ಷೇರು ಮಾರುಕಟ್ಟೆ ಹೂಡಿಕೆ ಸಂಪತ್ತು ಹೆಚ್ಚಿಸಲು ಸಹಕಾರಿ. ಹೂಡಿಕೆಗೂ ಮುನ್ನ ಮಾರುಕಟ್ಟೆ ತಿಳಿಯುವುದು ಮುಖ್ಯ. ಭಾರತದಲ್ಲಿ ಬಿಎಸ್‌ಇ ಮತ್ತು ಎನ್‌ಎಸ್‌ಇ ಮುಖ್ಯ ವಿನಿಮಯ ಕೇಂದ್ರಗಳು. ಕಂಪನಿಗಳು ಐಪಿಒ ಮೂಲಕ ಷೇರುಗಳನ್ನು ಲಿಸ್ಟ್ ಮಾಡುತ್ತವೆ. ಷೇರು ಬೆಲೆ ಬೇಡಿಕೆ, ಪೂರೈಕೆ ಮೇಲೆ ನಿರ್ಧಾರವಾಗುತ್ತದೆ. ಡಿಮ್ಯಾಟ್ ಖಾತೆ ತೆರೆದು, ಕೆವೈಸಿ ಮಾಡಿ ಹೂಡಿಕೆ ಆರಂಭಿಸಿ. ರಿಸ್ಕ್ ಅರಿತು, ದೀರ್ಘಕಾಲೀನ ಹೂಡಿಕೆ ಮಾಡಿ. 

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಕಾಲಕ್ರಮೇಣ ಸಂಪತ್ತು ಹೆಚ್ಚಿಸಲು ಸಹಕಾರಿಯಾಗುತ್ತದೆ. ಹೂಡಿಕೆ ಶುರು ಮಾಡುವುದಕ್ಕೆ ಮುಂಚೆ ಬೇಸಿಕ್ ಕಾನ್ಸೆಪ್ಟ್ ಮತ್ತು ಮಾರ್ಕೆಟ್ ಡೈನಾಮಿಕ್ಸ್ ಅರ್ಥ ಮಾಡಿಕೊಳ್ಳೋದು ತುಂಬಾನೇ ಮುಖ್ಯ. ಈ ಗೈಡ್ ಷೇರು ಮಾರುಕಟ್ಟೆ ಬೇಸಿಕ್ಸ್, ಅದು ಹೇಗೆ ಕೆಲಸ ಮಾಡುತ್ತೆ ಅಂತ ನೋಡೋಣ.

- ಷೇರು ಮಾರುಕಟ್ಟೆ ಅಂದ್ರೆ ಸಾರ್ವಜನಿಕವಾಗಿ ಟ್ರೇಡ್ ಆಗೋ ಕಂಪೆನಿಗಳ ಷೇರುಗಳನ್ನು ಕೊಂಡುಕೊಳ್ಳೋದು ಮತ್ತು ಮಾರಾಟ ಮಾಡೋ ಒಂದು ಫೈನಾನ್ಷಿಯಲ್ ಪ್ಲಾಟ್​ಫಾರ್ಮ್​. ಇಂಡಿಯಾದಲ್ಲಿ ಷೇರು ವ್ಯವಹಾರ ಎರಡು ಮುಖ್ಯ ಎಕ್ಸ್​ಚೇಂಜ್​ಗಳಲ್ಲಿ ನಡೆಯುತ್ತೆ.
-ಬಾಂಬೆ ಷೇರು ಮಾರುಕಟ್ಟೆ (BSE) - 1875ರಲ್ಲಿ ಸ್ಥಾಪನೆಯಾಯಿತು. ಇದು ಪ್ರಪಂಚದಲ್ಲೇ ಅತ್ಯಂತ ಹಳೆಯ ಷೇರು ಮಾರುಕಟ್ಟೆಗಳಲ್ಲಿ ಒಂದು.
-ನ್ಯಾಷನಲ್ ಷೇರು ಮಾರುಕಟ್ಟೆ (NSE) - 1992ರಲ್ಲಿ ಶುರುವಾಯಿತು. ಇದು ಟ್ರೇಡಿಂಗ್ ವಾಲ್ಯೂಮ್ ಆಧಾರದ ಮೇಲೆ ಇಂಡಿಯಾದಲ್ಲೇ ಅತೀ ದೊಡ್ಡ ಷೇರು ಮಾರುಕಟ್ಟೆ.
-ಈ ಮಾರುಕಟ್ಟೆಗಳಲ್ಲಿ ಷೇರು ವಹಿವಾಟು ನಡೆಸೋಕೆ ಇನ್ವೆಸ್ಟರ್ಗಳು ಬ್ರೋಕರ್​ಗಳನ್ನು ಉಪಯೋಗಿಸುತ್ತಾರೆ.

ಷೇರು ಮಾರುಕಟ್ಟೆ ಹೇಗೆ ಕೆಲಸ ಮಾಡುತ್ತೆ?

ಐಪಿಒ ಅಂತ ಕರೆಯಲ್ಪಡೋ ಇನಿಷಿಯಲ್ ಪಬ್ಲಿಕ್ ಆಫರಿಂಗ್ (IPO) ಮೂಲಕ ಕಂಪೆನಿಗಳು ಷೇರು ಮಾರುಕಟ್ಟೆಗಳಲ್ಲಿ ತಮ್ಮ ಷೇರುಗಳನ್ನು ಲಿಸ್ಟ್ ಮಾಡುತ್ತವೆ. ಇದರಿಂದ ಬಂಡವಾಳವನ್ನು ಕ್ರೋಡೀಕರಿಸಬಹುದು. ಲಿಸ್ಟ್ ಆದ ನಂತರ ಷೇರುಗಳು ಸೆಕೆಂಡರಿ ಮಾರ್ಕೆಟ್​ನಲ್ಲಿ ಫ್ರೀಯಾಗಿ ಟ್ರೇಡ್ ಆಗುತ್ತವೆ. ಷೇರು ಬೆಲೆ ಸಪ್ಲೈ, ಡಿಮಾಂಡ್​, ಕಂಪೆನಿ ಪರ್ಫಾರ್ಮೆನ್ಸ್ ಮತ್ತು ಒಟ್ಟಾರೆ ಮಾರ್ಕೆಟ್ ಕಂಡೀಷನ್​ಗಳ ಆಧಾರದ ಮೇಲೆ ಏರಿಳಿತ ಆಗುತ್ತಿರುತ್ತದೆ.

ಷೇರು ಮಾರುಕಟ್ಟೆಯಲ್ಲಿ ಮುಖ್ಯ ಪಾಲುದಾರರು

-ರಿಟೇಲ್ ಇನ್ವೆಸ್ಟರ್​ಗಳು - ವೈಯಕ್ತಿಕ ಫೈನಾನ್ಷಿಯಲ್ ಡೆವಲಪ್​ಮೆಂಟಾಗಿ ಹೂಡಿಕೆ ಮಾಡುವ ವ್ಯಕ್ತಿಗಳು.
-ಸಂಸ್ಥೆಯ ಹೂಡಿಕೆದಾರರು - ಮ್ಯೂಚುವಲ್ ಫಂಡ್​ಗಳು, ಇನ್ಶೂರೆನ್ಸ್ ಕಂಪೆನಿಗಳು ಮತ್ತು ಪಿಂಚಣಿ ನಿಧಿಗಳಂತಹ ದೊಡ್ಡ ಸಂಸ್ಥೆಗಳು.
-ಷೇರು ದಲ್ಲಾಳಿಗಳು - ಷೇರು ವಹಿವಾಟುಗಳನ್ನು ಸುಲಭಗೊಳಿಸೋ SEBIನಲ್ಲಿ ರಿಜಿಸ್ಟರ್ ಆಗಿರೋ ಎಕ್ಸ್​ಪರ್ಟ್​ಗಳು .
-ನಿಯಂತ್ರಣ ಸಂಸ್ಥೆಗಳು - ಭಾರತೀಯ ಸೆಕ್ಯುರಿಟೀಸ್ ಮತ್ತು ಎಕ್ಸ್​ಚೇಂಜ್​ ಬೋರ್ಡ್ (SEBI) ಪಾರದರ್ಶಕತೆ ಕಾಪಾಡುವುದು ಮತ್ತು ಹೂಡಿಕೆದಾರರನ್ನು ರಕ್ಷಿಸೋಕೆ ಷೇರು ಮಾರುಕಟ್ಟೆ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ.

ವಿವಾಹ ನೋಂದಣಿ ಏಕೆ ಬೇಕು? ಇಷ್ಟೆಲ್ಲಾ ಪ್ರಯೋಜನ ಇವೆಯಾ? ಆನ್‌ಲೈನ್‌ ಸಲ್ಲಿಕೆ ಹೇಗೆ? ಡಿಟೇಲ್ಸ್‌ ಇಲ್ಲಿದೆ...

ಹೂಡಿಕೆ ಮಾಡೋದು ಹೇಗೆ?

* ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಿರಿ - ಒಂದು ಡಿಮ್ಯಾಟ್ ಅಕೌಂಟ್ ಷೇರುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸ್ಟೋರ್ ಮಾಡುತ್ತೆ. ಹಾಗೆಯೇ ಡಿಮ್ಯಾಟ್ ಅಕೌಂಟ್ ಷೇರುಗಳನ್ನು ಕೊಳ್ಳೋಕೆ ಮತ್ತು ಮಾರೋಕೆ ಸಹಾಯ ಮಾಡುತ್ತೆ. Zerodha, Upstox ಮತ್ತು ICICI Directನಂತಹ ಬ್ರೋಕರ್ಗಳು ಈ ಸೇವೆಗಳನ್ನು ನೀಡುತ್ತಾರೆ.

* KYC ವಿಧಾನ - ಅಕೌಂಟ್ ವೆರಿಫಿಕೇಶನ್ಗಾಗಿ PAN, ಆಧಾರ್, ಬ್ಯಾಂಕ್ ಡೀಟೇಲ್ಸ್ ಮತ್ತು ಅಡ್ರೆಸ್ ಪ್ರೂಫ್​ಗಳನ್ನು ಸಬ್​ಮಿಟ್​ ಮಾಡಿ.
* ಟ್ರೇಡಿಂಗ್ ಅಕೌಂಟ್ - ಟ್ರೇಡಿಂಗ್​ಗಾಗಿ ನಿಮ್ಮ ಬ್ಯಾಂಕ್ ಅಕೌಂಟ್​ನಿಂದ ಹಣವನ್ನು ಟ್ರಾನ್ಸ್​ಫರ್​ ಮಾಡಿ.
* ಹೂಡಿಕೆ ಮಾಡಬೇಕಾದ ಷೇರುಗಳನ್ನು ಸೆಲೆಕ್ಟ್ ಮಾಡಿ - ಮಾಹಿತಿಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳೋಕೆ ಫಂಡಮೆಂಟಲ್ ಮತ್ತು ಟೆಕ್ನಿಕಲ್ ಅನಾಲಿಸಿಸ್ ಬಳಸಿ.
* ನಿಮ್ಮ ಹೂಡಿಕೆಗಳನ್ನು ಟ್ರ್ಯಾಕ್ ಮಾಡಿ - ಬೆಸ್ಟ್ ಡಿಸಿಷನ್ ತೆಗೆದುಕೊಳ್ಳೋಕೆ ಷೇರು ಪರ್ಫಾರ್ಮೆನ್ಸ್ ಮತ್ತು ಮಾರ್ಕೆಟ್ ಟ್ರೆಂಡ್​ಗಳನ್ನು ಟ್ರ್ಯಾಕ್ ಮಾಡಿ.

ಷೇರು ಮಾರುಕಟ್ಟೆ ಹೂಡಿಕೆಗಳ ವಿಧಗಳು

-ಈಕ್ವಿಟಿ ಷೇರುಗಳು
-ದೀರ್ಘಕಾಲೀನ ಕ್ಯಾಪಿಟಲ್ ಗೇನ್ಸ್ ಮತ್ತು ಡಿವಿಡೆಂಡ್​ಗಳನ್ನು ನೀಡೋ ಕಂಪನಿಗಳಲ್ಲಿ ಡೈರೆಕ್ಟ್ ಓನರ್​ಶಿಪ್​.

ಮ್ಯೂಚುವಲ್ ಫಂಡ್​ಗಳು 

- ಇನ್ವೆರ್ಸ್​ಗಳ ಪರವಾಗಿ ಷೇರುಗಳು, ಬಾಂಡ್​ಗಳು ಅಥವಾ ಇತರ ಆಸ್ತಿಗಳಲ್ಲಿ ಹೂಡಿಕೆ ಮಾಡೋ ಎಕ್ಸ್​ಪರ್ಟ್​ಗಳಿಂದ ಮ್ಯಾನೇಜ್ ಮಾಡಲ್ಪಡೋ ಫಂಡ್​ಗಳು. 
- ಎಕ್ಸ್​​ಚೇಂಜ್​-ಟ್ರೇಡೆಡ್ ಫಂಡ್​ಗಳು (ETFಗಳು)
- ನಿಫ್ಟಿ 50 ಅಥವಾ ಸೆನ್ಸೆಕ್ಸ್​ನಂಥ ಇಂಡೆಕ್ಸ್​ಗಳನ್ನು ಟ್ರ್ಯಾಕ್ ಮಾಡಿ ಷೇರು ಮಾರುಕಟ್ಟೆಗಳಲ್ಲಿ ಟ್ರೇಡ್ ಮಾಡಲ್ಪಡೋ ಇನ್ವೆಸ್ಟ್ಮೆಂಟ್ ಫಂಡ್​ಗಳು. 
- ಇನಿಷಿಯಲ್ ಪಬ್ಲಿಕ್ ಆಫರಿಂಗ್​ಗಳು (IPOಗಳು)
- ಹೊಸದಾಗಿ ಲಿಸ್ಟ್ ಆದ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಟ್ರೇಡ್ ಮಾಡೋಕೆ ಶುರು ಮಾಡೋಕೆ ಮುಂಚೆ ಅವುಗಳಲ್ಲಿ ಹೂಡಿಕೆ ಮಾಡೋದು.
- ಬೇಸಿಕ್ ಇನ್ವೆಸ್ಟ್ಮೆಂಟ್ ಸ್ಟ್ರಾಟಜೀಸ್
-ದೀರ್ಘಕಾಲೀನ ಹೂಡಿಕೆ - ಕಾಂಪೌಂಡಿಂಗ್​ನಿಂದ ಬೆನಿಫಿಟ್ ಪಡೆಯೋಕೆ ಹಲವಾರು ವರ್ಷಗಳ ಕಾಲ ಷೇರುಗಳನ್ನು ಕೊಂಡು ಇಟ್ಟುಕೊಳ್ಳೋದು.
-ಮೌಲ್ಯ ಹೂಡಿಕೆ - ಸ್ಟ್ರಾಂಗ್ ಫಂಡಮೆಂಟಲ್ಸ್ ಹೊಂದಿರೋ ಕಡಿಮೆ ಮೌಲ್ಯದ ಷೇರುಗಳನ್ನು ಗುರುತಿಸಿ ಹೂಡಿಕೆ ಮಾಡೋದು.
-ಗ್ರೋತ್ ಇನ್ವೆಸ್ಟ್ಮೆಂಟ್ - ಪ್ರಸ್ತುತ ಮೌಲ್ಯಮಾಪನಗಳ ಹೊರತಾಗಿಯೂ ಹೆಚ್ಚು ಗ್ರೋತ್ ಪೊಟೆನ್ಷಿಯಲ್ ಹೊಂದಿರೋ ಕಂಪನಿಗಳನ್ನು ಸೆಲೆಕ್ಟ್ ಮಾಡೋದು.
-ಡಿವಿಡೆಂಡ್ ಇನ್ವೆಸ್ಟ್​ಮೆಂಟ್​ - ಸ್ಥಿರವಾದ ಡಿವಿಡೆಂಡ್ ಪೇಮೆಂಟ್​ಗಳನ್ನು ನೀಡೋ ಷೇರುಗಳಲ್ಲಿ ಹೂಡಿಕೆ ಮಾಡೋದು.
- ಶಾರ್ಟ್ ಟರ್ಮ್ ಟ್ರೇಡಿಂಗ್ - ಬೇಗ ಲಾಭ ಗಳಿಸೋಕೆ ಕಡಿಮೆ ಸಮಯದಲ್ಲಿ ಷೇರುಗಳನ್ನು ಕೊಂಡು ಮಾರೋದು.

ಬ್ಯಾಂಕ್​ಗಳಲ್ಲಿ ಎಫ್​ಡಿ ಇಡಲು ಇದು ಸುಸಮಯ: ತಡ ಮಾಡಿದ್ರೆ ಕಡಿಮೆ ಬಡ್ಡಿ- ಫುಲ್​ ಡಿಟೇಲ್ಸ್​ ಇಲ್ಲಿದೆ...

ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ರಿಸ್ಕ್​ಗಳು 

-ಮಾರ್ಕೆಟ್ ರಿಸ್ಕ್ - ಎಕನಾಮಿಕ್ ಮತ್ತು ಜಿಯೋಪಾಲಿಟಿಕಲ್ ಈವೆಂಟ್​ಗಳಿಂದ ಷೇರು ಬೆಲೆಗಳಲ್ಲಿ ಏರಿಳಿತಗಳು.
-ಕಂಪೆನಿ ರಿಲೇಟೆಡ್ ರಿಸ್ಕ್ - ಷೇರು ಮೌಲ್ಯದ ಮೇಲೆ ಪರಿಣಾಮ ಬೀರೋ ಪರ್ಫಾರ್ಮೆನ್ಸ್ ಕುಸಿತ ಅಥವಾ ಕೆಟ್ಟ ಮ್ಯಾನೇಜ್ಮೆಂಟ್.
-ಲಿಕ್ವಿಡಿಟಿ ರಿಸ್ಕ್ - ಕಡಿಮೆ ಟ್ರೇಡಿಂಗ್ ವಾಲ್ಯೂಮ್ಗಳನ್ನು ಹೊಂದಿರೋ ಷೇರುಗಳನ್ನು ಕೊಳ್ಳೋಕೆ ಅಥವಾ ಮಾರೋಕೆ ಕಷ್ಟ ಆಗೋದು.
-ರೆಗ್ಯುಲೇಟರಿ ರಿಸ್ಕ್ - ಷೇರು ಮಾರುಕಟ್ಟೆ ಪರ್ಫಾರ್ಮೆನ್ಸ್ ಮೇಲೆ ಪರಿಣಾಮ ಬೀರೋ ಗವರ್ನಮೆಂಟ್ ಪಾಲಿಸಿಗಳು ಮತ್ತು ರೂಲ್ಸ್.

ಇನ್ವೆಸ್ಟ್​ಗಳು ತಿಳ್ಕೊಬೇಕಾಗಿರೋದು

-ಚಿಕ್ಕದಾಗಿ ಶುರು ಮಾಡಿ - ನೀವು ಕಲಿಯೋವಾಗ ಕಳೆದುಕೊಳ್ಳೋಕೆ ಸಾಧ್ಯ ಇರೋ ಅಮೌಂಟ್​ ಹೂಡಿಕೆ ಮಾಡಿ.
-ನಿಮ್ಮ ಪೋರ್ಟ್ಫೋಲಿಯೋವನ್ನ ಡೈವರ್ಸಿಫೈ ಮಾಡಿ - ರಿಸ್ಕ್ ಕಡಿಮೆ ಮಾಡೋಕೆ ಬೇರೆ ಬೇರೆ ಸೆಕ್ಟರ್​ಗಳಲ್ಲಿ ಹೂಡಿಕೆಗಳನ್ನು ಹರಡಬೇಕು.
-ಎಮೋಷನಲ್ ಡಿಸಿಷನ್ಗಳನ್ನು ಅವಾಯ್ಡ್ ಮಾಡಿ - ಭಯ ಅಥವಾ ಮಾರ್ಕೆಟ್ ಹೈಪ್ ಅಲ್ಲ, ರಿಸರ್ಚ್ ಆಧಾರದ ಮೇಲೆ ಇನ್ವೆಸ್ಟ್ಮೆಂಟ್ ಚಾಯ್ಸ್​ಗಳನ್ನು ಬೇಸ್ ಮಾಡಿ.
-ಮಾಹಿತಿಯಲ್ಲಿರಿ - ಬೆಸ್ಟ್ ಡಿಸಿಷನ್ ತೆಗೆದುಕೊಳ್ಳೋಕೆ ಫೈನಾನ್ಷಿಯಲ್ ನ್ಯೂಸ್ ಮತ್ತು ಕಂಪೆನಿ ಅಪ್​ಡೇಟ್​ಗಳನ್ನು ಫಾಲೋ ಮಾಡಿ.
-ಸ್ಟಾಪ್-ಲಾಸ್ ಆಡರ್​ಗಲನ್ನು ಬಳಸಿ - ಷೇರುಗಳನ್ನು ಮಾರೋಕೆ ಮಿನಿಮಮ್ ಬೆಲೆಯನ್ನ ಫಿಕ್ಸ್ ಮಾಡೋದ್ರಿಂದ ನಷ್ಟಗಳಿಂದ ರಕ್ಷಿಸಿ.
-ದೀರ್ಘಕಾಲೀನ ಚಿಂತನೆ - ಮಾರ್ಕೆಟ್ ಏರಿಳಿತಗಳು ಕಾಮನ್; ತಾಳ್ಮೆ ಮತ್ತು ಸ್ಥಿರತೆ ಬೆಸ್ಟ್ ರಿಸಲ್ಟ್​ಗಳಿಗೆ ದಾರಿ ಮಾಡುತ್ತೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಬೆಸ್ಟ್ ಸಂಪತ್ತು ಕ್ರಿಯೇಟ್ ಮಾಡೋ ಅವಕಾಶಗಳನ್ನು ನೀಡುತ್ತೆ. ಆದ್ರೆ ಅದಕ್ಕೆ ನಾಲೆಡ್ಜ್, ಡಿಸಿಪ್ಲಿನ್ ಮತ್ತು ಪೇಷನ್ಸ್ ಬೇಕು. ಮಾರ್ಕೆಟ್ ಬೇಸಿಕ್ಸ್ ಅರ್ಥ ಮಾಡಿಕೊಳ್ಳೋದ್ರಿಂದ, ಸರಿಯಾದ ಸ್ಟ್ರಾಟಜೀಸ್ ಸೆಲೆಕ್ಟ್ ಮಾಡೋದ್ರಿಂದ ಮತ್ತು ರಿಸ್ಕ್​ಗಳನ್ನು ಬುದ್ಧಿವಂತಿಕೆಯಿಂದ ಮ್ಯಾನೇಜ್ ಮಾಡೋದ್ರಿಂದ ಇಂಡಿಯಾದಲ್ಲಿ ಸ್ಟಾರ್ಟರ್ಗಳು ಮಾಹಿತಿಪೂರ್ಣ ನಿರ್ಧಾರಗಳನ್ನು ತೆಗೆದುಕೊಂಡು ಫೈನಾನ್ಷಿಯಲ್ ಸಕ್ಸಸ್ ಸಾಧಿಸಬಹುದು. ಕಂಟಿನ್ಯೂಸ್ ಲರ್ನಿಂಗ್ ಮತ್ತು ಮಾರ್ಕೆಟ್ ಟ್ರೆಂಡ್​ಗಳೊಂದಿಗೆ ಅಪ್ಡೇಟ್ ಆಗಿರೋದು ಇನ್ವೆಸ್ಟ್​ಮೆಂಟ್​ ಸ್ಕಿಲ್​ಗಳನ್ನು ಇಂಪ್ರೂವ್ ಮಾಡೋದರ ಜೊತೆಗೆ ಲಾಂಗ್ ಟರ್ಮ್ ಫೈನಾನ್ಷಿಯಲ್ ಬೆಳವಣಿಗೆಗೂ ದಾರಿ ಮಾಡುತ್ತೆ.

ಡಿಮ್ಯಾಟ್ ಖಾತೆ: ತೆರೆಯುವುದು ಹೇಗೆ? ಏನೇನು ದಾಖಲೆ ಬೇಕು?