ಇಎಫ್‌ಟಿಎ-ಭಾರತ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ: ಸ್ವಿಸ್ ವಾಚ್‌ನಂಥ ವಸ್ತುಗಳು ಭಾರತದಲ್ಲಿನ್ನು ಅಗ್ಗ

Europನ 4 ದೇಶಗಳ ಒಕ್ಕೂಟವಾದ ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ (EFTA) ಜೊತೆ ಭಾರತ ಐತಿಹಾಸಿಕ Free Trade Agreementಕ್ಕೆ ಸಹಿ ಹಾಕಿದೆ. 

EFTA India Historic Free Trade Agreement Things like Swiss watches are cheaper in India from now akb

ನವದೆಹಲಿ: ಯುರೋಪ್‌ನ 4 ದೇಶಗಳ ಒಕ್ಕೂಟವಾದ ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ (ಇಎಫ್‌ಟಿಎ) ಜೊತೆ ಭಾರತ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. 16 ವರ್ಷಗಳ ಸುದೀರ್ಘ ಮಾತುಕತೆ, ಚರ್ಚೆ ಬಳಿಕ ಇಂಥದ್ದೊಂದು ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, 'ಈ ಒಪ್ಪಂದ ಮುಕ್ತ, ನ್ಯಾಯಸಮ್ಮತ ಮತ್ತು ಸಮಾನ ವ್ಯಾಪಾರದ ಅವಕಾಶದ ಕುರಿತು ಪರಸ್ಪರ ಬದ್ಧತೆಯ ಸಂಕೇತವಾಗಿದ್ದು ಮುಕ್ತ ವ್ಯಾಪಾರಕ್ಕೆ ಹೊಸ ದಿಕ್ಕು ತೋರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುರೋಪಿಯನ್ ದೇಶಗಳಾದ ಸ್ವಿಜರ್ಲೆಂಡ್, ನಾರ್ವೆ,ಐಸ್ಟ್ಯಾಂಡ್ ಮತ್ತು ಲಿಕ್ಟಿನ್‌ಸ್ಟೈನ್ ದೇಶಗಳ ನಡುವೆ ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಇಂಥ ಒಪ್ಪಂದಗಳ ಅನ್ವಯ ಸಾಮಾನ್ಯವಾಗಿ ಪರಸ್ಪರ ದೇಶಗಳ ಉತ್ಪನ್ನಗಳ ಮೇಲಿನ ಆಮದು, ರಫ್ತಿಗೆ ಹೇರಲಾಗುವ ತೆರಿಗೆ ಕಡಿತ ಮಾಡಲಾಗುತ್ತದೆ, ಇಲ್ಲವೇ ಪೂರ್ಣ ರದ್ದು ಮಾಡಲಾಗುತ್ತದೆ. 

ಮೋದಿ ನಿರ್ಧಾರದಿಂದ ರೈತರ ಮೊಗದಲ್ಲಿ ಹರ್ಷ

ಹೀಗಾಗಿ ಒಂದು ದೇಶದ ಉತ್ಪನ್ನ ಒಪ್ಪಂದಕ್ಕೆ ಸಹಿ ಹಾಕಿದ ಮತ್ತೊಂದು ದೇಶಕ್ಕೆ ಯಾವುದೇ ತೆರಿಗೆ ಭಾರವಿಲ್ಲದೇ ಸರಬರಾಜು ಆಗುತ್ತದೆ. ಅದೇ ರೀತಿ ಮತ್ತೊಂದು ದೇಶದಿಂದಲೂ ಅಗ್ಗವಾಗಿ ವಸ್ತುಗಳ ಆಮದು ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಉದಾ: ಸ್ವಿಸ್ ವಾಚ್, ಸ್ವಿಸ್ ಚಾಕೋಲೇಟ್‌
ಸ್ವಿಸ್ ವಾಚ್‌ನಂಥ ವಸ್ತುಗಳು ಭಾರತದಲ್ಲಿ ಇನ್ನು ಅಗ್ಗದ ದರದಲ್ಲಿ ಲಭಿಸಲಿವೆ. ಅಲ್ಲದೆ. ಈ ಒಪ್ಪಂದದ ಪರಿಣಾಮ ಭಾರತದ ಬಹುತೇಕ ಉತ್ಪನ್ನಗಳನ್ನು ಸುಂಕ ರಹಿತವಾಗಿ ಇಎಫ್ ಟಿಎ ದೇಶಗಳಿಗೆ ರಫ್ತು ಮಾಡಬಹುದು. ಜತೆಗೆ ಸಂಸ್ಕೃರಿತ ಕೃಷಿ ಉತ್ಪನ್ನಗಳ ರಫ್ತಿನ ಮೇಲಿನ ಸುಂಕಕ್ಕೂ ರಿಯಾಯಿತಿ ಸಿಗಲಿದೆ. ಅದೇ ರೀತಿ ಭಾರತ ಕೂಡಾ ತನ್ನ ಶೇ.82.7ರಷ್ಟು ಉತ್ಪನ್ನಗಳನ್ನು ಇಎಫ್‌ಟಿಎ ದೇಶಗಳಿಗೆ ತೆರಿಗೆ ಮುಕ್ತ ಮಾಡಲಿದೆ.

ಅನಂತ್ ಅಂಬಾನಿ ಮದುವೆಗೆ 100 ರೂ. ಮುಯ್ಯಿ ಕೊಟ್ಟ ಅಜ್ಜಿ; ಅಹಂಕಾರವಿಲ್ಲದೇ ಸ್ವೀಕರಿಸಿದ ಕೋಟ್ಯಾಧೀಶ್ವರ

ಈ ಒಪ್ಪಂದದ ವ್ಯಾಪ್ತಿಯಿಂದ ಭಾರತದ ಪಾಲಿಗೆ ಅತ್ಯಂತ ಪ್ರಮುಖವಾದ ಡೈರಿ ಉತ್ಪನ್ನ, ಸೋಯಾ, ಕಲ್ಲಿದ್ದಲು ಮತ್ತು ಸೂಕ್ಷ್ಮ ಕೃಷಿ ಉತ್ಪನ್ನಗಳನ್ನು ಹೊರಗಿಡುವ ಮೂಲಕ ದೇಶದ ಕೃಷಿ, ಹೈನುಗಾರಿಕೆ ವಲಯವನ್ನು ರಕ್ಷಿಸುವ ಕೆಲಸ ಮಾಡಲಾಗಿದೆ. ಇದರ ಜೊತೆಗೆ ಹಾಲಿ ಭಾರತ ಮಾಡಿಕೊಂಡಿರುವ ಒಪ್ಪಂದದ ಅನ್ವಯ, ಯುರೋಪ್‌ನ ನಾಲ್ಕು ದೇಶಗಳು ಮುಂದಿನ 15 ವರ್ಷಗಳ ಅವಧಿಯಲ್ಲಿ 8 ಲಕ್ಷ ಕೋಟಿ ರು.ಬಂಡವಾಳ ಹೂಡಿಕೆ ಮಾಡಿ 10 ಲಕ್ಷ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ. ಮುಕ್ತ ವ್ಯಾಪಾರ ಒಪ್ಪಂದದ ಇತಿಹಾಸದಲ್ಲೇ ಇದೇ ಮೊದಲ ಸಲ ಬಂಡವಾಳ ಹೂಡಿಕೆ ಮತ್ತು ಉದ್ಯೋಗಸೃಷ್ಟಿಯ ಕುರಿತು ಕಾನೂನು ಬದ್ಧವಾಗಿ ಭರವಸೆ ನೀಡಲಾಗಿದೆ ಎಂಬುದು ಈ ಒಪ್ಪಂದದ ಮತ್ತೊಂದು ಪ್ರಮುಖ ಅಂಶ.

ಅಂಬಾನಿ ಸಮಾರಂಭಕ್ಕೆ ಬಂದು ಬೆಲೆಬಾಳುವ ಪೆಂಡೆಂಟ್‌ ಕಳೆದುಕೊಂಡ ಜುಕರ್‌ಬರ್ಗ್ ಪತ್ನಿ, 3.5 ಗಂಟೆ ಎಲ್ಲರ ಹುಡುಕಾಟ!

Latest Videos
Follow Us:
Download App:
  • android
  • ios