ನವದೆಹಲಿ(ಜು.22): ಚೀನಾ ಮೂಲದ ಆ್ಯಪ್‌ಗಳ ಮೇಲೆ ನಿಷೇಧ ಮತ್ತು ಚೀನಾ ಹೂಡಿಕೆ ಕಂಪನಿಗಳ ಮೇಲೆ ಕೇಂದ್ರದ ನಿಗಾ ಹೆಚ್ಚಾದ ಬೆನ್ನಲ್ಲೇ, ಚೀನಾ- ಅಮೆರಿಕನ್‌ ಪ್ರಜೆ ಒಡೆತನದ ಜೂಮ್‌ ಕಂಪನಿ ಬೆಂಗಳೂರಿನಲ್ಲಿ ತನ್ನ ಹೊಸ ತಂತ್ರಜ್ಞಾನ ಕೇಂದ್ರ ಸ್ಥಾಪನೆಗೆ ನಿರ್ಧರಿಸಿದೆ. 

ಲಾಕ್‌ಡೌನ್‌ ಅವಧಿಯಲ್ಲಿ ದೇಶದ ಬಹುತೇಕ ಉದ್ಯಮಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಶಾಲೆಗಳಲ್ಲಿ ಜೂಮ್‌ ಆ್ಯಪ್‌ ಅನ್ನು ಬಹುವಾಗಿ ಬಳಕೆ ಮಾಡಲಾಗುತ್ತಿತ್ತು. ಜೂಮ್‌ ಆ್ಯಪ್‌ ಭಾರತದಲ್ಲಿ ಇದೇ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ ಶೇ.6700 ರಷ್ಟು ಪ್ರಮಾಣದಷ್ಟುವೃದ್ಧಿ ಸಾಧಿಸಿದೆ ಎಂದು ಜೂಮ್‌ ಸಂಸ್ಥೆ ಮಂಗಳವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. 

ಚೀನಾ ಸೇನೆಯ ಜೊತೆ ಈ ಕಂಪನಿಗಳ ಪರೋಕ್ಷ ನಂಟು; ಭಾರತಕ್ಕೆ ಸಂಕಷ್ಟ ಉಂಟು..!

ಈಗಾಗಲೇ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಜೂಮ್‌ ಕಚೇರಿಯನ್ನು ಹೊಂದಿದ್ದು, 2 ದತ್ತಾಂಶ ಸಂಗ್ರಹ ಕೇಂದ್ರಗಳನ್ನು ಹೊಂದಿದೆ. ಇದರ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬೆಂಗಳೂರಿನಲ್ಲೂ ಕಚೇರಿ ಸ್ಥಾಪನೆಗೆ ನಿರ್ಧರಿಸಲಾಗಿದೆ.