ಇಪಿಎಫ್ ಒ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಒಂದು ವೇಳೆ ಇಂದು ಅರ್ಜಿ ಸಲ್ಲಿಸಲು ವಿಫಲರಾದರೆ ನೀವು ಅಧಿಕ ಪಿಂಚಣಿ ಪಡೆಯುವ ಅವಕಾಶದಿಂದ ವಂಚಿತರಾಗುತ್ತೀರಿ. ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆಗೆ ಈಗಾಗಲೇ ಇಪಿಎಫ್ ಒ ಎರಡು ಬಾರಿ ಅಂತಿಮ ಗಡುವು ವಿಸ್ತರಿಸಿದೆ. ಇ-ಸೇವಾ ಪೋರ್ಟಲ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಕೆ ಮಾಡಬಹುದು. 

ನವದೆಹಲಿ (ಜೂ.26): ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್ ) ಅಡಿಯಲ್ಲಿ ನಿಗದಿಗಿಂತ ಹೆಚ್ಚಿನ ಮೊತ್ತದ ಪಿಂಚಣಿಗೆ ಅರ್ಜಿ ಸಲ್ಲಿಸಲು ಇಂದು (ಜೂ.26) ಕೊನೆಯ ದಿನವಾಗಿದೆ. ಒಂದು ವೇಳೆ ಇಂದು ಅರ್ಜಿ ಸಲ್ಲಿಸಲು ವಿಫಲರಾದರೆ ಅಧಿಕ ಪಿಂಚಣಿ ಪಡೆಯುವ ಅವಕಾಶದಿಂದ ಇಪಿಎಫ್ ಸದಸ್ಯರು ವಂಚಿತರಾಗಲಿದ್ದಾರೆ. ಇನ್ನು ಕೆಲವು ವರದಿಗಳ ಪ್ರಕಾರ ಇಪಿಎಫ್ಒ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ ಅಂತಿಮ ಗಡುವನ್ನು ಇನ್ನೊಮ್ಮೆ ವಿಸ್ತರಿಸುವ ಸಾಧ್ಯತೆ ಕೂಡ ಇದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈಗಾಗಲೇ ಇಪಿಎಫ್ಒ ಎರಡು ಬಾರಿ ಅಂತಿಮ ಗಡುವನ್ನು ವಿಸ್ತರಿಸಿದೆ. ಹೀಗಾಗಿ ಮೂರನೇ ಬಾರಿ ಕೂಡ ವಿಸ್ತರಿಸಲಿದೆಯಾ ಅಥವಾ ಇಲ್ಲವೋ ಎಂಬ ಬಗ್ಗೆ ಇಂದು ಸ್ಪಷ್ಟನೆ ಸಿಗಲಿದೆ. ಆದಕಾರಣ ನೀವು ಇನ್ನೂ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲದಿದ್ದರೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ತಕ್ಷಣ ಈ ಕೆಲಸ ಮಾಡಿ ಮುಗಿಸಿ. ಆನ್ ಲೈನ್ ನಲ್ಲೇ (ಇ-ಸೇವಾ ಪೋರ್ಟಲ್ ) ಸುಲಭವಾಗಿ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ ಮಾಡಬಹುದು. 

ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೊದಲು ಇಪಿಎಫ್ ಒ 2023ರ ಮೇ 3ರ ತನಕ ಮಾತ್ರ ಅವಕಾಶ ನೀಡಿತ್ತು. ಆ ಬಳಿಕ ಅರ್ಹ ಎಲ್ಲ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಬೇಕು ಎಂಬ ಕಾರಣದಿಂದ ಜೂನ್ 26ರ ತನಕ ವಿಸ್ತರಿಸಿತ್ತು. ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಯಾರು ಅರ್ಹರಾಗಿದ್ದರೋ ಅಂಥ ಉದ್ಯೋಗಿಗಳಿಗೆ ಇಪಿಎಫ್ಒ 2023ರ ಫೆ.20ರಂದು ಮಾರ್ಗಸೂಚಿ ಬಿಡುಗಡೆಗೊಳಿಸಿತ್ತು. ಉದ್ಯೋಗಿಗಳ ಪಿಂಚಣಿ ಯೋಜನೆಗೆ 2014ರಲ್ಲಿ ತಿದ್ದುಪಡಿ ತರಲಾಗಿದ್ದು,ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದ್ದು 2022ರ ನವೆಂಬರ್ 4ರಂದು ತೀರ್ಪು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕ ಪಿಂಚಣಿ ಕೋರಿ ಅರ್ಜಿ ಸಲ್ಲಿಸಲು ಇಪಿಎಫ್ ಒ ಅವಕಾಶ ನೀಡಿತ್ತು. ಎಲ್ಲ ಅರ್ಹ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಅರ್ಜಿ ಸಲ್ಲಿಕೆ ಗಡುವನ್ನು ಎರಡು ಬಾರಿ ವಿಸ್ತರಿಸಲಾಗಿದೆ.

ಇಪಿಎಫ್ ಪಾಸ್ ಬುಕ್ ನಲ್ಲಿ ಇನ್ನೂ ಬಡ್ಡಿ ಅಪ್ಡೇಟ್ ಆಗದಿದ್ರೆ ಚಿಂತಿಸಬೇಡಿ, ಯಾವುದೇ ನಷ್ಟವಾಗದು: EPFO

2014ರ ಆಗಸ್ಟ್ 22ರಂದು ಇಪಿಎಸ್ ಪರಿಷ್ಕರಣೆ ಮಾಡಲಾಗಿದ್ದು, ಪಿಂಚಣಿ ಪಡೆಯಲು ವೇತನ ಮಿತಿಯನ್ನು ತಿಂಗಳಿಗೆ 6,500ರೂ.ನಿಂದ 15,000 ರೂ.ಗೆ ಏರಿಕೆ ಮಾಡಲಾಗಿತ್ತು. ಜೊತೆಗೆ ಉದ್ಯೋಗಿಗಳು ಹಾಗೂ ಉದ್ಯೋಗದಾತ ಸಂಸ್ಥೆಗಳು ಅವರ ವೇತನದ ಶೇ.8.33ರಷ್ಟನ್ನು ಇಪಿಎಸ್ ಗೆ ಕೊಡುಗೆಯಾಗಿ ನೀಡಲು ಅನುಮತಿ ನೀಡಲಾಗಿತ್ತು.

ಇಪಿಎಫ್ಒ ಫೆಬ್ರವರಿ 21ರಂದು ಬಿಡುಗಡೆಗೊಳಿಸಿರುವ ಮಾರ್ಗಸೂಚಿ ಅನ್ವಯ 5,000ರೂ. ಅಥವಾ 6,500 ರೂ. ವೇತನ ಮಿತಿ ಮೀರಿದ ಇಪಿಎಫ್ಒಗೆ ಕೊಡುಗೆ ನೀಡಿದ ಎಲ್ಲ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಅಧಿಕ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬಹುದು. ಇನ್ನು ನಿವೃತ್ತಿಗೂ ಮುನ್ನ ಅಧಿಕ ಪಿಂಚಣಿ ಆಯ್ಕೆ ಮಾಡಿಕೊಂಡವರು ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅಡಿಯಲ್ಲಿ ಅಧಿಕ ವೇತನದ ಕೊಡುಗೆ ನೀಡಿದ ಉದ್ಯೋಗಿಗಳು ಕೂಡ ಅಧಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರು. 2014ರ ಸೆಪ್ಟೆಂಬರ್ 1ರಂದು ಇಪಿಎಸ್ ಸದಸ್ಯರಾಗಿರುವ ಉದ್ಯೋಗಿಗಳು 1995ರ ನಿಯಮ 11(3) ಅನ್ವಯ ಹೆಚ್ಚು ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ ಎಂದು ಇಪಿಎಫ್ಒ ತಿಳಿಸಿದೆ. ಇವರು ತಮ್ಮ ವೇತನದ ಶೇ.8.33ರಷ್ಟನ್ನು ಪಿಂಚಣಿಗೆ ಕೊಡುಗೆಯಾಗಿ ನೀಡಬಹುದು.ಇನ್ನು 2014ರ ಸೆಪ್ಟೆಂಬರ್ 1ಕ್ಕಿಂತ ಮುನ್ನ ನಿವೃತ್ತಿ ಹೊಂದಿದ ಹಾಗೂ ಅಧಿಕ ಪಿಂಚಣಿ ಆಯ್ಕೆ ಮಾಡದ ಉದ್ಯೋಗಿಗಳು ಈ ಸೌಲಭ್ಯ ಪಡೆಯಲು ಅರ್ಹರಾಗಿಲ್ಲ.

EPF Higher Pension:ಇಪಿಎಸ್ ಬಾಕಿ ಮೊತ್ತ ಲೆಕ್ಕ ಹಾಕೋದು ಹೇಗೆ? ಪಾವತಿಗೆ ಎಷ್ಟು ಸಮಯಾವಕಾಶ ನೀಡಲಾಗುತ್ತೆ?

ಆನ್ ಲೈನ್ ಅರ್ಜಿ ಸಲ್ಲಿಕೆ ಹೇಗೆ?
ಹಂತ 1: ಇ-ಸೇವಾ ಪೋರ್ಟಲ್ ಗೆ ಭೇಟಿ ನೀಡಿ.
ಹಂತ 2: ‘Pension on Higher Salary: Exercise of Joint Option under para 11(3) and para 11(4) of EPS-1995 on or before June 26, 2023’ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಜಂಟಿ ಆಯ್ಕೆಗಳಿಗೆ ಅರ್ಜಿ ನಮೂನೆಗಳ ಆಯ್ಕೆ ಆರಿಸಿ.
ಹಂತ 4: ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಯುಎಎನ್, ಹೆಸರು, ಜನ್ಮ ದಿನಾಂಕ, ಆಧಾರ್ ಸಂಖ್ಯೆ, ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ನಮೂದಿಸಿ.
ಹಂತ 5: ಅರ್ಜಿ ಭರ್ತಿ ಮಾಡಿದ ಬಳಿಕ ‘OTP’ ಪಡೆಯಲು ಒಂದು ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡಿ. ಅದು ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ.