ಬಿಬಿಎ ಡ್ರಾಪ್ ಔಟ್ ಆದ್ರೂ ಚಹಾ ಮಾರಿ ಕೋಟ್ಯಧಿಪತಿಯಾದ ಭಾರತೀಯ ವಿದ್ಯಾರ್ಥಿ!
ಕಾಲೇಜಿನಿಂದ ಡ್ರಾಪ್ ಔಟ್ ಆದ ವಿದ್ಯಾರ್ಥಿಯೊಬ್ಬ ಆಸ್ಟ್ರೇಲಿಯಾದಲ್ಲಿ ಚಹಾ ಅಂಗಡಿ ತೆರೆದು, ಕೋಟ್ಯಧಿಪತಿಯಾಗಿದ್ದಾನೆ. ಆಸಕ್ತಿ, ಶ್ರಮ ಹಾಗೂ ಶ್ರದ್ಧೆಯಿದ್ದರೆ ಸಾಕು, ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಡ್ರಾಪ್ ಔಟ್ ಚಾಯ್ ವಾಲಾ ಎಂಬ ಚಹಾ ಅಂಗಡಿ ತೆರೆದಿರುವ ಭಾರತೀಯ ಮೂಲದ ಸಂಜಿತ್ ಕೊಂಡ ಉತ್ತಮ ನಿದರ್ಶನ.
Business Desk:ಬದುಕು ಯಾವ ಕ್ಷಣ ಹೇಗೆ ಬೇಕಾದರೂ ತಿರುವು ಪಡೆಯಬಲ್ಲದು. ಇದಕ್ಕೆ ಸಾಕಷ್ಟು ನಿದರ್ಶನಗಳು ಕೂಡ ಸಿಗುತ್ತವೆ. ವಿದ್ಯೆ ತಲೆಗೆ ಹತ್ತದ ವ್ಯಕ್ತಿ ಕೂಡ ಕೋಟ್ಯಂತರ ರೂ. ಮೌಲ್ಯದ ಸಂಪತ್ತಿನ ಒಡೆಯನಾದ ಕಥೆಗಳು ಬೇಕಾದಷ್ಟಿವೆ. ಶೈಕ್ಷಣಿಕ ಬದುಕಿನಲ್ಲಿ ಮುಗ್ಗರಿಸಿದೆ ಎಂಬ ಒಂದು ಸಣ್ಣ ಕಾರಣಕ್ಕೆ ಬದುಕನ್ನೇ ಕೊನೆಗಾಣಿಸಿಕೊಂಡವರ ಕಥೆಗಳು ನಿತ್ಯ ಮಾಧ್ಯಮಗಳಲ್ಲಿ ನೋಡಿರುತ್ತೇವೆ, ಓದಿರುತ್ತೇವೆ. ಆದರೆ, ವಿದೇಶದಲ್ಲಿ ಬಿಬಿಎ ಕೋರ್ಸ್ ಪೂರ್ಣಗೊಳಿಸಲು ಸಾಧ್ಯವಾಗದ ವಿದ್ಯಾರ್ಥಿಯೊಬ್ಬ ಚಹಾ ಅಂಗಡಿ ತೆರೆದು ಕೋಟ್ಯಂತರ ರೂ. ಸಂಪಾದಿಸಿದ್ದಾನೆ. ಈತನ ಯಶೋಗಾಥೆ ಯುಪೀಳಿಗೆಗೆ ಸ್ಫೂರ್ತಿದಾಯಕ. ಅಂದಹಾಗೇ ಯಶಸ್ವಿ ಸ್ವ ಉದ್ಯಮಿಯಾದ ಭಾರತೀಯ ಮೂಲದ ಈ ಡ್ರಾಪ್ ಔಟ್ ವಿದ್ಯಾರ್ಥಿ ಹೆಸರು ಸಂಜಿತ್ ಕೊಂಡ. ಇವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ 'ಚಹಾ ಅಂಗಡಿ' ತೆರೆದು ಕೋಟ್ಯಂತರ ರೂ. ಸಂಪಾದಿಸಿದ್ದಾರೆ. ಈ ಉದ್ಯಮಕ್ಕೆ ಕೈ ಹಾಕುವ ಮುನ್ನ ಸಂಜಿತ್, ಆಸ್ಟ್ರೇಲಿಯಾದ ಲಾ ಟ್ರೋಬ್ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಬ್ಯಾಚುಲರ್ಸ್ ಡಿಗ್ರಿ ಪುರ್ಣಗೊಳಿಸಲು ವಿಫಲರಾಗಿದ್ದರು.
ಬಿಬಿಎ ಪೂರ್ಣಗೊಳಿಸಲು ಸಾಧ್ಯವಾಗದ ಸಂಜಿತ್ ಕೊಂಡ ಆ ಬಳಿಕ ಮೆಲ್ಬೋರ್ನ್ ನಲ್ಲಿ 'ಡ್ರಾಪ್ ಔಟ್ ಚಾಯ್ ವಾಲಾ' (Dropout Chaiwala) ಎಂಬ ಚಹಾ ಅಂಗಡಿ ತೆರೆದರು. ಕಾಫಿ (Coffee) ಪ್ರಿಯ ಮೇಲ್ಬೋರ್ನ್ ನಲ್ಲಿ (Melbourne) ಚಹಾ ಅಂಗಡಿ ತೆರೆಯೋದು ಸಂಜಿತ್ ಪಾಲಿಗೆ ಸುಲಭದ ಕೆಲಸವಾಗಿರಲಿಲ್ಲ. 'ಬಾಲ್ಯದಿಂದಲೂ ನನಗೆ ಚಹ (Tea) ಅಂದ್ರೆ ಇಷ್ಟ. ಇದೇ ಕಾರಣಕ್ಕೆ 'ಡ್ರಾಪ್ ಔಟ್ ಚಾಯ್ ವಾಲಾ' ಎಂಬ ಐಡಿಯಾ ನನಗೆ ಮೆಚ್ಚುಗೆಯಾಯಿತು ಎಂದು ಸಂಜಿತ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಂಜಿತ್ ನೆರವಿಗೆ ಬಂದವರು ಅಲ್ಲಿರುವ ಅನಿವಾಸಿ ಭಾರತೀಯ. ಆ ಹೂಡಿಕೆದಾರನ (Investor) ನೆರವಿನೊಂದಿಗೆ ಸಂಜಿತ್ ಚಹಾ ಮಾರುವ ಉದ್ಯಮಕ್ಕೆ (Business) ಕೈ ಹಾಕಿದರು. 'ಡ್ರಾಪ್ ಔಟ್ ಚಾಯ್ ವಾಲಾ' ಎಂಬ ಹೆಸರಿನ ಅಂಗಡಿ ತೆರೆದ ಸಂಜಿತ್, ಚಹಾದ ಜೊತೆಗೆ ಸಮೋಸ್ ಕೂಡ ಮಾರಲು ಪ್ರಾರಂಭಿಸಿದರು.ಇದು ಮೇಲ್ಬೋರ್ನ್ ನಲ್ಲಿರುವ ಭಾರತೀಯರಿಗೆ ಮಾತ್ರವಲ್ಲ, ಅಲ್ಲಿನ ಮೂಲ ನಿವಾಸಿಗಳಿಗೂ ಇಷ್ಟವಾಯಿತು. ಪರಿಣಾಮ 'ಡ್ರಾಪ್ ಔಟ್ ಚಾಯ್ ವಾಲಾ' ಮೇಲ್ಬೋರ್ನ್ ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುವ ಜೊತೆಗೆ ಗ್ರಾಹಕರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯಲು ಪ್ರಾರಂಭಿಸಿತು.
ಚುನಾವಣಾ ಬಾಂಡ್ ಗಳೇ ರಾಜಕೀಯ ಪಕ್ಷಗಳ ತಿಜೋರಿ; 2018ರಿಂದ ಇಲ್ಲಿಯ ತನಕ 10,791ಕೋಟಿ ರೂ. ಸಂಗ್ರಹ
'ಡ್ರಾಪ್ ಔಟ್ ಚಾಯ್ ವಾಲಾ' ಶಾಪ್ ನಲ್ಲಿ ಭಾರತೀಯರಿಗೆ 'ಬಾಂಬೆ ಕಟ್ಟಿಂಗ್' ಚಹಾ ಇಷ್ಟವಾದ್ರೆ, ಆಸ್ಟ್ರೇಲಿಯನರಿಗೆ 'ಮಸಾಲಾ ಚಾಯ್' ಅಚ್ಚುಮೆಚ್ಚು. ಎಲ್ಲ ತೆರಿಗೆಗಳನ್ನು ಕಡಿತ ಮಾಡಿ ಹಾಗೂ ಎಲ್ಲ ವೆಚ್ಚಗಳನ್ನು ಭರಿಸಿದ ಬಳಿಕ ಮುಂದಿನ ತಿಂಗಳು ನನ್ನ ಆದಾಯ (Income) ಸರಿಸುಮಾರು 5.2 ಕೋಟಿ ರೂ. ತಲುಪಲಿದೆ ಎಂದು ಸಂಜಿತ್ ತಿಳಿಸಿದ್ದಾರೆ.
ವಿದೇಶಿ ಟ್ರಿಪ್‌ಗಳಿಗೆ ಸರ್ಕಾರಿ ನೌಕರರು ರಜೆ ಪ್ರಯಾಣ ವಿನಾಯಿತಿ ಕೇಳುವಂತಿಲ್ಲ: ಸುಪ್ರೀಂ ಕೋರ್ಟ್
'ಡ್ರಾಪ್ ಔಟ್ ಚಾಯ್ ವಾಲಾ' ಭಾರತದಿಂದ (India) ಚಹಾ ಪುಡಿಯನ್ನು ಆಮದು (Income) ಮಾಡಿಕೊಳ್ಳುತ್ತದೆ. ಅಲ್ಲದೆ, ಆಸ್ಟ್ರೇಲಿಯಾದಲ್ಲಿ (Australia) ನೆಲೆಸಿರುವ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಕೆಲಸಕ್ಕಾಗಿ ನೇಮಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ಅಲ್ಲಿನ ಖರ್ಚು ವೆಚ್ಚಗಳನ್ನು ನಿಭಾಯಿಸಲು ಅರೆಕಾಲಿಕ ಉದ್ಯೋಗಗಳನ್ನು ಮಾಡುತ್ತಾರೆ. ಸಂಜಿತ್ ಡ್ರಾಪ್ ಔಟ್ ಆಗಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಅವರ ಪಾಲಕರು (Parents) ಶಾಕ್ ಆಗಿದ್ದಾರಂತೆ. ಆದರೆ ಈಗ ಅವರು ನಾನು ಹೇಗೆ ಉದ್ಯಮ (Business) ಪ್ರಾರಂಭಿಸಿದೆ ಹಾಗೂ ಎಲ್ಲಿ ಮುಟ್ಟಿದೆ ಎಂಬುದರ ಬಗ್ಗೆ ಹೆಮ್ಮೆ ಹೊಂದಿದ್ದಾರೆ ಎಂದು ಸಂಜಿತ್ ಕೊಂಡ ಹೇಳುತ್ತಾರೆ.