ಎಡೆಲ್ವೀಸ್ ಸ್ಮಾಲ್ ಕ್ಯಾಪ್ ಫಂಡ್ ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿದೆ! ಕೇವಲ ₹1000 ಮಾಸಿಕ SIP ಮೂಲಕ 5 ವರ್ಷಗಳಲ್ಲಿ ₹1 ಲಕ್ಷಕ್ಕೂ ಹೆಚ್ಚು ಲಾಭ. ಹೇಗೆ ಅಂತ ತಿಳ್ಕೊಳ್ಳಿ?

ಎಡೆಲ್ವೀಸ್ ಸ್ಮಾಲ್ ಕ್ಯಾಪ್ ಫಂಡ್: ಶೇರ್ ಮಾರ್ಕೆಟ್‌ನಲ್ಲಿ ಎಲ್ಲರೂ ದುಡ್ಡು ಮಾಡ್ಬೇಕು ಅಂತಾರೆ, ಆದ್ರೆ ಅದು ತುಂಬಾ ರಿಸ್ಕ್. ವಿಶೇಷವಾಗಿ ಏನೂ ವಿಶ್ಲೇಷಣೆ, ಸಂಶೋಧನೆ ಇಲ್ಲದೆ ನೇರವಾಗಿ ಹಣ ಹಾಕಿದ್ರೆ ಮುಳುಗೋ ಸಾಧ್ಯತೆ ಇದೆ. ಹಾಗಾಗಿ ಮ್ಯೂಚುಯಲ್ ಫಂಡ್ ಮೂಲಕ ಹೂಡಿಕೆ ಮಾಡಿದ್ರೆ ಶೇರ್ ಮಾರ್ಕೆಟ್ ತರ ಲಾಭ ಸಿಗುತ್ತೆ, ಅದೂ ಕಡಿಮೆ ರಿಸ್ಕ್‌ನಲ್ಲಿ. ಮ್ಯೂಚುಯಲ್ ಫಂಡ್‌ನಲ್ಲಿ ಒಂದೇ ಸಲ ಅಥವಾ SIP ಮೂಲಕ ಹೂಡಿಕೆ ಮಾಡಬಹುದು. ಕಡಿಮೆ ಸಮಯದಲ್ಲಿ ಚೆನ್ನಾಗಿ ಲಾಭ ಕೊಡೋ ಫಂಡ್ ಅಂದ್ರೆ ಎಡೆಲ್ವೀಸ್ ಸ್ಮಾಲ್ ಕ್ಯಾಪ್ ಫಂಡ್ ಹೆಸರು ಬರುತ್ತೆ.

₹1000 SIP 5 ವರ್ಷದಲ್ಲಿ ಲಕ್ಷಾಧಿಪತಿ

ಎಡೆಲ್ವೀಸ್ ಸ್ಮಾಲ್ ಕ್ಯಾಪ್ ಫಂಡ್ ಫೆಬ್ರವರಿ 7, 2019 ರಂದು ಶುರುವಾಯ್ತು. ಈ ಫಂಡ್‌ನ ಲಾಭದ ಇತಿಹಾಸ ನೋಡಿದ್ರೆ, SIP ಮೂಲಕ ಕಳೆದ 5 ವರ್ಷಗಳಲ್ಲಿ 26.88% ಲಾಭ ಕೊಟ್ಟಿದೆ. ಐದು ವರ್ಷಗಳ ಹಿಂದೆ ಯಾರಾದ್ರೂ ₹1000 ಮಾಸಿಕ SIP ಮಾಡಿದ್ರೆ ಈಗ ಅದರ ಮೌಲ್ಯ ₹1,16,490 ಆಗಿದೆ.

₹1,00,000 ಹೂಡಿಕೆ 5 ವರ್ಷದಲ್ಲಿ ₹5 ಲಕ್ಷ:

ಎಡೆಲ್ವೀಸ್ ಸ್ಮಾಲ್ ಕ್ಯಾಪ್ ಫಂಡ್ ಕಳೆದ 5 ವರ್ಷಗಳಲ್ಲಿ ಸರಾಸರಿ 36.95% ವಾರ್ಷಿಕ ಲಾಭ ಕೊಟ್ಟಿದೆ. ಐದು ವರ್ಷಗಳ ಹಿಂದೆ ಯಾರಾದ್ರೂ ₹1,00,000 ಹೂಡಿಕೆ ಮಾಡಿದ್ರೆ, ಇವತ್ತಿನ ದಿನ ಅದರ ಮೌಲ್ಯ ₹4.82 ಲಕ್ಷ ಆಗಿದೆ. ಜೂನ್ 9, 2025 ರಂದು ಈ ಫಂಡ್‌ನ ರೆಗ್ಯುಲರ್ ಪ್ಲಾನ್ NAV ₹43.98, ಡೈರೆಕ್ಟ್ ಪ್ಲಾನ್ NAV ₹48.55 ಇತ್ತು.

90 ದಿನಗಳ ಮೊದಲು ಮಾರಿದರೆ 1% ಶುಲ್ಕ:

ಸ್ಮಾಲ್ ಕ್ಯಾಪ್ ವಿಭಾಗದ ಈ ಫಂಡ್‌ನಲ್ಲಿ ಎಕ್ಸ್‌ಪೆನ್ಸ್ ರೇಶಿಯೋ 1.83%. ಇದರ ಬೆಂಚ್‌ಮಾರ್ಕ್ Nifty Small cap 250 TRI. ಕನಿಷ್ಠ SIP ಮೊತ್ತ ₹500. ಒಂದೇ ಸಲ ಹೂಡಿಕೆ ಮಾಡೋರಿಗೆ ಕನಿಷ್ಠ ಮೊತ್ತ ₹5000. ಫಂಡ್ ಖರೀದಿಸಿ ಮೂರು ತಿಂಗಳ ಒಳಗೆ ಮಾರಿದ್ರೆ 1% ಶುಲ್ಕ ತೆರಬೇಕು. ಈ ಫಂಡ್‌ನ ಒಟ್ಟು ಗಾತ್ರ ₹4237.19 ಕೋಟಿ. ಕ್ರಿಸಿಲ್ ಇದಕ್ಕೆ 4 ಸ್ಟಾರ್ ರೇಟಿಂಗ್ ಕೊಟ್ಟಿದೆ.

ಹಕ್ಕುಸ್ವಾಮ್ಯ ನಿರಾಕರಣೆ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಕುರಿತು ನಾವು ಯಾವುದೇ ಭರವಸೆ ಅಥವಾ ಪ್ರೋತ್ಸಾಹ ನೀಡುವುದಿಲ್ಲ. ತಜ್ಞರು ನೀಡಿದ ಮಾಹಿತಿಯನ್ನು ನೀಡಿದ್ದೇವೆ. ನೀವು ಹೂಡಿಕೆ ಮಾಡುವ ಮುನ್ನ ನಿಮ್ಮ ಸ್ವ-ಅನುಭವ ಮತ್ತು ತಜ್ಞರ ಸಲಹೆಗಳನ್ನು ಪಡೆದುಕೊಳ್ಳಬೇಕು.