ನವದೆಹಲಿ (ಫೆ. 01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡನೆ ಮಾಡಿದ 2019​​-20ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿಗಾಗಿ ಕೆಲವು ಅಂಶಗಳನ್ನು ವಿಕಿಪಿಡಿಯಾದಿಂದ ಎರವಲು ಪಡೆಯಲಾಗಿದೆ. ವಿಕಿಪಿಡಿಯಾ ಅಷ್ಟೇ ಅಲ್ಲದೆ, ಖಾಸಗಿ ಸಂಸ್ಥೆಗಳಾದ ಬ್ಲೂಮ್‌ಬರ್ಗ್‌, ಐಸಿಆರ್‌ಎ, ಸಿಎಂಐಇ, ಬೆಂಗಳೂರಿನ ಐಐಎಂ, ಫೋಬ್ಸ್‌ರ್‍ ಹಾಗೂ ಬಿಎಸ್‌ಇ ಅಂಶಗಳನ್ನೊಳಗೊಂಡಿದೆ.

ಕೇಂದ್ರ ಬಜೆಟ್ 2020 ತಯಾರಾಗಿದ್ದು ಹೀಗೆ

ಜೊತೆಗೆ, ಹೆರಿಟೇಜ್‌.ಆರ್ಗ್‌, ಫ್ರೆಸಿರನ್‌ಸ್ಟಿಟ್ಯುಟ್‌.ಆರ್ಗ್‌ ಮತ್ತು ಆ್ಯಂಬಿಟ್‌ ಕ್ಯಾಪಿಟಲ್‌, ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್‌, ಭಾರತೀಯ ರಿಜವ್‌ರ್‍ ಬ್ಯಾಂಕ್‌, ಸಹಕಾರ ವ್ಯವಹಾರಗಳ ಸಚಿವಾಲಯ, ಭಾರತೀಯ ದಿವಾಳಿ ಮಂಡಳಿ, ಸಿಬಿಲ್‌, ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ, ಗ್ರಾಹಕ ವ್ಯವಹಾರಗಳ ಇಲಾಖೆ, ವಿಶ್ವಸಂಸ್ಥೆ ಹಾಗೂ ಎಸ್‌ಐಡಿಬಿಐ ಅಂಶಗಳನ್ನು ಒಳಗೊಂಡಿದೆ.

'ಬಹೀ ಖಾತಾ' ಎಂಬ ಅಕ್ಷಯ ಪಾತ್ರೆ: ಸಂಸತ್ತಿಗೆ ಬಂತು ನಿರ್ಮಲಾ ದಂಡಯಾತ್ರೆ!

ಶ್ರೀಮದ್‌ ಭಗವದ್ಗೀತಾ, ಋುಗ್ವೇದ, ಅರ್ಥಶಾಸ್ತ್ರದ ಪಿತಾಮಹ ಆ್ಯಡಂ ಸ್ಮಿತ್‌ ಅವರ ಆ್ಯನ್‌ ಎಂಕ್ವೆರಿ ಇನ್‌ಟು ದಿ ನೇಚರ್‌ ಅಂಡ್‌ ಕಾಸಸ್‌ ಆಫ್‌ದಿ ವೆಲ್ತ್‌ ಆಫ್‌ ನೇಷನ್ಸ್‌(ರಾಷ್ಟ್ರಗಳ ಸಂಪತ್ತಿನ ಪರಿಣಾಮ ಹಾಗೂ ಲಕ್ಷಣಗಳ ಪರೀಕ್ಷೆ) ಕೃತಿ, ಕೌಟಿಲ್ಯನ ಅರ್ಥಶಾಸ್ತ್ರ ಹಾಗೂ ತಮಿಳಿನ ಸಂತ ಹಾಗೂ ತತ್ವಜ್ಞಾನಿ ತಿರುವಳ್ಳುವರ್‌ ಅವರ ತಿರುಕುರಲ್‌ ಕೃತಿಗಳಿಂದ ಹಲವು ವಿಚಾರಗಳನ್ನು 2019-20ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಒಳಗೊಂಡಿದೆ.