ಆಭರಣ ವಲಯದಲ್ಲಿ ಬಂಡವಾಳ ಹೂಡುವವರಿಗೆ ರಿಯಾಯ್ತಿ ಘೋಷಿಸಿದ ಸಚಿವ ನಿರಾಣಿ

* ಉದ್ಯಮಿಗಳಿಗೆ ಸರ್ಕಾರದಿಂದ ಅಗತ್ಯ ನೆರವು
* ಬಂಡವಾಳ ಹೂಡಲು ಮುಂದೆ ಬರುವವರಿಗೆ ಕೆಂಪು ರತ್ನಗಂಬಳಿ ಸ್ವಾಗತ
* ಕಲಬುರಗಿ ಮತ್ತು ಕನಕಪುರದಲ್ಲಿ ಜ್ಯುವೆಲರಿ ಪಾರ್ಕ್ ಸ್ಥಾಪನೆ 
* ಬೆಂಗಳೂರಿನಲ್ಲಿ ಐಐಜೆಎಸ್ ಕಾರ್ಯಕ್ರಮ ಆಯೋಜಿಸಲು ಸಂಘಟಕರಿಗೆ ಆಹ್ವಾನ

Discounts to investors on gold sector Says Minister Murugesh Nirani rbj

ಬೆಂಗಳೂರು, (ಸೆ.15):ರಾಜ್ಯದಲ್ಲಿ ಆಭರಣ ವಲಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರ ಹಾಗೂ ತೆರಿಗೆ  ವಿನಾಯ್ತಿಯನ್ನು ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಕಟಿಸಿದರು. 

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂದು (ಸೆ.15) ಆರಂಭವಾಗಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಭರಣ ವಲಯದಲ್ಲಿ ಯಾರೇ ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದರೆ ನಮ್ಮ ಸರ್ಕಾರ ಸಂಪೂರ್ಣವಾಗಿ ಸಹಕಾರ ಕೊಡಲಿದೆ. ಅಗತ್ಯವಾದ ನೆರವು ಜೊತೆಗೆ ರಿಯಾಯ್ತಿಯನ್ನು  ನೀಡಲಾಗುವುದು ಎಂದು ಘೋಷಿಸಿದರು.

ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ಇಂದಿನ ದರ!

 ರಫ್ತು ಗುರಿ ಸಾಧಿಸುವಲ್ಲಿ ರತ್ನಗಳು ಮತ್ತು ಆಭರಣ ವಲಯವು  ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬಂಡವಾಳ ಹೂಡಲು ಬರುವ ಉದ್ಯಮಿಗಳಿಗೆ ನಾವು ಮುಕ್ತ ಸ್ವಾಗತಕೋರಿ ಕೆಂಪು ರತ್ನಗಂಬಳಿ ಹಾಕುತ್ತೇವೆ ಎಂದು ಹೇಳಿದರು. 

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಇಂಡಿಯಾ ಇಂಟರ್‍ನ್ಯಾಷನಲ್ ಜ್ಯುವೆಲ್ಲರಿ ಶೋ (ಐಐಜೆಎಸ್) ಪ್ರೀಮಿಯರ್ 2021 ಆಯೋಜಿಸಿದ್ದಕ್ಕಾಗಿ ಸಂಘಟಕರಿಗೆ ಧನ್ಯವಾದ ಸಲ್ಲಿಸಿದ ನಿರಾಣಿ, ರಫ್ತು ಗುರಿ ಸಾಧಿಸುವಲ್ಲಿ ಜೆಮ್ಸ್ ಮತ್ತು ಆಭರಣ ವಲಯವು ಪ್ರಮುಖ ಪಾತ್ರ ವಹಿಸಿದೆ. 
ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾದ ಬೆಂಗಳೂರುನಲ್ಲಿ ಆಯೋಜಿಸಿದ್ದಕ್ಕಾಗಿ ನಾನು ಸಂಘಟಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು. 

ಮುಂಬೈನ ಹೊರಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದೇ ಮೊದಲು. ಕರ್ನಾಟಕಕ್ಕೆ ಈ ಅದ್ಭುತ ಅವಕಾಶ ಒದಗಿಸಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದು 37 ನೇ ಐಐಜೆಎಸ್ ಕಾರ್ಯಕ್ರಮವಾಗಿದ್ದು, ಈ ಹಿಂದೆ 36 ಕಾರ್ಯಕ್ರಮಗಳು ಮುಂಬೈನಲ್ಲಿ ನಡೆದಿವೆ. ಮುಂದಿನ ವರ್ಷವೂ ಬೆಂಗಳೂರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಸಚಿವರು ಸಂಘಟಕರನ್ನು ಆಹ್ವಾನಿಸಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 400 ಬಿಲಿಯನ್ ಡಾಲರ್ ಸರಕು ರಫ್ತು ಮಾಡುವ ಗುರಿಯನ್ನು ಸಾಧಿಸಲು ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಕರ್ನಾಟಕ ಬದ್ಧವಾಗಿದೆ ಮತ್ತು ಈ ಪ್ರಯತ್ನದಲ್ಲಿ ರತ್ನಗಳು ಮತ್ತು ಆಭರಣ ವಲಯವು ನಿರ್ಣಾಯಕ ಪಾತ್ರ ವಹಿಸುವ ಸಾಮಥ್ರ್ಯ ಹೊಂದಿದೆ ಎಂದು ನಾನು ನಂಬುತ್ತೇನೆ ಎಂದರು. 

ವಸ್ತುಪ್ರದರ್ಶನದಲ್ಲಿ 2,500 ಕ್ಕೂ ಹೆಚ್ಚು ಸ್ಟಾಲ್‍ಗಳನ್ನು ಸ್ಥಾಪಿಸಲಾಗಿದೆ, 1300 ಪ್ರದರ್ಶಕರು ಮತ್ತು 10,000 ಕಂಪನಿಗಳು ಭಾಗವಹಿಸಲು ನೋಂದಾಯಿಸಿವೆ. 20,000 ಕ್ಕೂ ಹೆಚ್ಚು ಜನರು ಪ್ರದರ್ಶನಕ್ಕೆ ಭೇಟಿ ನೀಡುವದರು.

ಸಚಿವರು ಹಲವಾರು ಮಳಿಗೆಗಳಿಗೆ ಭೇಟಿ ನೀಡಿ, ವ್ಯಾಪಾರ ಮುಖಂಡರು ಮತ್ತು ವೃತ್ತಿಪರರೊಂದಿಗೆ ಸಂವಾದ ನಡೆಸಿದರು.  ಉದ್ಯಮಿಗಳಾಗುವಂತೆ ಪೆÇ್ರೀತ್ಸಾಹಿಸಿ ಉದ್ಯೋಗ ಹುಡುಕುವವರ ಬದಲಿಗೆ ಉದ್ಯೋಗ ಒದಗಿಸುವವರ ಕಡೆಗೆ ಗಮನಹರಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು. 

ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್,  ವಾಣಿಜ್ಯ ಮತ್ತು ಕೈಗಾರಿಕಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಇವಿ ರಮಣ ರೆಡ್ಡಿ,   ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ (ಸಿ  ಐ)  ಎಲ್ ಸುರೇಶ್ ಕುಮಾರ್,  ಜಿಜೆಇಪಿಸಿ ಅಧ್ಯಕ್ಷ ಕಾಲಿನ್ ಶಾ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios