ದುಬೈ[ಮಾ.30]: ದುಬೈ ವಿಮಾನ ನಿಲ್ದಾಣದಲ್ಲಿ 'ಗೋಲ್ಡ್ ಬಾರ್ ಚಾಲೆಂಜ್[Gold Bar Challenge]' ಆರಂಭಿಸಲಾಗಿದೆ. ತಂತ್ರಗಾರಕೆಯ ಈ ಚಾಲೆಂಜ್ ನಲ್ಲಿ ಯಾವ ವ್ಯಕ್ತಿ ಬಾಕ್ಸ್ ನಲ್ಲಿರುವ 20ಕೆ. ಜಿ ಚಿನ್ನ ಹೊರ ತೆಗೆಯುತ್ತಾರೋ ಅದು ಅವರಿಗೆ ಸೇರುತ್ತದೆ. ಈ ಚಾಲೆಂಜ್ ನೋಡಲು ಬಹಳ ಸುಲಭವೆನಿಸುತ್ತದೆ. ಆದರೆ ಈವರೆಗೂ ಇದನ್ನು ಮಾಡಲು ಯಾರೊಬ್ಬರಿಂದಲೂ ಸಾಧ್ಯವಾಗಿಲ್ಲ. ವಿಮಾನ ನಿಲ್ದಾಣಕ್ಕೆ ಬಂದವರೆಲ್ಲಾ ಅವರೆಲ್ಲರೂ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈವರೆಗೆ ಒಬ್ಬರೂ ೀ ಚಾಲೆಂಜ್ ನಲ್ಲಿ ಯಶಸ್ವಿಯಾಗಿಲ್ಲ.

20 ಕೆ. ಜಿ ಚಿನ್ನ ಗೆಲ್ಲಲು ಹೀಗೆ ಮಾಡಬೇಕು

1. ಬಾಕ್ಸ್ ಒಂದರಲ್ಲಿ 20 ಕೆ. ಜಿ ಚಿನ್ನ ಇರಿಸಲಾಗಿದೆ. ಇದಕ್ಕೆ ಚಿಕ್ಕದೊಂದು ರಂಧ್ರ ಮಾಡಲಾಗಿದೆ. ಈ ಮೂಲಕ ಪೆಟ್ಟಿಗೆಯೊಳಗೆ ಕೈ ಹಾಕಿ ಚಿನ್ನದ ಬಿಸ್ಕೆಟ್ ಹೊರ ತೆಗೆಯಬೇಕು

2. ಒಂದು ವೇಳೆ ನೀವು ಈ ಚಿನ್ನದ ಗಟ್ಟಿಯನ್ನು ಹೊರ ತೆಗೆದರೆ ಅದು ನಿಮ್ಮದಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಹಲವಾರು ಮಂದಿ ಚಿನ್ನ ಹೊರತೆಗೆಯಲು ಯತ್ನಿಸುತ್ತಿರುವುದನ್ನು ನೋಡಬಹುದು. ಕೆಲವರು ಈ ಚಿನ್ನದ ಗಟ್ಟಿಯನ್ನು ಎತ್ತುವ ಪ್ರಯತ್ನ ಮಾಡಿದರೆ, ಮತ್ತೆ ಕೆಲವರು ಇದನ್ನೆತ್ತಲು ಯಶಸ್ವಿಯಾಗುತ್ತಾರೆ ಆದರೆ ರಂಧ್ರದಿಂದ ಹೊರ ತೆಗೆಯಲಾಗದೆ ಸೋಲೊಪ್ಪಿಕೊಳ್ಳುತ್ತಾರೆ.