ಯುರೋಪ್‌ನಲ್ಲಿ ಕ್ಯಾಬ್ ಕಂಪನಿ ಉಬರ್‌ಗೆ 9,226 ಕೋಟಿ ರೂ. ದಂಡ ವಿಧಿಸಲಾಗಿದೆ. ಚಾಲಕರ ಖಾತೆಗಳನ್ನು ಯಾವುದೇ ಮಾನವ ಪರಿಶೀಲನೆ ಇಲ್ಲದೆ ಸ್ವಯಂಚಾಲಿತವಾಗಿ ಅಮಾನತುಗೊಳಿಸಿದ್ದಕ್ಕಾಗಿ ನೆದರ್‌ಲ್ಯಾಂಡ್ಸ್ ಡೇಟಾ ಪ್ರೊಟೆಕ್ಷನ್ ವಾಚ್‌ಡಾಗ್ ಈ ಕ್ರಮ ಕೈಗೊಂಡಿದೆ. ಇದು ಚಾಲಕರ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.
ಕ್ಯಾಬ್ ಬುಕ್ಕಿಂಗ್ ಕಂಪನಿ ಉಬರ್‌ಗೆ ಯುರೋಪ್‌ನಲ್ಲಿ ಭಾರೀ ಮೊತ್ತದ ದಂಡ ವಿಧಿಸಲಾಗಿದೆ. ನೆದರ್‌ಲ್ಯಾಂಡ್ಸ್ ಡೇಟಾ ಪ್ರೊಟೆಕ್ಷನ್ ವಾಚ್‌ಡಾಗ್, ಉಬರ್ ಕಂಪನಿಯ ಮೇಲೆ 825 ಮಿಲಿಯನ್ ಯುರೋಗಳು ಅಂದರೆ ಭಾರತದಲ್ಲಿ ರೂಪಾಯಿಯಲ್ಲಿ 9,226 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ಯುರೋಪ್‌ನಲ್ಲಿ ಉಬರ್‌ಗೆ ಆಘಾತ
ಯಾವುದೇ ಮುನ್ಸೂಚನೆ ನೀಡದೆ, ಯಾವುದೇ ಪರಿಶೀಲನೆ ನಡೆಸದೆ ಏಕಾಏಕಿ ಚಾಲಕರ ಖಾತೆಗಳನ್ನು ಅಮಾನತು ಮಾಡುವುದು ಹಾಗೂ ಸ್ವಯಂ ಚಾಲಿತ ವ್ಯವಸ್ಥೆಯ ಮೂಲಕ ಖಾತೆಗಳನ್ನು ಅಮಾನತುಗೊಳಿಸುವ ಕಾರಣದಿಂದ ಭಾರೀ ದಂಡ ವಿಧಿಸಲಾಗಿದೆ.
ಉಬರ್ ಕ್ರಮವನ್ನು ಚಾಲಕರ ಹಕ್ಕುಗಳ ಗಂಭೀರ ಉಲ್ಲಂಘಟನೆ ಎಂದು ಕರೆಯಲಾಗಿದ್ದು, ಯಾವುದೇ ಮಾನವ ಪರಿಶೀಲನೆ ನಡೆಸದೆ ಕಂಪ್ಯೂಟರ್ ವ್ಯವಸ್ಥೆ ಮೂಲಕ ನಿಷ್ಕ್ರೀಯ ಗೊಳಿಸಲಾಗಿದೆ. ಡಬ್ ಡೇಟಾ ಪ್ರೊಟೆಕ್ಷನ್ ಅಥಾರಿಟಿಯ ಅನ್ವಯ, ಹಲವು ಸಂದರ್ಭದಲ್ಲಿ ಉಬರ್ ಸಂಸ್ಥೆ ಚಾಲಕರ ಖಾತೆಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ಕ್ಲೋಸ್ ಮಾಡಿರುವುದು ಗಂಭೀರ ಉಲ್ಲಂಘಟನೆ ಎಂದು ಹೇಳಿದೆ.
ನಿಗೂಢ ಖಾತೆ ಅಮಾನತಿನ ಸತ್ಯ
ಚಾಲಕರ ಜೀವನ ತೀವ್ರವಾಗಿ ಪರಿಣಾಮ ಬೀರುವ ಸಂದರ್ಭದಲ್ಲಿ, ಕೇವಲ ಕಂಪ್ಯೂಟರ್ ಅಲ್ಗಾರಿದಮ್ ಗಳನ್ನು ಮಾತ್ರ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಿಂದ ಹಲವರಿಗೆ ಅನ್ಯಾಯವಾಗಿದೆ. ಚಾಲಕರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕಿದೆ ಎಂದು ಹೇಳಿದೆ.
2018 ಮತ್ತು 2022ರ ನಡುವೆ ಯುರೋಪ್‌ನಲ್ಲಿ ನಡೆದ ಘಟನೆಗಳನ್ನು ಒಳಗೊಂಡಿದ್ದು, ಫ್ರಾನ್ಸ್ ನಲ್ಲಿ ನೀಡಿದ ಒಂದು ದೂರಿನಿಂದ ಆರಂಭವಾದ ತನಿಖೆಯನ್ನು ಡಚ್ ಡೇಟಾ ಸಂರಕ್ಷಣ ನಿಯಂತ್ರಕ ಕೈಗೊಂಡಿತ್ತು. ಉಬರ್‌ನ ಯುರೋಪಿಯನ್ ಪ್ರಧಾನ ನೆದರ್‌ಲ್ಯಾಂಡ್ಸ್‌ನಲ್ಲಿದ್ದು, ಚಾಲಕರ ಚಟುವಟಿಕೆಗಳನ್ನು ಗುರುತಿಸಲು ಉಬರ್ ತಂದಿದ್ದ ವ್ಯವಸ್ಥೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.
ಕೇವಲ ಗ್ರಾಹಕರ ಕಡಿಮೆ ರೇಟಿಂಗ್ ಆಧಾರದ ಮೇಲೆ ಕೆಲವು ಚಾಲಕರ ಖಾತೆಗಳನ್ನು ಸ್ವಯಃಚಾಲಿತವಾಗಿ ನಿಷ್ಕ್ರಿಯಗೊಳಿಸುವ ವ್ಯವಸ್ಥೆ ಹೊಂದಿತ್ತು. ಆದರೆ ಉಬರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದಂಡ ವಿಧಿಸಿದ ಕ್ರಮ ಅಸಮಾನ ಮತ್ತು ತೀವ್ರ ಕ್ರಮ ಎಂದು ಹೇಳಿದೆ. ಚಾಲಕರ ಹಕ್ಕುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಚಾಲಕರಿಗೆ ಅಮಾನತು ಪ್ರಶ್ನಿಸುವ ಆಯ್ಕೆಯನ್ನು ನೀಡುವ ಆಯ್ಕೆ ಹೊಂದಿದ್ದಾರೆ ಎಂದು ಹೇಳಿದೆ.
ಯುರೋಪ್‌ನಲ್ಲಿ ಉಬರ್ ಮಾತ್ರವಲ್ಲದೇ, ಈ ಹಿಂದೆ ಗ್ರಾಹಕರ ಡೇಟಾ ಗೌಪ್ಯತೆ ಮತ್ತು ಡಿಜಿಟಲ್ ನಿಯಮಗಳ ಉಲ್ಲಂಘಟನೆ ಅಡಿ ಮೆಟಾ, ಗೂಗಲ್, ಆಪಲ್ ಮತ್ತು ಅಮೆಜಾನ್ ನಂತರ ಕಂಪನಿಗಳಿಗೆ ಭಾರೀ ದಂಡಗಳನ್ನು ವಿಧಿಸಲಾಗಿದೆ. ಸದ್ಯ ಈ ಸಾಲಿಗೆ ಉಬರ್ ಕೂಡ ಸೇರ್ಪಡೆಯಾಗಿದೆ. ಎಐ ತಂತ್ರಜ್ಞಾನ ತೆಗೆದುಕೊಳ್ಳುವ ಕ್ರಮದಿಂದ ಉದ್ಯೋಗಿ ಅಥವಾ ಗ್ರಾಹಕನ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದರೆ, ಅದರ ಮೇಲ್ವಿಚಾರಣೆಯನ್ನು ಕೇವಲ ಯಾಂತ್ರೀಕೃತ ವ್ಯವಸ್ಥೆಯಿಂದ ಮಾಡದೆ ಮನುಷ್ಯನ ನೇತೃತ್ವದಲ್ಲಿ ನಡೆಯಬೇಕು ಎಂದು ಯುರೋಪಿಯನ್ ರೆಗ್ಯುಲೆಟರಿ ಹೇಳುತ್ತದೆ.


