Asianet Suvarna News Asianet Suvarna News

ಇವರು ಬರೀ ಉದ್ಯಮಿಗಳು ಮಾತ್ರವಲ್ಲ, ತಮ್ಮ ಉತ್ಪನ್ನದ ಜಾಹೀರಾತಿಗೆ ರೂಪದರ್ಶಿಗಳು ಕೂಡ!

ಯಾವುದೇ ಉತ್ಪನ್ನದ ಯಶಸ್ಸಿನಲ್ಲಿ ಜಾಹೀರಾತಿನ ಪಾತ್ರ ನಿರ್ಣಾಯಕವಾಗಿರುತ್ತದೆ. ಇದೇ ಕಾರಣಕ್ಕೆ ಜನಪ್ರಿಯ ಕಂಪನಿಗಳು ತಮ್ಮ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಳ್ಳಲು ಸೆಲೆಬ್ರೆಟಿಗಳಿಗೆ ಕೋಟ್ಯಂತರ ರೂ. ನೀಡಿ ತಮ್ಮ ಉತ್ಪನ್ನಗಳಿಗೆ ರಾಯಭಾರಿಯನ್ನಾಗಿ ನೇಮಿಸಿಕೊಳ್ಳುತ್ತವೆ. ಆದರೆ, ಇತ್ತೀಚೆಗೆ ಕೆಲವು ಉದ್ಯಮಿಗಳು ಸ್ವತಃ ತಾವೇ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. 
 

Entrepreneurs Who Starred In Ads Of Their Own Brands
Author
First Published Jan 13, 2023, 6:48 PM IST

Business Desk: ಕಳೆದ ಕೆಲವು ವರ್ಷಗಳಲ್ಲಿ ಜಾಹೀರಾತು ಉತ್ಪನ್ನದ ಮಾರಾಟ ಹೆಚ್ಚಿಸುವಲ್ಲಿ, ಬ್ರ್ಯಾಂಡ್ ಮೌಲ್ಯ ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತ ಬಂದಿವೆ. ವಿವಿಧ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸಿ ಸೆಲೆಬ್ರೆಟಿಗಳನ್ನು ರಾಯಭಾರಿ ಅಥವಾ ಬ್ರ್ಯಾಂಡ್ ಅಂಬಾಸೆಡರ್ ಆಗಿ ನೇಮಿಸಿಕೊಳ್ಳುವುದು ಈ ಸರ್ವೇಸಾಮಾನ್ಯವಾಗಿದೆ. ಬ್ರ್ಯಾಂಡ್ ಮೌಲ್ಯದಿಂದ ಹಿಡಿದು ಬ್ರ್ಯಾಂಡ್ ಇಮೇಜ್ ಸೃಷ್ಟಿ ಮಾಡುವ ತನಕ ಹಾಗೂ ಒಂದು ಉತ್ಪನ್ನದ ಮಾರಾಟದ ಮೇಲೆ ರಾಯಭಾರಿಗಳು ಸಾಕಷ್ಟು ಪ್ರಭಾವ ಬೀರುತ್ತಾರೆ. ಕೆಲವೊಂದು ಸೆಲೆಬ್ರೆಟಿಗಳ ಹೆಸರು ಅವರು ಬ್ರ್ಯಾಂಡ್ ಅಂಬಾಸೆಡರ್ ಆಗಿರುವ ಉತ್ಪನ್ನದೊಂದಿಗೆ ಎಷ್ಟು ಬೆರೆತು ಹೋಗಿದೆ ಎಂದರೆ ಆ ಉತ್ಪನ್ನದ ನೋಡಿದ ತಕ್ಷಣ ನಮಗೆ ಅವರ ಹೆಸರೇ ನೆನಪಿಗೆ ಬಂದು ಬಿಡುತ್ತದೆ. ಆ ಉತ್ಪನ್ನದಿಂದ ಅವರನ್ನು ಹೊರಗಿಟ್ಟು ನೋಡಲಾಗದಷ್ಟು ನಂಟು ಬೆಳೆದು ಬಿಟ್ಟಿದೆ. ಆದರೆ, ನಿಮಗೆ ಗೊತ್ತ ಇಂದಿನ ಸ್ಟಾರ್ಟ್ ಅಪ್ ದುನಿಯಾದಲ್ಲಿ ಕೆಲವು ಕಂಪನಿಗಳ ಸಂಸ್ಥಾಪಕರು, ಸಹಸಂಸ್ಥಾಪಕರು ಹಾಗೂ ಸಿಇಒಯಂತಹ ಆಯಕಟ್ಟಿನ ಹುದ್ದೆಯಲ್ಲಿರುವ ವ್ಯಕ್ತಿಗಳೇ ತಮ್ಮ ಉತ್ಪನ್ನಗಳ ಜಾಹೀರಾತು ರಾಯಭಾರಿಗಳಾಗಿದ್ದಾರೆ. ಇದು ಅವರ ವೈಯಕ್ತಿಕ ಬ್ರ್ಯಾಂಡ್ ಮೌಲ್ಯ ವರ್ಧಿಸಲು ಕೂಡ ಕಾರಣವಾಗಿದೆ. ಹೀಗೆ ತಮ್ಮದೇ ಬ್ರ್ಯಾಂಡ್ ಗಳಿಗೆ ರಾಯಭಾರಿಗಳಾಗಿರುವ  ಐವರು ಉದ್ಯಮಿಗಳ ಪರಿಚಯ ಇಲ್ಲಿದೆ.

1.ವರುಣ್ ಅಲ್ಗ ಹಾಗೂ ಘಝಲ್ ಅಲ್ಗ
ವೈಯಕ್ತಿಕ ಕಾಳಜಿ ಯುನಿಕಾರ್ನ್ ಮಾಮ್ ಅರ್ಥ್ ಸಹಸಂಸ್ಥಾಪಕ ವರುಣ್ ಹಾಗೂ ಘಝಲ್ ಅಲ್ಗ ದಂಪತಿ ಇತ್ತೀಚೆಗೆ ತಮ್ಮ ಹೊಸ ಉತ್ಪನ್ನ ಕೋಕೊಸಾಫ್ಟ್ ಬೇಬಿ ಕೇರ್ ರೇಂಜ್ ಜಾಹೀರಾತಿನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಇವರಿಗೆ ಮಕ್ಕಳಾದ ಅಗಸ್ತ್ಯ ಹಾಗೂ ಅಯನ್ ಕೂಡ ಸಾಥ್ ನೀಡಿದ್ದಾರೆ. ಇದರಲ್ಲಿ ಅವರು ಬಾಲ್ಯದಲ್ಲಿ ತಮಗೆ ಅರಿಶಿಣ ಹಾಗೂ ತೆಂಗಿನಕಾಯಿ ಬಳಸುವ ಬಯಕೆಯಿದ್ದ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ಆಧುನಿಕ ತಂತ್ರಜ್ಞಾನದ ಬಳಸಿ ಅರಿಶಿಣ ಹಾಗೂ ತೆಂಗಿನಕಾಯಿಯಿಂದ ಹೊಸ ಉತ್ಪನ್ನ ಸಿದ್ಧಪಡಿಸಿರೋದಾಗಿ ತಿಳಿಸಿದ್ದಾರೆ. 

ಇನ್ಫೋಸಿಸ್ ಮಾಜಿ ಅಧ್ಯಕ್ಷ ರವಿಕುಮಾರ್ ಕಾಗ್ನಿಜೆಂಟ್ ನೂತನ ಸಿಇಒ

2.ಪೆಯೂಶ್ ಬನ್ಸಾಲ್
ಲೆನ್ಸ್ ಕಾರ್ಟ್ ಸಂಸ್ಥಾಪಕ ಪೆಯೂಶ್ ಬನ್ಸಾಲ್ ಕೂಡ ತಮ್ಮ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. 'ನ್ಯಾಯಯುತ ಬೆಲೆಗಾಗಿ ಹೋರಾಟ' ಎಂಬ ಹೊಸ ಜಾಹೀರಾತಿನಲ್ಲಿ ಕರಣ್ ಜೋಹರ್ ಜೊತೆಗೆ ಪೆಯೂಶ್ ಬನ್ಸಾಲ್ ಕಾಣಿಸಿಕೊಂಡಿದ್ದಾರೆ. ನ್ಯಾಯಸಮ್ಮತ ಬೆಲೆಯ ಬಗ್ಗೆ ಇವರಿಬ್ಬರೂ ಜಾಹೀರಾತಿನಲ್ಲಿ ವಾದ ಮಾಡುತ್ತಾರೆ. ಕರಣ್ ಜೋಹರ್ ಪ್ರತಿಯೊಂದು ದುಬಾರಿ ಬೆಲೆಯದ್ದಾಗಿರಬೇಕು ಎಂದು ವಾದಿಸಿದರೆ, ಬನ್ಸಾಲ್ ಗುಣಮಟ್ಟದ ಫ್ರೇಮ್ ಗಳನ್ನು ಕಡಿಮೆ ಬೆಲೆಗೆ ನೀಡಬೇಕು, ಯಾವುದೇ ಮಧ್ಯವರ್ತಿಗಳನ್ನು ಹೊಂದಿರಬಾರದು ಎಂಬ ಐಡಿಯಾ ಹೊಂದಿರುತ್ತಾರೆ.

3.ಶಶಾಂಕ್ ಮೆಹ್ತಾ
'ದಿ ಹೋಲ್ ಅರ್ಥ್ ' ಸಂಸ್ಥಾಪಕ ಶಶಾಂಕ್ ಮೆಹ್ತಾ ತನ್ನ ಉತ್ಪನ್ನದ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಸ್ವಚ್ಛ ಆಹಾರ ತಿನ್ನುವುದರಿಂದ ಆಗುವ ಲಾಭಗಳು ಹಾಗೂ ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ 'ದಿ ಹೋಲ್ ಅರ್ಥ್ ' ಅನೇಕ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 

4.ವಿನೀತಾ ಸಿಂಗ್
ಜನಪ್ರಿಯ ಕಾಸ್ಮೆಟಿಕ್ ಬ್ರ್ಯಾಂಡ್ ಶುಗರ್ ಸಂಸ್ಥಾಪಕಿ ವಿನೀತಾ ಸಿಂಗ್ ಕೂಡ ತನ್ನ ಬ್ರ್ಯಾಂಡ್ ನ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜಾಹೀರಾತುಗಳಲ್ಲಿ ತಮನ್ನಾ ಭಾಟಿಯಾ ಹಾಗೂ ರಣ್ ವೀರ್ ಸಿಂಗ್ ಕೂಡ ಇದ್ದಾರೆ. 

Women Finance: ಮಹಿಳೆಗೂ ಇರಲಿ ಬ್ಯಾಂಕಿಂಗ್ ಜ್ಞಾನ

5.ಚೇತನ್ ಕನನಿ
ಅಲ್ಪಿನೋ ಹೆಲ್ತ್ ಫುಡ್ಸ್ ಸಹಸಂಸ್ಥಾಪಕ ಚೇತನ್ ಕನನಿ ಪ್ರಸಿದ್ಧ ಕುಸ್ತಿಪಟು ಕಲಿ ಜೊತೆಗೆ ತಮ್ಮದೇ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ಕಡಲೆಬೀಜ ಬಳಸಿ ಮಾಡಿರುವ ಸಂಸ್ಥೆಯ ಎಲ್ಲ ಉತ್ಪನ್ನಗಳ ರುಚಿ ನೋಡಿದ್ದಾರೆ. 


 

Follow Us:
Download App:
  • android
  • ios