ಟ್ವಿಟರ್ ಖರೀದಿಸಿ ಸಂಭ್ರಮಿಸಿದ ಮಸ್ಕ್‌ಗೆ ಶಾಕ್, 2022ರಲ್ಲಿ ಪ್ರತಿ ದಿನ 2,500 ಕೋಟಿ ರೂ ಲಾಸ್!
ಜಗತ್ತಿನ ಶ್ರೀಮಂತ ಉದ್ಯಮಿ ಎಲನ್ ಮಸ್ಕ್ ಟ್ವಿಟರ್ ಖರೀದಿಸಿ ಭಾರಿ ಸದ್ದು ಮಾಡಿದ್ದಾರೆ. ಖರೀದಿ ಮಾತ್ರವಲ್ಲ, ಟ್ವಿಟರ್ ಸಿಇಒ ಸೇರಿದಂತೆ ಹಲವು ಉದ್ಯೋಗಿಗಳನ್ನು ಕಿತ್ತೆಸೆದಿದ್ದಾರೆ. ಆದರೆ ಟ್ವಿಟರ್ ಖರೀದಿಸಿ ತಾನಂದುಕೊಂಡಂತೆ ಮಾಡಿದ ಮಸ್ಕ್‌ಗೆ ಸದ್ದಿಲ್ಲದೆ ಶಾಕ್ ಎದುರಾಗಿದೆ. 2022ರಲ್ಲಿ ಪ್ರತಿದಿನ 2,500 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾ(ನ.23): ಟ್ವಿಟರ್ ಖರೀದಿಸಲು ಹೊರಟ ಬಳಿಕ ಉದ್ಯಮಿ ಎಲನ್ ಮಸ್ಕ್ ಪ್ರತಿ ದಿನ ಸುದ್ದಿಯಲ್ಲಿದ್ದಾರೆ. ಚಿತ್ರ ವಿಚಿತ್ರ ಟ್ವೀಟ್ ಮೂಲಕ ಟ್ವಿಟರ್ ಖರೀದಿ ಕುರಿತು ಹೇಳಿಕೆ ನೀಡಿದ್ದರು. ಹಲವು ಸುತ್ತಿನ ಮಾತುಕತೆ ಬಳಿಕ ಕೊನೆಗೂ ಟ್ವಿಟರ್ ಎಲನ್ ಮಸ್ಕ್ ತೆಕ್ಕೆಗೆ ಜಾರಿಕೊಂಡಿತು. ನೀಲಿ ಹಕ್ಕಿಯನ್ನು ಬಂಧ ಮುಕ್ತಗೊಳಿಸಿದ್ದೇವೆ ಖರೀದಿ ಬೆನ್ನಲ್ಲೇ ಮಸ್ಕ್ ಟ್ವೀಟ್ ಮಾಡಿದ್ದರು. ಖರೀದಿ ಬಳಿಕ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಸಾವಿರಾರು ಉದ್ಯೋಗಿಗಳನ್ನು ಟ್ವಿಟರ್ ಸಂಸ್ಥೆಯಿಂದ ಕಿತ್ತೆಸೆದು ಭಾರಿ ಸಂಚಲನ ಸೃಷ್ಟಿಸಿದ್ದರು. ಆದರೆ ಟ್ವಿಟರ್ ಜಟಾಪಟಿಯಲ್ಲಿ ಕೈಯಿಂದ ಕಾಸು ಜಾರಿದ್ದು ಗೊತ್ತಾಗಲೇ ಇಲ್ಲ. 2022ರ ಜನವರಿಯಿಂದ ಇಲ್ಲೀವರೆಗೆ ಎಲನ್ ಮಸ್ಕ್ 100 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಕಳೆದುಕೊಂಡಿದ್ದಾರೆ. ಅಂದರೆ ಪ್ರತಿ ದಿನ ಭಾರತೀಯ ರೂಪಾಯಿಗಳಲ್ಲಿ 2,500 ಕೋಟಿ ರೂಪಾಯಿ ಮಸ್ಕ್ ಕಳೆದುಕೊಂಡಿದ್ದಾರೆ.
ಟ್ವಿಟರ್ ಖರೀದಿಯಿಂದ ಇತ್ತ ಟೆಸ್ಲಾ ಕಂಪನಿ ಷೇರುಗಳು ಪಾತಾಳಕ್ಕೆ ಕುಸಿದಿತ್ತು. ಕಳೆದೆರಡು ವರ್ಷದಲ್ಲಿ ಟೆಸ್ಲಾ ಷೇರುಗಳು ಏರಿಕೆಯನ್ನೇ ಕಂಡಿತ್ತು. ಆದರೆ ಟ್ವಿಟರ್ ಖರೀದಿ, ಗೊಂದಲ, ಕಸಿವಿಸಿಗಳಿಂದ ಟೆಸ್ಲಾ ಷೇರುಗಳು ಭಾರಿ ಕುಸಿತ ಕಂಡಿತ್ತು. ಟ್ವಿಟರ್ ಖರೀದಿ ಜೊತೆಗೆ ಇತರ ಕೆಲ ಕಾರಣಗಳು ಟೆಸ್ಲಾ ಷೇರು ಕುಸಿತಕ್ಕೆ ಕಾರಣವಾಗಿತ್ತು. ಇದು ಜಗತ್ತಿನ ಶ್ರೀಮಂತ ಉದ್ಯಮಿ ಎಲನ್ ಮಸ್ಕ್ ಜೇಬಿಗೆ ತೀವ್ರ ಹೊಡೆತ ನೀಡಿದೆ.
Twitterಗೆ ಮತ್ತಷ್ಟು ಜನ ವಿದಾಯ: ಹಲವು ಕಡೆ ಕಚೇರಿಗಳೇ ಬಂದ್..!
ಬ್ಲೂಮ್‌ಬರ್ಗ್ ವೆಲ್ತ್ ಇಂಡೆಕ್ಸ್ ಪ್ರಕಾರ ಕಳೆದ ವರ್ಷ ಎಲನ್ ಮಸ್ಕ್ ನಿವ್ವಳ ಆದಾಯ 340 ಬಿಲಿಯನ್ ಅಮೆರಿಕನ್ ಡಾಲರ್. ಆದರೆ ಈ ವರ್ಷ ಮಸ್ಕ್ ನಿವ್ವಳ ಆದಾಯ ಸರಿಸುುಮಾರು 100 ಬಿಲಿಯನ್‌ಗೂ ಹೆಚ್ಚು ಅಮೆರಿಕನ್ ಡಾಲರ್ ಕಡಿಮೆಯಾಗಿದೆ. ಈ ತಿಂಗಳಲ್ಲಿ ಬಿಡುಗಡೆ ಮಾಡಲಾಗಿರುವ ಅಂಕಿ ಅಂಶ ಪ್ರಕಾರ ಎಲನ್ ಮಸ್ಕ್ ನಿವ್ವಳ ಆದಾಯ 170 ಬಿಲಿಯನ್ ಅಮೆರಿಕನ್ ಡಾಲರ್.
ಉಚಿತ ಊಟ ಇಲ್ಲ, ಮನೆಯಿಂದ ಕೆಲಸ ಬೇಕಿಲ್ಲ: ಟ್ವಿಟರ್ ಸಿಬ್ಬಂದಿಗೆ ಮಸ್ಕ್ ಸೂಚನೆ
ಟ್ವೀಟರ್ ಬ್ಲುಟಿಕ್‌ಗೆ ಮಾಸಿಕ 8 ಡಾಲರ್ ಶುಲ್ಕ
ಬ್ಲು ಟಿಕ್ ಹೊಂದಿರುವ ಟ್ವೀಟರ್‌ನ ವೆರಿಫೈಡ್ ಬಳಕೆದಾರರು ಇನ್ನು ಮುಂದೆ ಮಾಸಿಕ 8 ಡಾಲರ್ (ಅಂದಾಜು 660 ರು.) ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಸಂಸ್ಥೆಯ ಹೊಸ ಮಾಲೀಕ ಎಲಾನ್ ಮಸ್‌್ಕ ಪ್ರಕಟಿಸಿದ್ದಾರೆ. ಇದು ಟ್ವೀಟರ್ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ‘ಜನರಿಗೆ ಅಧಿಕಾರ! ಬ್ಲುಗಾಗಿ ಪ್ರತಿ ತಿಂಗಳಿಗೆ 8 ಡಾಲರ್’ ಎಂದು ಮಸ್‌್ಕ ಟ್ವೀಟ್ ಮಾಡಿದ್ದಾರೆ. ಜೊತೆಗೆ ದೇಶದ ಜನರ ಕೊಳ್ಳುವ ಶಕ್ತಿಯ ಸಾಮ್ಯತೆ ಅನುಸಾರವಾಗಿ ಬೆಲೆಯನ್ನು ಸರಿಹೊಂದಿಸಲಾಗುವುದು ಎಂದು ಹೇಳಿದ್ದಾರೆ. ಮಸ್‌್ಕ ನಿರ್ಧಾರಕ್ಕೆ ಟ್ವೂಟರ್ ಬಳಕೆದಾರ ಸ್ಟೀಫನ್ ಕಿಂಗ್, ಕಸ್ತೂರಿ ಶಂಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಮಸ್‌್ಕ ‘ಟ್ವೀಟರ್ ಕೇವಲ ಜಾಹೀರಾತಿನಿಂದ ಬಂದ ಹಣದ ಮೇಲೆ ಅವಲಂಬಿಸಲು ಸಾಧ್ಯವಾಗುವುದಿಲ್ಲ. ನಾವು ಬಿಲ್ ಪಾವತಿಸಲೇಬೇಕು. 8 ಡಾಲರ್‌ಗೆ ಏನನ್ನುತ್ತೀರಿ?’ ಮಸ್‌್ಕ ರಿಟ್ವೀಟ್ ಮಾಡಿದ್ದಾರೆ.
ಟ್ವಿಟರ್ ಅನ್ನು 3.6 ಲಕ್ಷ ಕೋಟಿ ರು.ಗೆ ಖರೀದಿಸಿದ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್‌್ಕ, ಸಿಇಒ ಪರಾಗ್ ಅರ್ಗವಾಲ್ ಸೇರಿದಂತೆ ಹಲವು ಹಿರಿಯರನ್ನು ತೆಗೆದು ಹಾಕಿದ ಬೆನ್ನಲ್ಲೇ ಇದೀಗ ಒಟ್ಟಾರೆ ಸಿಬ್ಬಂದಿ ಪೈಕಿ ಶೇ.75ರಷ್ಟುಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ