ರಿಟೇಲ್ ಮಾರುಕಟ್ಟೆ ಪ್ರವೇಶಿಸಿದ ಡಿಜಿಟಲ್ ರೂಪಾಯಿ; ಈಗಲೇ ಬಳಕೆಗೆ ಲಭ್ಯವಾ?
ಆರ್ ಬಿಐ ಮೊದಲ ರಿಟೇಲ್ ಡಿಜಿಟಲ್ ರೂಪಾಯಿ ಬಿಡುಗಡೆ ಮಾಡಿದೆ. ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಡಿಜಿಟಲ್ ರೂಪಾಯಿ ಬಿಡುಗಡೆಯಾಗಿದೆ. ಹಾಗಾದ್ರೆ ಡಿಜಿಟಲ್ ರೂಪಾಯಿಯನ್ನು ಈಗಲೇ ಬಳಕೆ ಮಾಡಬಹುದಾ?
ನವದೆಹಲಿ (ನ.01): ಭಾರತದ ಮೊದಲ ರಿಟೇಲ್ ಡಿಜಿಟಲ್ ರೂಪಾಯಿ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಇಂದು (ಡಿ.1) ನವದೆಹಲಿ, ಮುಂಬೈ, ಬೆಂಗಳೂರು ಹಾಗೂ ಭುವನೇಶ್ವರದಲ್ಲಿ ಬಿಡುಗಡೆಗೊಳಿಸಲಿದೆ. ಮುಂದಿನ ದಿನಗಳಲ್ಲಿ ಇದನ್ನು ಅಹಮದಾಬಾದ್, ಗಾಂಗ್ಟಾಕ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಖನೌ, ಪಟನಾ, ಶಿಮ್ಲಾಕ್ಕೆ ವಿಸ್ತರಿಸಲಾಗುತ್ತದೆ. ನವೆಂಬರ್ 1ರಂದು ಆರ್ ಬಿಐ ಸಗಟು ವಲಯದಲ್ಲಿ ಡಿಜಿಟಲ್ ರೂಪಾಯಿ ಪೈಲಟ್ ಯೋಜನೆಗೆ ಚಾಲನೆ ನೀಡಿತ್ತು. ರಿಟೇಲ್ ಡಿಜಿಟಲ್ ರೂಪಾಯಿ ಭಾರತದ ಮೊದಲ ಕೇಂದ್ರ ಬ್ಯಾಂಕಿನ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಅಥವಾ ವರ್ಚುವಲ್ ಕರೆನ್ಸಿ. ಇದನ್ನು ರಿಟೇಲ್ ಖರೀದಿಗಳಿಗೆ ಬಳಸಬಹುದು. ಪೇಪರ್ ಕರೆನ್ಸಿಯಂತೆ ಇದನ್ನು ಕೂಡ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ವಿತರಿಸುತ್ತದೆ. ಈಗಾಗಲೇ ನೀಡಿರುವ ಮಾಹಿತಿ ಪ್ರಕಾರ ಎಂಟು ಬ್ಯಾಂಕ್ ಗಳಲ್ಲಿ ಇ-ರುಪೀ ಪ್ರಾಯೋಗಿಕ ಪ್ರಾರಂಭ ಮಾಡಲಾಗುವುದು. ಇದರ ಬಳಕೆಯನ್ನು ಹಂತ ಹಂತವಾಗಿ ವಿಸ್ತರಣೆ ಮಾಡಲಾಗುತ್ತದೆ. ಡಿಜಿಟಲ್ ಕರೆನ್ಸಿ ವಹಿವಾಟು ನಡೆಸಲು ಸಾಧ್ಯವಾಗುವಂತೆ ಡಿಜಿಟಲ್ ವ್ಯಾಲೆಟ್ ಅನ್ನು ಬ್ಯಾಂಕ್ ಗಳೇ ರಚಿಸುತ್ತವೆ ಕೂಡ.
ಈಗ ಡಿಜಿಟಲ್ ರೂಪಾಯಿ ಬಳಸಬಹುದಾ?
ಈಗಲೇ ಎಲ್ಲರಿಗೂ ಡಿಜಿಟಲ್ ರೂಪಾಯಿ (Digital Rupee) ಬಳಸಲು ಸಾಧ್ಯವಾಗೋದಿಲ್ಲ. ಏಕೆಂದ್ರೆ ಇದು ಪೈಲಟ್ ಯೋಜನೆಯಾಗಿದ್ದು, ಕೆಲವೇ ನಗರಗಳಿಗೆ ಸೀಮಿತವಾಗಿರುತ್ತದೆ. ಮುಂದಿನ ದಿನಗಳಲ್ಲಿ ವಿಸ್ತರಣೆ ಮಾಡಲಾಗುತ್ತದೆ. ಆರ್ ಬಿಐ (RBI) ಈಗಾಗಲೇ ಆಯ್ದ ಪ್ರದೇಶಗಳ ಗ್ರಾಹಕರು ಹಾಗೂ ವ್ಯಾಪಾರಿಗಳ ಕ್ಲೋಸ್ಡ್ ಯೂಸರ್ ಗ್ರೂಪ್ ನಲ್ಲಿ (ಸಿಯುಜಿ) ಮಾತ್ರ ಬಳಸಲಾಗೋದು ಎಂದು ತಿಳಿಸಿದೆ. ಮುಂದಿನ ದಿನಗಳಲ್ಲಿ ಈ ಪೈಲಟ್ ಯೋಜನೆಯನ್ನು ವಿಸ್ತರಿಸುವ ಮೂಲಕ ಇನ್ನಷ್ಟು ಬಳಕೆದಾರರನ್ನು ಸೇರ್ಪಡೆಗೊಳಿಸಲಾಗೋದು.
ಇನ್ಯೂರೆನ್ಸ್ ಕ್ಲೇಮ್ ಮಾಡಲು ಸಾಧ್ಯವಾಗದಿದ್ರೆ ಹೀಗೆ ಮಾಡಿ
ಡಿಜಿಟಲ್ ರೂಪಾಯಿಗೆ ಆ್ಯಪ್ ಬೇಕಾ?
ಡಿಜಿಟಲ್ ರೂಪಾಯಿ ಬಳಕೆಗೆ ಅವಕಾಶವಿರುವ ಬ್ಯಾಂಕ್ ಗಳು ಡಿಜಿಟಲ್ ವ್ಯಾಲೆಟ್ (Digital wallet) ಒದಗಿಸುತ್ತವೆ. ಇದನ್ನು ಬಳಸಿಕೊಂಡು ಬಳಕೆದಾರರು ವಹಿವಾಟು ನಡೆಸಬಹುದು. ಡಿಜಿಟಲ್ ರೂಪಾಯಿ ಮೂಲಕ ಗ್ರಾಹಕರು ಇತರ ಬಳಕೆದಾರರಿಗೆ ಪಾವತಿ ವರ್ಗಾವಣೆ ಮಾಡಬಹುದು. ಅಂದರೆ ವ್ಯಕ್ತಿಯಿಂದ ವ್ಯಕ್ತಿಗೆ ವರ್ಗಾವಣೆ. ಹಾಗೆಯೇ ಶಾಪಿಂಗ್ (Shopping) ಮಾಡಿದ ಸಂದರ್ಭದಲ್ಲಿ ಪಾವತಿಗೆ ಕೂಡ ಇದನ್ನು ಬಳಸಬಹುದು.
ಯಾವೆಲ್ಲ ಬ್ಯಾಂಕ್ ಗಳು ಡಿಜಿಟಲ್ ರೂಪಾಯಿ ವಿತರಿಸುತ್ತವೆ?
ಈ ಪೈಲಟ್ ಯೋಜನೆಯಲ್ಲಿ ಭಾಗವಹಿಸಲು ಎಂಟು ಬ್ಯಾಂಕ್ ಗಳನ್ನು (Banks) ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಐಸಿಐಸಿಐ ಬ್ಯಾಂಕ್ (ICICI bank), ಯೆಸ್ ಬ್ಯಾಂಕ್ ಹಾಗೂ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಅನ್ನು ಆಯ್ಕೆ ಮಾಡಲಾಗಿದೆ. ನಂತರದಲ್ಲಿ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್ ಈ ಯೋಜನೆಗೆ ಸೇರ್ಪಡೆಗೊಳ್ಳಲಿವೆ.
ಇ-ರುಪೀ ಬಳಕೆಗೆ ಇಂಟರ್ ನೆಟ್ ಬೇಕಾ? ಬ್ಯಾಂಕ್ ಬಡ್ಡಿ ನೀಡುತ್ತಾ? ಇಲ್ಲಿದೆ ಮಾಹಿತಿ
ಡಿಜಿಟಲ್ ರೂಪಾಯಿ ಕ್ರಿಪ್ಟೋಕರೆನ್ಸಿಯಂತೆಯೇ?
ಇಲ್ಲ, ಡಿಜಿಟಲ್ ರೂಪಾಯಿ (Digital Rupee) ಸಿಬಿಡಿಸಿ (CBDC) ಅಥವಾ ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿಯಾಗಿದೆ. ಇದು ಬಿಟ್ ಕಾಯಿನ್, ಈಥೆರಿಯಂ ಇತ್ಯಾದಿ ಖಾಸಗಿ ವರ್ಚುವಲ್ ಕರೆನ್ಸಿ (Virtual currency) ಅಥವಾ ಕ್ರಿಪ್ಟೋಕರೆನ್ಸಿಗಿಂತ (Crypto currency) ಭಿನ್ನವಾಗಿದೆ. ಖಾಸಗಿ ವರ್ಚುವಲ್ ಕರೆನ್ಸಿಗಳು ಯಾವುದೇ ವ್ಯಕ್ತಿಯ ಸಾಲವನ್ನು (Loan) ಪ್ರತಿನಿಧಿಸುವುದಿಲ್ಲ.
ಡಿಜಿಟಲ್ ರೂಪಾಯಿ ಸುರಕ್ಷಿತವೇ?
ಹೌದು, ಡಿಜಿಟಲ್ ರೂಪಾಯಿ ಭೌತಿಕ ಹಣದಂತೆ ಕಾರ್ಯನಿರ್ವಹಿಸಲಿದೆ. ಆದ್ರೆ ವ್ಯಾಲೆಟ್ ನಲ್ಲಿರುವ ಹಣಕ್ಕೆ ಯಾವುದೇ ಬಡ್ಡಿ ಸಿಗೋದಿಲ್ಲ.