ಇನ್ಯೂರೆನ್ಸ್ ಕ್ಲೇಮ್ ಮಾಡಲು ಸಾಧ್ಯವಾಗದಿದ್ರೆ ಹೀಗೆ ಮಾಡಿ
ಅನೇಕ ಸಂದರ್ಭಗಳಲ್ಲಿ ಇನ್ಯೂರೆನ್ಸ್ ಕ್ಲೇಮ್ ಮಾಡಲು ಸಾಧ್ಯವಾಗೋದಿಲ್ಲ. ಕಂಪನಿಗಳು ನಾನಾ ಸಬೂಬು ನೀಡಿ ಹಣ ನೀಡಲು ನಿರಾಕರಿಸುತ್ತವೆ. ಅದರಲ್ಲೂ ಆರೋಗ್ಯ ವಿಮೆ ವಿಚಾರದಲ್ಲಿ ಇದು ಹೆಚ್ಚು ಪ್ರಸ್ತುತ. ಹಾಗಾದ್ರೆ ಇಂಥ ಸಂದರ್ಭಗಳಲ್ಲಿಎಲ್ಲಿ ದೂರು ದಾಖಲಿಸಬೇಕು? ಇಲ್ಲಿದೆ ಮಾಹಿತಿ.
Business Desk: ಭವಿಷ್ಯದ ಭದ್ರತೆ ಜೊತೆಗೆ ಕುಟುಂಬದ ಸುರಕ್ಷತೆಗೆ ಇನ್ಯೂರೆನ್ಸ್ ಪಾಲಿಸಿಗಳನ್ನು ಮಾಡಿಸುತ್ತೇವೆ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ವಿಮಾ ಕಂಪನಿಗಳು ಪಾಲಿಸಿ ಮೊತ್ತವನ್ನು ನಮಗೆ ನೀಡಲು ನಿರಾಕರಿಸುತ್ತೇವೆ. ಅದೂ ಆರೋಗ್ಯ ವಿಮೆ ವಿಚಾರದಲ್ಲಿ ಹೆಚ್ಚು. ನಾನಾ ಕಾರಣಗಳನ್ನು ನೀಡಿ ವಿಮಾ ಮೊತ್ತವನ್ನು ಕ್ಲೈಮ್ ಮಾಡಲು ಅವಕಾಶವನ್ನೇ ನೀಡುವುದಿಲ್ಲ. ದುಬಾರಿ ವೈದ್ಯಕೀಯ ವೆಚ್ಚಗಳನ್ನು ಭರಿಸಲಾಗದೆ ಸಂಕಷ್ಟದಲ್ಲಿರುವ ಸಂದರ್ಭಗಳಲ್ಲಿ ವಿಮಾ ಕಂಪನಿಗಳು ಈ ರೀತಿ ಕೈಕೊಟ್ಟಾಗ ಪಾಲಿಸಿದಾರನಿಗೆ ಹತಾಶೆಯಾಗೋದು ಸಹಜ. ಎಷ್ಟೋ ಬಾರಿ ಮುಂದೇನು ಮಾಡೋದು ಎಂದು ತಿಳಿಯದೆ ಪರಿತಪಿಸೋದು ಕೂಡ ಇದೆ. ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇದೆ. ಇದು ವಿಮೆಗೂ ಅನ್ವಯಿಸುತ್ತದೆ. ವಿಮಾ ಕಂಪನಿಗಳಿಗೆ ಮೂಗುದಾರ ಹಾಕಲು ಕೂಡ ಸಾಧ್ಯವಿದೆ. ವಿಮಾ ಕಂಪನಿಗಳು ಹೇಳಿದ ಮಾತ್ರಕ್ಕೆ ನೀವು ಸುಮ್ಮನಿರಬೇಕಾದ ಅಗತ್ಯವಿಲ್ಲ. ಹಾಗಾದ್ರೆ ಇಂಥ ಸಂದರ್ಭಗಳಲ್ಲಿ ಪಾಲಿಸಿದಾರ ಏನು ಮಾಡಬಹುದು? ಹಣವನ್ನು ಹಿಂಪಡೆಯೋದು ಹೇಗೆ? ವಿಮಾ ಕಂಪನಿಗಳ ವಿರುದ್ಧ ದೂರು ನೀಡಲು ಅವಕಾಶವಿದೆ. ಹಾಗಾದ್ರೆ ಎಲ್ಲಿ, ಯಾರಿಗೆ ದೂರು ನೀಡೋದು?
ನಿಯೋಜಿತ ಅಧಿಕಾರಿ
ಪ್ರತಿ ವಿಮಾ ಕಂಪನಿ ಗ್ರಾಹಕರ ದೂರುಗಳನ್ನು ಆಲಿಸಲು ಹಾಗೂ ಪರಿಹಾರ ಒದಗಿಸಲು ಒಬ್ಬ ಅಧಿಕಾರಿಯನ್ನು ನೇಮಕ ಮಾಡಿರುತ್ತದೆ. ನೀವು ಈ ಅಧಿಕಾರಿ ಬಳಿ ದೂರು ನೀಡಬುದು. ನೀವು ನಿಮ್ಮ ಸಮೀಪದ ವಿಮಾ ಕಂಪನಿ ಕಚೇರಿಗೆ ಭೇಟಿ ನೀಡಿ ದೂರು ದಾಖಲಿಸಬಹುದು. ಇಲ್ಲವೆ ಆನ್ ಲೈನ್ ನಲ್ಲಿ ದೂರು ದಾಖಲಿಸಲು ಅವಕಾಶವಿದೆ. ವಿಮಾ ಕಂಪನಿಯ ನಿಯೋಜಿತ ಅಧಿಕಾರಿ ಬಳಿ ದೂರು ದಾಖಲಿಸೋದ್ರಿಂದ ಅನೇಕ ಸಂದರ್ಭಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಇ-ರುಪೀ ಬಳಕೆಗೆ ಇಂಟರ್ ನೆಟ್ ಬೇಕಾ? ಬ್ಯಾಂಕ್ ಬಡ್ಡಿ ನೀಡುತ್ತಾ? ಇಲ್ಲಿದೆ ಮಾಹಿತಿ
IRDAIಗೆ ದೂರು
ಇನ್ಯೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI) ಬಳಿ ದೂರು ನೀಡಲು ಕೂಡ ಅವಕಾಶವಿದೆ. ಇದು ಇನ್ಯೂರೆನ್ಸ್ ನಿಯಮಾವಳಿ ರೂಪಿಸುವ ಮತ್ತು ನಿಯಂತ್ರಿಸುವ ಪ್ರಾಧಿಕಾರವಾಗಿದೆ. ಇದರ ವೆಬ್ ಸೈಟ್ ನಲ್ಲಿ ನಿಮಗೆ ಟಾಲ್ ಫ್ರೀ (Tollfree) ಸಂಖ್ಯೆ ಸಿಗುತ್ತದೆ. ಆ ಸಂಖ್ಯೆಗೆ ಕರೆ ಮಾಡಿ ಕೂಡ ದೂರು ದಾಖಲಿಸಬಹುದು. ಅಥವಾ complaints@irdai.gov.in ವಿಳಾಸಕ್ಕೆ ಇ-ಮೇಲ್ ಕಳುಹಿಸಬಹುದು.
IGMS ವೆಬ್ಸೈಟ್ ಮೂಲಕ ದೂರು
IGMS ವೆಬ್ ಸೈಟ್ https://igms.irda.gov.in ಮೂಲಕ ಕೂಡ ದೂರು ದಾಖಲಿಸಬಹುದು. ಇದು ಐಆರ್ ಡಿಎಯ ಆನ್ ಲೈನ್ ದೂರು ದಾಖಲಿಸುವ ವ್ಯವಸ್ಥೆಯಾಗಿದೆ. ಐಜಿಎಂಎಸ್ ಮೂಲಕ ದಾಖಲಿಸಿದ ದೂರು ನೇರವಾಗಿ ವಿಮಾ ಸಂಸ್ಥೆ ಹಾಗೂ ಐಆರ್ ಡಿಎ (IRDAI) ಎರಡೂ ಕಡೆ ತಲುಪುತ್ತದೆ. ಆನ್ ಲೈನ್ (Online) ಮೂಲಕ ದೂರು ಸಲ್ಲಿಸುವಾಗ ಪಾಲಿಸಿ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿಕೊಂಡು ಇಟ್ಟುಕೊಳ್ಳಿ. ಇದ್ರಿಂದ ದೂರು ದಾಖಲಿಸೋದು ಸುಲಭವಾಗುತ್ತದೆ.
ತೆರಿಗೆ ಉಳಿತಾಯದ ಎಫ್ ಡಿ ಮೇಲೆ ಅತ್ಯಧಿಕ ಬಡ್ಡಿ ನೀಡುವ ನಾಲ್ಕು ಸರ್ಕಾರಿ ಬ್ಯಾಂಕ್ ಗಳು ಇವೇ ನೋಡಿ!
ಇನ್ಸೂರೆನ್ಸ್ ಓಂಬುಡ್ಸ್ ಮ್ಯಾನ್
ಇನ್ಯೂರೆನ್ಸ್ ದೂರು ಪರಿಹರಿಸುವ ಅಧಿಕಾರಿ ಅಥವಾ ಐಆರ್ ಡಿಎಐಯಿಂದ ನ್ಯಾಯ ಸಿಗದೆ ಹೋದಾಗ ಇನ್ಯೂರೆನ್ಸ್ ಒಂಬುಡ್ಸ್ ಮ್ಯಾನ್ ಬಳಿ ದೂರು ಸಲ್ಲಿಸಬಹುದು. ದೇಶಾದ್ಯಂತ 17 ಇನ್ಯೂರೆನ್ಸ್ ಒಂಬುಡ್ಸ್ ಮ್ಯಾನ್ ಇದ್ದಾರೆ. ಸ್ಥಳೀಯ ಒಂಬುಡ್ಸ್ ಮನ್ ಬಳಿ ದೂರು ದಾಖಲಿಸಿದರೆ ಆಯ್ತು. ನೀವು ವಾಸಿಸುವ ಸ್ಥಳಕ್ಕೆ ಸಮೀಪವಿರುವ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಪಿ-2 ಮತ್ತು ಪಿ-3 ಫಾರ್ಮ್ ಗಳನ್ನು ಭರ್ತಿ ಮಾಡಬೇಕು. ಈ ಕುರಿತ ಸ್ಥಳ ಮಾಹಿತಿ ಇನ್ಸೂರೆನ್ಸ್ ಕಂಪನಿ ಕಚೇರಿ ಅಥವಾ ವೆಬ್ ಸೈಟ್ ನಲ್ಲಿ ಸಿಗಲಿದೆ.