ಆದಾಯ ತೆರಿಗೆ ಉಳಿಸಲು ಕೆಲವರು ಸಿಕ್ಕಾಪಟ್ಟೆ ಕಸರತ್ತು ಮಾಡ್ತಾರೆ. ಇನ್ನು ಕೆಲವರು ಆದಾಯ ತೆರಿಗೆ ಪಾವತಿಸದೆ ಸರ್ಕಾರಕ್ಕೆ ಮೋಸ ಮಾಡ್ತಾರೆ. ಆದ್ರೆ ನೀವು ಸರ್ಕಾರಕ್ಕೆ ಮೋಸ ಮಾಡದೆ, ಸುಲಭವಾಗಿ ತೆರಿಗೆ ಉಳಿಸಿ, ನಿಮ್ಮ ಆರ್ಥಿಕ ಸ್ಥಿತಿ ಬಲಪಡಿಸಬಹುದು.
ಹಣ ಉಳಿತಾಯ ಮಾಡೋದು ಪ್ರತಿಯೊಬ್ಬರ ಗುರಿ. ಸ್ವಲ್ಪ ಹಣವನ್ನು ನಾವು ಅಂತೂ ಇಂತೂ ಉಳಿತಾಯ ಮಾಡ್ತೇವೆ. ಆದ್ರೆ ಸಂಪಾದನೆ ಮಾಡಿದ ಅರ್ಧ ಹಣವನ್ನಾದ್ರೂ ಉಳಿತಾಯ ಮಾಡಿದ್ರೆ ಜೀವನವನ್ನು ಸುಖಕರವಾಗಿ ಕಳೆಯಬಹುದು. ತೆರಿಗೆ ಉಳಿತಾಯ ಮಾಡ್ಬೇಕು ಅಂತಾ ಅನೇಕರು ಅಂದುಕೊಳ್ತಾರೆ. ಆದ್ರೆ ಹೇಗೆ ಎಂಬುದು ಗೊತ್ತಾಗೋದಿಲ್ಲ. ನಾವಿಂದು ಆದಾಯ ತೆರಿಗೆ ಉಳಿಸೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೇವೆ.
ಆದಾಯ ತೆರಿಗೆ (Income Tax) ಉಳಿಸಲು ಹೀಗೆ ಮಾಡಿ :
ಗೃಹ (House) ಸಾಲ : ಮನೆ ಖರೀದಿ ಮಾಡ್ಬೇಕು ಎಂಬುದು ಎಲ್ಲರ ಕನಸು. ಸಾಲ ಸೋಲ ಮಾಡಿ ಮನೆ ಖರೀದಿ ಮಾಡ್ತಾರೆ. ಇದಕ್ಕೆ ಗೃಹಸಾಲ ಪಡೆಯುತ್ತಾರೆ. ನೀವೂ ಗೃಹ ಸಾಲ (Loan) ಪಡೆದ್ರೆ ತೆರಿಗೆ ವಿನಾಯಿತಿ ಬಯಸಬಹುದು. ನಂತರ ನೀವು ಸೆಕ್ಷನ್ 80C ಅಡಿಯಲ್ಲಿ ಹಣವನ್ನು ಉಳಿಸಬಹುದು. ಗೃಹ ಸಾಲದಲ್ಲಿ ತೆರಿಗೆ ವಿನಾಯಿತಿ ನಿರ್ದಿಷ್ಟ ಮೊತ್ತದವರೆಗೆ ಮಾತ್ರ ಲಭ್ಯವಿದೆ. ಗೃಹ ಸಾಲದ ಮೇಲೆ ಮಾತ್ರವಲ್ಲ ಗೃಹ ಸಾಲದ ಬಡ್ಡಿ ಮೇಲೂ ನೀವೂ ವಿನಾಯಿತಿ ಪಡೆಯಬಹುದು. ಆದಾಯ ತೆರಿಗೆ ಸೆಕ್ಷನ್ 24(ಬಿ) ಅಡಿಯಲ್ಲಿ 2 ಲಕ್ಷ ರೂಪಾಯಿಗಳ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು.
ಈ 5 ಸಿದ್ಧತೆ ಮಾಡಿಕೊಂಡ್ರೆ ಸಾಕು, ನಿಮ್ಮ ITR ನೀವೇ ಸುಲಭವಾಗಿ ಸಲ್ಲಿಕೆ ಮಾಡಬಹುದು!
ಎಲ್ ಐಸಿ ಪ್ರೀಮಿಯಂ, ಇಪಿಎಫ್,ಪಿಪಿಎಫ್ ಹೂಡಿಕೆ : ಆದಾಯ ತೆರಿಗೆ ವಿನಾಯಿತಿ ಪಡೆಯಬೇಕು ಎಂದಾದ್ರೆ ನೀವು ಎಲ್ ಐಸಿ ಪ್ರೀಮಿಯಂ ಪಾವತಿಸಬೇಕು. ನೀವು ಎಲ್ ಐಸಿ ಪ್ರೀಮಿಯಂ ಪಾವತಿ ಮಾಡ್ತಿದ್ದರೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಇನ್ನೊಂದು ವಿಮಾ ಕಂಪನಿಯ ಪಿಂಚಣಿ ಯೋಜನೆಯನ್ನು ತೆಗೆದುಕೊಂಡಿದ್ದರೂ ಸಹ ನೀವು ತೆರಿಗೆ ವಿನಾಯಿತಿ ಪಡೆಯಬಹುದು. ಭವಿಷ್ಯ ನಿಧಿ, ಪಿಪಿಎಫ್, ಮಕ್ಕಳ ಬೋಧನಾ ಶುಲ್ಕವನ್ನು ಸಹ ತೆರಿಗೆ ವಿನಾಯಿತಿಗಾಗಿ ಕ್ಲೈಮ್ ಮಾಡಬಹುದು. ನೀವು ಸಾಲ ಪಡೆದಿದ್ದರೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯುವ ಮೂಲಕ ನೀವು ಲಕ್ಷ ರೂಪಾಯಿಗಳನ್ನು ಉಳಿಸಬಹುದು.
ಆರೋಗ್ಯ ವಿಮೆ (Health Insurance) : ಸಂಗಾತಿಗಾಗಿ, ಮಕ್ಕಳಿಗಾಗಿ ಅಥವಾ ಪೋಷಕರಿಗಾಗಿ ಆರೋಗ್ಯ ವಿಮೆ ತೆಗೆದುಕೊಂಡಿದ್ದರೆ ನೀವು ಅದ್ರ ಅಡಿಯಲ್ಲೂ ತೆರಿಗೆ ವಿನಾಯಿತಿ ಪಡೆಯಬಹುದು. ಆದಾಯ ತೆರಿಗೆ ವಿಭಾಗ 80D ಅಡಿಯಲ್ಲಿ ನೀವು ಆರೋಗ್ಯ ವಿಮೆಯ ಮೇಲೆ ತೆರಿಗೆ ವಿನಾಯಿತಿಯನ್ನು ಸುಲಭವಾಗಿ ಪಡೆಯಬಹುದು. ಇದಲ್ಲದೆ, 80D 1B ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆಯ ಪಾವತಿಯ ಮೇಲೂ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ನಿಮ್ಮ ಪೋಷಕರ ವಯಸ್ಸು 60 ವರ್ಷಕ್ಕಿಂತ ಹೆಚ್ಚಿದ್ದರೆ, ಚಿಕಿತ್ಸೆ ಪಡೆಯುತ್ತಿದ್ದರೆ ನಿಮಗೆ 50 ಸಾವಿರ ರೂಪಾಯಿವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ.
ಮೊಬೈಲ್ ನಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
ಶಿಕ್ಷಣ ಸಾಲದಲ್ಲೂ ಸಿಗುತ್ತೆ ವಿನಾಯಿತಿ (Exemption in Education Loan) : ಈಗಿನ ದಿನಗಳಲ್ಲಿ ಮಕ್ಕಳ ಶಿಕ್ಷಣ ದುಬಾರಿಯಾಗಿದೆ. ಹಾಗಾಗಿಯೇ ಪಾಲಕರು, ಶಿಕ್ಷಣ ಸಾಲವನ್ನು ಮಾಡಿ ಮಕ್ಕಳಿಗೆ ಓದಿಸ್ತಾರೆ. ನೀವೂ ಶಿಕ್ಷಣ ಸಾಲ ಪಡೆದಿದ್ದರೆ ಅದ್ರ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಎರಡು ಮಕ್ಕಳಿಗೆ ಶೇಕಡಾ 10ರ ಬಡ್ಡಿ ದರದಲ್ಲಿ ತಲಾ 25 ಲಕ್ಷ ಸಾಲ ಪಡೆದಿದ್ದರೆ ಈ 50 ಲಕ್ಷ ರೂಪಾಯಿಗೆ ವಾರ್ಷಿಕ 5 ಲಕ್ಷ ರೂಪಾಯಿ ಬಡ್ಡಿ ಕಟ್ಟಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀವು ಈ ಸಂಪೂರ್ಣ ಮೊತ್ತದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS): ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲೂ ನೀವು ತೆರಿಗೆ ವಿನಾಯಿತಿ ಪಡೆಯಬಹುದು. ಇದ್ರಲ್ಲಿ ನೀವು ಸಾವಿರ ರೂಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ವಾರ್ಷಿಕವಾಗಿ 50 ಸಾವಿರದವರೆಗೆ ಹೂಡಿಕೆ ಮಾಡಿದರೆ ನೀವು 80CCD (1B) ಅಡಿಯಲ್ಲಿ ಆದಾಯ ತೆರಿಗೆ ಉಳಿಸಬಹುದು.
