ಬಂದ್ ಆಗಲಿದೆ ಈ ಆನ್ ಲೈನ್ ಮಾರುಕಟ್ಟೆ ತಾಣ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 11:05 AM IST
eBay will soon shut down
Highlights

ಶೀಘ್ರದಲ್ಲೇ ಈ ಆನ್ ಲೈನ್ ಮಾರುಕಟ್ಟೆ ತಾಣವು ಮುಚ್ಚಲಿದೆ. ಅನೇಕ ವಸ್ತುಗಳ ಕೊಳ್ಳಲು ಹಾಗೂ ಮಾರಲು ಸೇತುವೆಯಾಗಿದ್ದ ಈ ತಾಣವು ನಿಷ್ಕ್ರೀಯವಾಗಲಿದೆ ಎಂದು ಫ್ಲಿಪ್ ಕಾರ್ಟ್ ಹೇಳಿದೆ 

ನವದೆಹಲಿ: ಫ್ಲಿಪ್‌ಕಾರ್ಟ್ ಒಡೆತನದ ಮತ್ತು ಭಾರತದ ಅತಿ ಹಳೇ ಇ-ಕಾಮರ್ಸ್ ಎಂಬ ಕೀರ್ತಿಗೆ ಪಾತ್ರವಾಗಿದ್ದ ಇ ಬೇ.ಇನ್ ವೆಬ್‌ಸೈಟ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. 

ಈ ಮೂಲಕ ಹಳೆಯ ಮತ್ತು ಬಳಕೆ ಮಾಡಿದ ವಸ್ತುಗಳನ್ನು ಮಾರಾಟ ಹಾಗೂ ಖರೀದಿಸಲು ಸೇತುವೆಯಂತಿದ್ದ ಇಬೇ ಬಂದ್ ಆಗಲಿದ್ದು, ಒಎಲ್‌ಎಕ್ಸ್ ಮತ್ತು ಕ್ವಿಕರ್‌ಗಳಿಗೆ ಇ- ಕಾಮರ್ಸ್ ಮಾರುಕಟ್ಟೆಯಲ್ಲಿ  ವಾಲೊಡ್ಡುವವರು ಇಲ್ಲದಂತಾಗಿದೆ.

2018 ರ ಆಗಸ್ಟ್ 14 ರಂದು ಇ ಬೇ.ಇನ್ ಬಂದ್ ಆಗಲಿದೆ ಎಂದು ಹೇಳಲಾಗಿದೆ. ಕ್ಯಾಲಿಫೋರ್ನಿಯಾ ಮೂಲದ ಇಬೇಯನ್ನು 2017 ರಲ್ಲಿ ಫ್ಲಿಪ್‌ಕಾರ್ಟ್ ಖರೀದಿಸಿತ್ತು. 

loader