ಥ್ಯಾಂಕ್ಯೂ ಇಂಡಿಯಾ: ಫಲಿಸಿದ ಮೋದಿ-ಜೇಟ್ಲಿ ಪ್ಲ್ಯಾನ್, ಐಟಿಆರ್ @ಕ್ಲೌಡ್9!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Sep 2018, 2:26 PM IST
Extended deadline for filing income tax returns ends
Highlights

ಆದಾಯ ತೆರಿಗೆ ಸಲ್ಲಿಕೆ ಗಡುವು ಮುಕ್ತಾಯ! ಒಟ್ಟು 5.29 ಕೋಟಿ ರಿಟರ್ನ್ಸ್ ಸಲ್ಲಿಕೆ! ಕಳೆದ ಬಾರಿ 3.2 ಕೋಟಿಯಷ್ಟು ಐಟಿಆರ್ ಸಲ್ಲಿಕೆ! ಐಟಿಆರ್ ಸಲ್ಲಿಕೆಯಲ್ಲಿ ಶೇ.60 ರಷ್ಟು! ನೋಟು ನಿಷೇಧದ ನಂತರ ಹೆಚ್ಚಾದ ತೆರಿಗೆದಾರರ ಸಂಖ್ಯೆ

 

ನವದೆಹಲಿ(ಸೆ.1): ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದಕ್ಕೆ ಆ.31ರಂದು ಗಡುವು ಮುಕ್ತಾಯಗೊಂಡಿದ್ದು, 5.29 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 

ಈ ವರ್ಷ ಒಟ್ಟಾರೆ 5,29,66,509 ಐಟಿಆರ್ ಗಳನ್ನು ತೆರಿಗೆದಾರರು ಸಲ್ಲಿಕೆ ಮಾಡಿದ್ದು, ಒಂದೇ ದಿನದಲ್ಲಿ 22 ಲಕ್ಷದ ವರೆಗೆ ಐಟಿ ರಿಟರ್ನ್ಸ್ ನ್ನು ಐಟಿ ಇಲಾಖೆ ಸ್ವೀಕರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆ.31 ರಂದು ಮಧ್ಯ ರಾತ್ರಿವರೆಗೂ 5.29 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಇಲಾಖೆ ಸಷ್ಟಪಡಿಸಿದೆ.

ಕಳೆದ ವರ್ಷ 3.2 ಕೋಟಿಯಷ್ಟು ಐಟಿಆರ್ ಸಲ್ಲಿಕೆ ಮಾಡಲಾಗಿತ್ತು, ಈ ವರ್ಷ ಶೇ.60 ರಷ್ಟು ಐಟಿಆರ್ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೋಟು ನಿಷೇಧದ ನಂತರ ಹೆಚ್ಚಾದ ತೆರಿಗೆದಾರರ ಸಂಖ್ಯೆ ಹಾಗೂ ಐಟಿಆರ್ ನ್ನು ವಿಳಂಬವಾಗಿ ಸಲ್ಲಿಸುವವರಿಗೆ ದಂಡ ವಿಧಿಸುವ ನಿಯಮ ಜಾರಿಗೊಳಿಸಿರುವುದರಿಂದ ಗಡುವಿಗೂ ಮುನ್ನವೇ ಐಟಿ ರಿಟರ್ನ್ಸ್ ಸಲ್ಲಿಕೆ ಕಳೆದ ಬಾರಿಗಿಂತ ಏರಿಕೆ ಕಂಡಿದೆ.

loader