ಮುಂಬೈ[ಆ.28]: ಮಹಾರಾಷ್ಟ್ರ ಅದರಲ್ಲೂ ಮುಂಬೈನಲ್ಲಿ ಭಾರೀ ವಿಜೃಂಭಣೆಯಿಂದ ಆಚರಿಸಲಾಗುವ ಗಣೇಶೋತ್ಸವಕ್ಕೂ ಈ ಬಾರಿ ಆರ್ಥಿಕ ಹಿಂಜರಿಕೆಯ ಬಿಸಿ ತಟ್ಟಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದೇಣಿಗೆ ಸಂಗ್ರಹದಲ್ಲಿ ಶೆ.25ರಷ್ಟುಭಾರೀ ಕುಸಿತವಾಗಿದೆ ಎಂದು ಮುಂಬೈನ 10000ಕ್ಕೂ ಹೆಚ್ಚು ಗಣೇಶೋತ್ಸವ ಸಮಿತಿಗಳ ಮುಖ್ಯ ಸಮಿತಿಯಾದ ‘ಬೃಹನ್ಮುಂಬೈ ಸಾರ್ವಜನಿಕ ಗಣೇಶೋತ್ಸವ ಸಮನ್ವಯ ಸಮಿತಿ’ ಹೇಳಿದೆ. ಅಲ್ಲದೆ ಈ ಬಾರಿ ಸ್ಥಳೀಯ ಉದ್ಯಮಿಗಳು ಗಣೇಶೋತ್ಸವ ಕಾರ್ಯಕ್ರಮಗಳಿಗೆ ನೀಡುವ ಜಾಹೀರಾತನ್ನೂ ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿದ್ದಾರೆ.

ಗಣಪತಿಯ ಪಿಒಪಿ ರೂಪ, ಪರಿಸರಕ್ಕೆ ಕೊಳೆ ಕೂಪ!

ಮತ್ತೊಂದೆಡೆ ನಗರದ ಶ್ರೀಮಂತ ಗಣೇಶ ಮಂಡಳಿಗಳು ಪ್ರತಿ ವರ್ಷ ಗಣೇಶನಿಗೆ ಹೊಸ ಹೊಸ ಚಿನ್ನ ಮತ್ತು ಬೆಳ್ಳಿ ಆಭರಣ ಮಾಡಿಸುವುದು ಸಾಮಾನ್ಯ. ಆದರೆ ಈ ಬಾರಿ ಇಂಥ ಆಭರಣಗಳಿಗೆ ಬಂದ ಬೇಡಿಕೆಯಲ್ಲಿ ಶೇ.50ರಷ್ಟುಇಳಿಕೆ ಕಂಡುಬಂದಿದೆ ಎಂದು ಆಭರಣ ಉದ್ಯಮಿಗಳು ಹೇಳಿದ್ದಾರೆ.