ಐಷಾರಾಮಿ ಲೈಫ್‌ ಸ್ಟೈಲ್‌ ನಿಂದ ಮಾತ್ರವಲ್ಲ ಸರಳತೆಯಿಂದ್ಲೂ ಜನರ ಮನಸ್ಸು ಗೆದ್ದದ್ದು ಅಂಬಾನಿ ಕುಟುಂಬ. ಈಗ ನೀತಾ ಅಂಬಾನಿ ಹಾಗೂ ಇಶಾ ಅಂಬಾನಿ ಸರಳತೆಯ ವಿಡಿಯೋ ಒಂದು ವೈರಲ್‌ ಆಗಿದೆ.

ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಅಂಬಾನಿ ಫ್ಯಾಮಿಲಿ ತಮ್ಮ ರಾಜಮನೆತನದ ಮತ್ತು ಐಷಾರಾಮಿ ಜೀವನಶೈಲಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಆದಾಗ್ಯೂ, ಕುಟುಂಬದ ಸರಳತೆ ಮತ್ತು ಕುಟುಂಬ ಬಾಂಧವ್ಯವು ಜನಸಾಮಾನ್ಯರ ಮನಸ್ಸು ಗೆಲ್ಲುತ್ತದೆ. ಇತ್ತೀಚೆಗೆ, ಮಹಾರಾಷ್ಟ್ರದ ಕರ್ಜತ್‌ನಲ್ಲಿ ಇದೇ ರೀತಿಯ ದೃಶ್ಯ ಎಲ್ಲರ ಮನಸ್ಸು ಗೆದ್ದಿದೆ. ನೀತಾ ಅಂಬಾನಿ ಮತ್ತು ಇಶಾ ಅಂಬಾನಿ, ಬೀದಿ ಬದಿಯಲ್ಲಿ ಶಾಪಿಂಗ್‌ ಮಾಡಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬೀದಿ ಬದಿಯಲ್ಲಿ ದೀಪ ಖರೀದಿ

ಮಹಾರಾಷ್ಟ್ರದ ಕರ್ಜತ್ನಲ್ಲಿ ಸೇವಾ ಆಶ್ರಮವೊಂದರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ಬರುವ ವೇಳೆ ದಾರಿಯಲ್ಲಿದ್ದ ಸ್ಥಳೀಯ ಅಂಗಡಿಯನ್ನು ಕಂಡು ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ಬಳಿಕ ಯಾವುದೇ ದೊಡ್ಡ ಶಾಪಿಂಗ್ ಮಾಲ್ಗಳಿಗೆ ಹೋಗದೆ, ರಸ್ತೆ ಬದಿಯ ಅಂಗಡಿಯಲ್ಲಿ ಸಾಮಾನ್ಯರಂತೆ ವಸ್ತುಗಳನ್ನು ನೋಡುತ್ತಾ ಖರೀದಿ ಮಾಡಿದ್ದಾರೆ.

ಇಶಾ ಅಂಬಾನಿ ಅವರು ಅಂಗಡಿಯಲ್ಲಿದ್ದ ಮಣ್ಣಿನ ದೀಪಗಳು, ರಂಗೋಲಿ ಹಾಕಲು ಬಳಸುವ ಅಚ್ಚು, ಬಣ್ಣಗಳನ್ನು ಆಸಕ್ತಿಯಿಂದ ನೋಡಿದ್ದಾರೆ. ಇತ್ತ ನೀತಾ ಅಂಬಾನಿ ಅಂಗಡಿ ಮುಂದೆ ನೇತುಹಾಕಿದ್ದ ಆಕರ್ಷಕ ಆಕಾಶಬುಟ್ಟಿ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡಿದ್ದಾರೆ.

ಮಕ್ಕಳ ಜೊತೆ ಇಶಾ ಅಂಬಾನಿ ಮಸ್ತಿ

ಈ ಶಾಪಿಂಗ್ನ ಮತ್ತೊಂದು ವಿಶೇಷವೆಂದ್ರೆ ಇಶಾ ಅಂಬಾನಿ ಅವರ ಮಕ್ಕಳಾದ ಆದಿಯಾ ಮತ್ತು ಕೃಷ್ಣಾ ಕೂಡ ಜೊತೆಯಲ್ಲಿದ್ದರು. ಅಜ್ಜಿ ನೀತಾ ಅಂಬಾನಿ ಮತ್ತು ತಾಯಿ ಇಶಾ ಜೊತೆ ಮಕ್ಕಳು ಸ್ಥಳೀಯ ಮಾರುಕಟ್ಟೆಯಲ್ಲಿ ಖುಷಿಯಿಂದ ಸಮಯ ಕಳೆದಿದ್ದಾರೆ. ಇಶಾ ಕೂಡ ಮಕ್ಕಳಿಗೆ ಅಂಗಡಿಯಲ್ಲಿದ್ದ ವಸ್ತುಗಳ ಬಗ್ಗೆ ವಿವರಿಸುತ್ತಾ, ಅವರೊಂದಿಗೆ ಆತ್ಮೀಯವಾಗಿ ಕಾಲ ಕಳೆದಿದ್ದಾರೆ.

ಸರಳತೆಗೆ ಮನಸೋತ ನೆಟ್ಟಿಗರು

ಸಾಮಾನ್ಯವಾಗಿ ದುಬಾರಿ ಬ್ರಾಂಡೆಡ್ ವಸ್ತುಗಳು ಮತ್ತು ಐಷಾರಾಮಿ ಜೀವನಶೈಲಿಯ ಮೂಲಕವೇ ಸುದ್ದಿಯಾಗುವ ಅಂಬಾನಿ ಕುಟುಂಬ, ಈ ಬಾರಿ ಸ್ಥಳೀಯ ಬೀದಿ ವ್ಯಾಪಾರಿಗಳ ಅಂಗಡಿಯಲ್ಲಿ ಶಾಪಿಂಗ್ ಮಾಡುವ ಮೂಲಕ ಗಮನ ಸೆಳೆದಿದೆ. ದೊಡ್ಡ ಉದ್ಯಮ ಸಾಮ್ರಾಜ್ಯದ ಒಡತಿಯಾಗಿದ್ದರೂ ಸ್ಥಳೀಯ ಮಾರುಕಟ್ಟೆಯ ಸಣ್ಣ ಅಂಗಡಿಗಳಲ್ಲಿ ಆಸಕ್ತಿಯಿಂದ ವಸ್ತುಗಳನ್ನು ಖರೀದಿಸಿದ ನೀತಾ ಅಂಬಾನಿ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

View post on Instagram