ಭಲೇ ಟ್ರಂಪ್.. ! ಜೈಲಲ್ಲಿ ತೆಗೆದ ಫೋಟೋದಿಂದ್ಲೇ ದೇಣಿಗೆ ಸಂಗ್ರಹ.. ಟೀ ಶರ್ಟ್ ಮಾರಾಟ
ನೆಗೆಟಿವ್ ವಿಷ್ಯವನ್ನು ಪಾಸಿಟಿವ್ ಮಾಡುವ ಕಲೆ ಗೊತ್ತಿದ್ರೆ ಅಮೆರಿಕಾದಂತ ದೇಶವನ್ನೇ ಆಳ್ಬಹುದು. ಇದಕ್ಕೆ ಡೊನಾಲ್ಡ್ ಟ್ರಂಪ್ ನಿದರ್ಶನ. ಜೈಲಿಗೆ ಹೋಗಿ ಬಂದ್ರೂ ಮೂಲೆ ಸೇರದ ಟ್ರಂಪ್ ಅದನ್ನೇ ಬಂಡವಾಳ ಮಾಡಿಕೊಂಡಿದ್ದು ಹೇಗೆ ಗೊತ್ತಾ?

ಪೊಲೀಸರಿಂದ ಬಂಧಿಸಲ್ಪಟ್ಟಾಗ ಅಥವಾ ಜೈಲಿನಲ್ಲಿ ತೆಗೆದ ಫೋಟೋವನ್ನು ಮಗ್ ಶಾಟ್ ಅಂತಾ ಕರೀತಾರೆ. ಸೆಲೆಬ್ರಿಟಿಗಳ ಬಂಧನವಾದಾಗ ಮಗ್ ಶಾಟ್ ವೈರಲ್ ಆಗೋದನ್ನು ನಾವು ನೋಡಿದ್ದೇವೆ. ಆದ್ರೆ ಈ ಫೋಟೋ ಬಳಸಿಕೊಂಡು ಹಣ ಮಾಡೋದು ಅಂದ್ರೇನು?. ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಷ್ಯದಲ್ಲಿ ಇದೂ ಆಗಿದೆ. ಡೊಲಾನ್ಡ್ ಟ್ರಂಪ್ ಮಗ್‌ಶಾಟ್ ಫೋಟೋ ವೈರಲ್ ಆಗಿದ್ದಲ್ಲದೆ ಮಗ್ ಶಾಟ್ ಫೋಟೋ ಇರುವ ಟೀ ಶರ್ಟ್ ಗೆ ಭರ್ಜರಿ ಬೇಡಿಕೆ ಬಂದಿದೆ.
ಅಮೆರಿಕ (America) ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸಣ್ಣ ಆರೋಪಿಯಲ್ಲ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮಾಜಿ ಅಧ್ಯಕ್ಷ. ನಿಸ್ಸಂಶಯವಾಗಿ ಅಮೆರಿಕದ ವ್ಯವಸ್ಥೆಯಲ್ಲಿ ಯಾರಿಗೂ ಯಾವುದೇ ರಿಯಾಯಿತಿ ಇಲ್ಲ. ಆದ್ರೆ ಟ್ರಂಪ್ ಯುಗದಲ್ಲಿ ಎಲ್ಲವೂ ಬದಲಾಗಲು ಸಾಧ್ಯವಿದೆ. ಮಾಜಿ ಅಧ್ಯಕ್ಷ ಜೈಲಿಗೆ ಹೋಗಬಹುದು, ಅದೇ ಸಮಯದಲ್ಲಿ ಅಧ್ಯಕ್ಷ ರೇಸ್ ನಲ್ಲಿ ಸ್ಪರ್ಧಿಸಬಹುದು, ಜೈಲಿನಲ್ಲಿ ತೆಗೆದ ಫೋಟೋವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬಹುದು. ಇದೆಲ್ಲವೂ ಟ್ರಂಪ್ ವಿಷ್ಯದಲ್ಲಿ ಸಾಧ್ಯವಾಗಿದೆ. ಜೈಲಿಗೆ ಹೋದ್ವಿ ಅಂದ್ರೆ ಸಾಮಾನ್ಯ ವ್ಯಕ್ತಿಗಳು ತಲೆತಗ್ಗಿಸಿಕೊಂಡು ಓಡಾಡ್ತಾರೆ. ಅವರಿಗೆ ಮುಖ ತೋರಿಸೋದು ಅವಮಾನ ಎನ್ನಿಸುತ್ತದೆ. ಆದ್ರೆ ಟ್ರಂಪ್ ಹಾಗಲ್ಲ. ಅವರು ಯಾವುದಕ್ಕೂ ನಾಚಿಕೆಪಡುವ, ಹಿಂದೇಟು ಹಾಕುವ ವ್ಯಕ್ತಿಯಲ್ಲ. ಜೈಲಿನಲ್ಲಿ ತೆಗೆದ ಫೋಟೋವನ್ನೇ ಅವರು ಈಗ ಚುನಾವಣೆಗೆ ಹಣ ಸಂಗ್ರಹಿಸಲು ಬಳಸಿಕೊಳ್ತಿದ್ದಾರೆ.
ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಜನಪ್ರಿಯ ಬ್ರ್ಯಾಂಡ್‌ಗಳಿವು, ನಿಮ್ಮ ಫೇವರಿಟ್ ಬ್ರಾಂಡ್ ಇದೆಯಾ?
ಮೊದಲು ಟ್ವಿಟರ್ ನಲ್ಲಿ ಮಗ್ ಶಾಟ್ (Mug Shot) ಫೋಟೋವನ್ನು ಪೋಸ್ಟ್ ಮಾಡಲಾಗಿತ್ತು. ಫೋಟೋ ಪೋಸ್ಟ್ ಆದ ಎರಡು ದಿನಗಳಲ್ಲಿ, ಟ್ರಂಪ್ ಸುಮಾರು 7 ಮಿಲಿಯನ್ ಡಾಲರ್ ಅಂದ್ರೆ 57 ಕೋಟಿ ರೂಪಾಯಿ ದೇಣಿಗೆಯನ್ನು ಸ್ವೀಕರಿಸಿದ್ದರು. ಇದು ಟ್ರಂಪ್ ಜನಪ್ರಿಯತೆಯೋ ಅಥವಾ ಮಗ್ ಶಾಟ್ ಪ್ರಭಾವವೋ ತಿಳಿದಿಲ್ಲ, ಒಟ್ಟಿನಲ್ಲಿ ಜನರು ದೇಣಿಗೆ ನೀಡ್ತಿದ್ದಾರೆ. ಒಂದು ಕಡೆ ಮಗ್ ಶಾಟ್ ಫೋಟೋ ಸಾಕಷ್ಟು ಹಣ ಗಳಿಸುತ್ತಿದ್ದರೆ ಇನ್ನೊಂದು ಕಡೆ ಇದೇ ಫೋಟೋವನ್ನು ಟೀ ಶರ್ಟ್ ನಲ್ಲಿ ಮುದ್ರಿಸಿ ಮಾರಾಟ ಮಾಡಲಾಗ್ತಿದೆ.
ಜಂಟಿ ಗೃಹ ಸಾಲ ಪಡೆಯೋದು ನಿಜಕ್ಕೂ ಒಳ್ಳೆಯದಾ? ಅದ್ರಿಂದ ಏನೆಲ್ಲ ಪ್ರಯೋಜನಗಳಿವೆ?
ಬಂಧನದ ನಂತ್ರ ಕ್ಯಾಂಪೇನ್ ಶುರು ಮಾಡಿರುವ ಟ್ರಂಪ್ ಅದಕ್ಕೆ ನೆವರ್ ಸರೆಂಡರ್ ಎಂದು ಹೆಸರಿಟ್ಟಿದ್ದಾರೆ. ನೆವರ್ ಸರೆಂಡರ್ (Never Surrender) ಹೆಸರಿನಲ್ಲಿಯೇ ಫೋಟೋ ಮತ್ತು ಫೋಟೋ ಇರುವ ಟೀ ಶರ್ಟ್ ಮಾರಾಟವಾಗ್ತಿದೆ. ಟ್ರಂಪ್ ಮೆಗ್ ಶಾಟ್ ಹೊಂದಿರುವ ಟೀ ಶರ್ಟ್ ಬೆಲೆ 34 ಡಾಲರ್ ಅಂದ್ರೆ ಸುಮಾರು 3 ಸಾವಿರ ರೂಪಾಯಿಯಾಗಿದೆ. ಈ ಟೀ ಶರ್ಟ್ ಆನ್ಲೈನ್ ವೆಬ್ ಸೈಟ್ winred.com ನಲ್ಲಿ ಮಾರಾಟ ಆಗ್ತಿದೆ. ಈ ಟೀ ಶರ್ಟ್ ನ ಡಿಸ್ಕ್ರಿಪ್ಶನ್ ನಲ್ಲಿ ಟೀ ಶರ್ಟ್ ವಿಶೇಷತೆ ಜೊತೆಗೆ ಡೊನಾಲ್ಡ್ ಟ್ರಂಪ್ ಹಾಗೂ ಅವರ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗಿದೆ.
ನಕಾರಾತ್ಮಕ ವಿಷ್ಯವನ್ನು ಧನಾತ್ಮಕ ಮಾಡುವ ಕಲೆ ಟ್ರಂಪ್ ಗೆ ತಿಳಿದಿದೆ. ಟ್ರಂಪ್ ಜೈಲಿನಲ್ಲಿ ತಮ್ಮ ಮಗ್‌ಶಾಟ್ ತೆಗೆದುಕೊಳ್ಳಲು ಸಾಕಷ್ಟು ಸಿದ್ಧತೆ ನಡೆಸಿದ್ದರು. ಫೋಟೋ ಹೊಡೆಯುವ ಸಂದರ್ಭದಲ್ಲಿ ಯಾವ ಮುಖಭಾವ ಇರಬೇಕು ಎಂಬುದರ ಕುರಿತು ಸಾಕಷ್ಟು ಚಿಂತನೆ ನಡೆದಿತ್ತು. ಸರಿಯಾದ ಬಟ್ಟೆ ಮತ್ತು ಸರಿಯಾದ ಮುಖಭಾವ ಪ್ರಚಾರದಲ್ಲಿ ಮತದಾರರನ್ನು ಸೆಳೆಯುತ್ತದೆ. ಏಪ್ರಿಲ್‌ನಲ್ಲಿಯೇ ನಕಲಿ ಮಗ್ ಶಾಟ್ ಫೋಟೋ ಇರುವ ಟೀ ಶರ್ಟ್ ಮಾರಾಟ ಮಾಡಿ ಜನರ ಪ್ರತಿಕ್ರಿಯೆ ಪಡೆಯಲಾಗಿತ್ತು. ಅಂತಿಮವಾಗಿ ಟ್ರಂಪ್ ಆಗಸ್ಟ್ 24 ರಂದು ಜಾರ್ಜಿಯಾದ ಫುಲ್ಟನ್ ಕೌಂಟಿಯಲ್ಲಿ ಶರಣಾದಾಗ ತೆಗೆದ ಮಗ್ ಶಾಟ್ ಈಗ ಸುದ್ದಿ ಮಾಡುತ್ತಿದೆ. ಮಗ್ ಶಾಟ್ ಪೋಸ್ಟ್ ಆದ 24 ಗಂಟೆಯಲ್ಲೇ ಟ್ರಂಪ್ ಇಷ್ಟೊಂದು ಹಣ ಪಡೆದಿದ್ದು ಇದೇ ಮೊದಲು.