ಷೇರು ಮಾರುಕಟ್ಟೆ ಮೇಲೆ ಚುನಾವಣೋತ್ತರ ಸಮೀಕ್ಷೆ ಪರಿಣಾಮ| ಏಕಾಏಕಿ ಜಿಗಿತ ಕಂಡ ಸೆನ್ಸೆಕ್ಸ್ ಮತ್ತು ನಿಫ್ಟಿ| ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಎಂದಿದ್ದ ಚುನಾವಣೋತ್ತರ ಸಮೀಕ್ಷೆಗಳು| ಬ್ಯಾಂಕಿಂಗ್, ಹೌಸಿಂಗ್ ಫೈನಾನ್ಸ್, ಆಟೋಮೊಬೈಲ್ ವಲಯದ ಷೇರುಗಳು ಏರುಗತಿ| ಸ್ಥಿರ ಸರ್ಕಾರ ಬಂದರೆ ಷೇರು ಮಾರುಕಟ್ಟೆ ಏರಿಕೆ ಮುಂದುವರಿಕೆ|
ನವದೆಹಲಿ(ಮೇ.21): ಕಳೆದ ಭಾನುವಾರ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆ ಪರಿಣಾಮ ಷೇರು ಮಾರುಕಟ್ಟೆ ಮೇಲೂ ಬೀರಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಏಕಾಏಕಿ ಜಿಗಿತ ಕಂಡಿದೆ.
ಇಂದು ಸೆನ್ಸೆಕ್ಸ್ 1,421. 90 ಅಂಕ ಏರಿಕೆಯೊಂದಿಗೆ 39,352.67ರಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ನಿಫ್ಟಿಯಲ್ಲಿ 421.10 ಪಾಯಿಂಟ್ ಏರಿಕೆಯಾಗುವ ಮೂಲಕ 11,828.25ಕ್ಕೆ ದಿನದ ವಹಿವಾಟು ಮುಗಿದಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರಳ ಬಹುಮತಕ್ಕೂ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂಬ ಚುನಾವಣೋತ್ತರ ಸಮೀಕ್ಷೆ ವರದಿಯಿಂದ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ.
ಬ್ಯಾಂಕಿಂಗ್, ಹೌಸಿಂಗ್ ಫೈನಾನ್ಸ್, ಆಟೋಮೊಬೈಲ್ ವಲಯದ ಷೇರುಗಳು ಏರುಗತಿ ಕಂಡಿದ್ದು, ಸ್ಥಿರ ಸರ್ಕಾರ ಬಂದರೆ ಷೇರು ಮಾರುಕಟ್ಟೆ ಏರಿಕೆ ಮುಂದುವರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
