ಈಜಿಪ್ಟ್ ಗೆ ಭಾರತದ ಗುಣಮಟ್ಟದ ಗೋಧಿ.. ಆಹಾರ ಭದ್ರತೆಯಲ್ಲಿ ದಿಟ್ಟ ಹೆಜ್ಜೆ
* ಈಜಿಪ್ಟ್ ಗೆ ಭಾರತದ ಗೋಧಿ
* ಆಹಾರ ಭದ್ರತೆ ವಿಚಾರದಲ್ಲಿ ದಿಟ್ಟ ಕ್ರಮ
* ಮಹತ್ವದ ವಿಷಯ ತಿಳಿಸಿದ ಪಿಯೂಷ್ ಗೋಯಲ್
ನವದೆಹಲಿ(ಏ. 16) ಜಗತ್ತಿನಲ್ಲೇ ಭಾರತ (Idnia) ಗೋಧಿ (wheat) ರಫ್ತು ಮಾಡುವ ಅಗ್ರಮಾನ್ಯ ದೇಶವಾಗಲಿದೆ. ಭಾರತದ ಗೋಧಿ ಆಮದು ಮಾಡಿಕೊಳ್ಳಲು ಈಜಿಪ್ಟ್ ಸರ್ಕಾರ ಹಸಿರು ನಿಶಾನೆ ತೋರಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿದ್ದು ನೂಜೀರಿಯಾ, ಟರ್ಕಿ, ಅಫ್ಘಾನಿಸ್ತಾನ, ವಿಯೆಟ್ನಾಂಗಳಿಗೂ ಭಾರತದ ಗೋಧಿ ರಫ್ತಾಗಲಿದೆ.
ಈಜಿಪ್ಟ್ ಗೆ ಭಾರತದ ಗೋಧಿ ರಫ್ತಾಗುವ ವಿಚಾರವನ್ನು ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯೆಲ್ (Piyush Goyal) ಟ್ವೀಟ್ ಮಾಡಿ ತಿಳಿಸಿದ್ದಾರೆ. ಸುಸ್ಥಿರ ಆಹಾರ ಮಾದರಿಗೆ ಇದು ನಾಂದಿ ಎಂದು ಕರೆದಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದ ವಾತಾವರಣ ಆಹಾರ ಧಾನ್ಯಗಳ ಆಮದು ಮತ್ತು ರಫ್ತಿನ ಮೇಲೂ ಪರಿಣಾಮ ಉಂಟುಮಾಡಿತ್ತು. ಚೀನಾ ತನ್ನದೇ ಆಂತರಿಕ ಸಮಸ್ಯೆಯಿಂದ ನರಳುತ್ತಿದ್ದರೆ ಶ್ರೀಲಂಕಾ ಸಾಲದ ಸುಳಿಯಲ್ಲಿದೆ. ಪಾಕಿಸ್ತಾನದ ಕತೆ ಹೊಸದಾಗಿ ಹೇಳುವುದು ಏನೂ ಇಲ್ಲ. ದಕ್ಷಿಣ ಏಷ್ಯಾದಲ್ಲಿ ಭಾರತ ಅಗ್ರಮಾನ್ಯನಾಗಿ ಹೊರಹೊಮ್ಮುತ್ತಿದೆ.
ಈಜಿಪ್ಟ್‌ಗೆ ಉತ್ತಮ ಗುಣಮಟ್ಟದ ಗೋಧಿಯನ್ನು ರಫ್ತು ಮಾಡುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಅವರನ್ನು ವಿಶೇಷವಾಗಿ ಕರೆದಿದ್ದಾರೆ. ಭಾರತಕ್ಕೆ ಈಜಿಪ್ಟ್ ನಿಯೋಗದ ಭೇಟಿಯು ವಿವಿಧ ಗೋಧಿ ಆಮದು ಮಾಡಿಕೊಳ್ಳುವ ದೇಶಗಳೊಂದಿಗೆ ಹಲವಾರು ವ್ಯಾಪಾರ ಮಾತುಕತೆಗಳು ನಡೆದಿವೆ.
ಕಳೆದ ತಿಂಗಳು ದುಬೈಗೆ ಭೇಟಿ ನೀಡಿದಾಗ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಈಜಿಪ್ಟ್‌ನ ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ಸಚಿವ ಡಾ. ಹಾಲಾ ಎಲ್-ಸೈದ್ ಅವರನ್ನು ಭೇಟಿ ಮಾಡಿದ್ದರು. ಈಜಿಪ್ಟ್‌ನ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಗೋಧಿಯನ್ನು ಪೂರೈಸಲು ಭಾರತದ ಸನ್ನದ್ಧತೆಯ ಬಗ್ಗೆ ಚರ್ಚಿಸಿದ್ದರು ಎಂಬ ವರದಿಗಳು ಬಂದಿದ್ದವು.
ಈಜಿಪ್ಟ್ 2021 ರಲ್ಲಿ 6.1 ಮಿಲಿಯನ್ ಟನ್ (mt) ಗೋಧಿಯನ್ನು ಆಮದು ಮಾಡಿಕೊಂಡಿದೆ ಈಜಿಪ್ಟ್‌ನ 80% ಕ್ಕಿಂತ ಹೆಚ್ಚು ಗೋಧಿ ಆಮದುಗಳು ರಷ್ಯಾ ಮತ್ತು ಉಕ್ರೇನ್‌ನಿಂದ ಆಗುತ್ತಿದ್ದವು. , ಯೆಮೆನ್, ಅಫ್ಘಾನಿಸ್ತಾನ ಮತ್ತು ಇಂಡೋನೇಷ್ಯಾ ಸೇರಿದಂತೆ ಇತರ ದೇಶಗಳಿಗೆ ಗೋಧಿ ರಫ್ತುಗಳನ್ನು ಹೆಚ್ಚಿಸಲು APEDA ಪ್ರಯತ್ನಗಳನ್ನು ಮಾಡುತ್ತಿದೆ.
ರಷ್ಯಾ (Russia)-ಉಕ್ರೇನ್ (Ukraine)ಯುದ್ಧದ (War) ಪರಿಣಾಮ ಜಾಗತಿಕ ಮಟ್ಟದಲ್ಲಿ ಆಹಾರ ಧಾನ್ಯಗಳ (Food grains)ಬೆಲೆಯಲ್ಲಿ ಏರಿಕೆಯಾಗುತ್ತ ಬಂದಿತ್ತು. ವಿಶ್ವಸಂಸ್ಥೆ (UN) ಆಹಾರ ಹಾಗೂ ಕೃಷಿ ಸಂಸ್ಥೆ (FAO) ಪ್ರಕಾರ ವಿಶ್ವ ಆಹಾರ ಧಾನ್ಯಗಳ ಬೆಲೆಗಳು ಫೆಬ್ರವರಿಯಲ್ಲಿ ದಾಖಲೆಯ ಏರಿಕೆ ಕಂಡಿವೆ. ಅದ್ರಲ್ಲೂ ಗೋಧಿ (Wheat)ಬೆಲೆಯಲ್ಲಿ(Price) ಶೇ.55ಕ್ಕಿಂತಲೂ ಅಧಿಕ ಏರಿಕೆಯಾಗಿತ್ತು.
ಯುದ್ಧಕ್ಕೂ ಮುನ್ನ ಜಾಗತಿಕ ಮೆಕ್ಕೆಜೋಳ ರಫ್ತಿನಲ್ಲಿ ಉಕ್ರೇನ್ ಶೇ.16ರಷ್ಟು ಪಾಲು ಹೊಂದಿತ್ತು. ರಷ್ಯಾ (Russia) ಹಾಗೂ ಉಕ್ರೇನ್ (Ukraine) ಎರಡೂ ಸೇರಿ ಶೇ.30ರಷ್ಟು ಗೋಧಿ ರಫ್ತು ಮಾಡುತ್ತಿದ್ದವು. ಯುದ್ಧದ ಪರಿಣಾಮ ಅಡುಗೆ ಎಣ್ಣೆ ದರ ಏರಿಕೆಯನ್ನು ಗ್ರಾಹಕರು ಅನುಭವಿಸುತ್ತಿದ್ದಾರೆ.