವಂಚನೆಯಲ್ಲಿ ತೊಡಗಿದೆ ಎಂದು ಅಭಿಯೋಜಕರು ಆರೋಪಿಸಿದ್ದಾರೆ. ಈ ರೀತಿ ಮಾಡುವ ಮೂಲಕ ಅವರು ಎಂಟು ತಿಂಗಳ ಅವಧಿಯಲ್ಲಿ 7.6 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಆದರೆ, ಈಗ ಸರ್ಕಾರಕ್ಕೆ ಮೋಸ ಮಾಡಿದ ಕಾರಣದಿಂದ ಕುಟುಂಬ ಜೈಲು ಸೇರಬೇಕಾಗಿದೆ.

ಭಾರತದಲ್ಲೂ ಹೆಚ್ಚಾಗಿದೆ ವೆಸ್ಟ್ ಕಲ್ಚರ್, ಕುಡಿಯೋದ್ರಲ್ಲೂ ನಾವೂ ಬಿದ್ದಿಲ್ಲ ಹಿಂದೆ

'ಕ್ಯಾಲಿಫೋರ್ನಿಯಾ ರಿಸೈಕಲಿಂಗ್ ಕಾರ್ಯಕ್ರಮಕ್ಕೆ ಗ್ರಾಹಕರು ಹಣಕಾಸಿನ ನೆರವು ನೀಡಿದ್ದಾರೆ. ಇದು ನಮ್ಮ ಪರಿಸರ ಹಾಗೂ ಸಮುದಾಯವನ್ನು ಸಂರಕ್ಷಿಸಲು ನೆರವು ನೀಡುತ್ತದೆ ಎಂದು ಅಟಾರ್ನಿ ಜನರಲ್ ರಾಬ್ ಬೊನ್ಟ ತಿಳಿಸಿದ್ದಾರೆ. 'ಕ್ರಿಮಿನಲ್ ಕಾರ್ಯಚರಣೆಗಳ ಮೂಲಕ ಇದರ ಸಮಗ್ರತೆಯನ್ನು ತಗ್ಗಿಸಲು ಪ್ರಯತ್ನಿಸೋರನ್ನು ಇದಕ್ಕೆ ಜವಾಬ್ದಾರರನ್ನಾಗಿ ಮಾಡಲಾಗುವುದು. ಈ ವಂಚನೆಯನ್ನು ಪತ್ತೆ ಹಚ್ಚುವ ಮೂಲಕ ಕ್ಯಾಲಿಫೋರ್ನಿಯಾ ಗ್ರಾಹಕರಿಗೆ ಸೇರಿದ ನಿಧಿಯನ್ನು ಸಂರಕ್ಷಿಸಲು ಒಟ್ಟಾಗಿ ದುಡಿದ ನನ್ನ ತನಿಖಾ ತಂಡದ ಸದಸ್ಯರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಬೊನ್ಟ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಕುಟುಂಬದ ಎಂಟು ಸದಸ್ಯರ ವಿರುದ್ಧ ರಿಸೈಕಲಿಂಗ್ ವಂಚನೆ, ನಿಧಿ ಕಳ್ಳತನ ಹಾಗೂ ಸಂಚಿನ ಆರೋಪ ಮಾಡಲಾಗಿದೆ. 

2 ತಿಂಗ್ಳಿಂದ ಒದ್ದಾಡಿದ್ರೂ ಕಂಪನಿ ನೋಂದಣಿ ಆಗಿಲ್ಲ, ಬೆಂಗಳೂರು ಸಹವಾಸ ಬೇಡ ಎಂದ ಸಿಇಒ!

ಕಳೆದ ವರ್ಷ ಆರು ಜನರ ಮೇಲೆ ಅರಿಜೋನ್-ಕ್ಯಾಲಿಫೋರ್ನಿಯಾ ರಿಸೈಕಲಿಂಗ್ ಕಾರ್ಯಕ್ರಮದ ದುರ್ಬಳಕೆ ಆರೋಪದಲ್ಲಿ ಆರು ಜನರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಒಂಭತ್ತು ಟನ್ ಗಳಷ್ಟು ಖಾಲಿಯಾದ ತಂಪುಪಾನೀಯ ಬಾಟಲ್ ಗಳನ್ನು ರಿಸೈಕಲ್ ಮಾಡುವ ಮೂಲಕ ಅಭಿಯೋಜಕರು 10 ಮಿಲಿಯನ್ ಡಾಲರ್ ಗಿಂತಲೂ ಅಧಿಕ ಹಣ ಗಳಿಸಿದ್ದಾರೆ. ಲಾಭದಾಯಕವಲ್ಲದ ಗ್ರಾಹಕರ ವಾಚ್ ಡಾಗ್ ವರದಿ ಅನ್ವಯ 2010 ಹಾಗೂ 2019ರ ನಡುವಿನ ಅವಧಿಯಲ್ಲಿ ಕ್ಯಾಲಿಫೊರ್ನಿಯಾದಲ್ಲಿ ಕನಿಷ್ಠ 93 ಜನರನ್ನು ಅಪರಾಧಿಗಳು ಎಂದು ಪರಿಗಣಿಸಲಾಗಿತ್ತು.