Asianet Suvarna News Asianet Suvarna News

Mobile Payments: ಭಾರತದಲ್ಲಿಎಟಿಎಂ ವಿತ್ ಡ್ರಾಕ್ಕಿಂತ ಮೊಬೈಲ್ ಪಾವತಿಯೇ ಹೆಚ್ಚು: ಪ್ರಧಾನಿ

ಹಣಕಾಸು ತಂತ್ರಜ್ಞಾನ - ಫಿನ್ ಟೆಕ್((fintech) ) ಕುರಿತ ಚಿಂತನಾ ನಾಯಕತ್ವ ವೇದಿಕೆ ಇನ್ಫಿನಿಟಿ ಫೋರಂ (InFinity Forum) ಅನ್ನು ಪ್ರಧಾನಿ ನರೇಂದ್ರ ಮೋದಿ  ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ಭಾರತದಲ್ಲಿ ಆನ್ಲೈನ್ ಪಾವತಿಗಳು ಸಾಧಿಸಿರೋ ಪ್ರಗತಿಯನ್ನು ಶ್ಲಾಘಿಸಿದರು.

In India mobile payments exceeded ATM cash withdrawals last year PM Modi at Infinity forum anu
Author
Bangalore, First Published Dec 3, 2021, 7:11 PM IST

ನವದೆಹಲಿ (ನ.3): ಭಾರತದಲ್ಲಿ ಕಳೆದ ವರ್ಷ ಮೊಬೈಲ್ ಪಾವತಿಗಳ (Mobile Payments) ಪ್ರಮಾಣ ಎಟಿಎಂನಲ್ಲಿ(ATM) ಹಣ ವಿತ್ ಡ್ರಾ (Withdraw) ಮಾಡಿದ್ದಕ್ಕಿಂತ ಹೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಣಕಾಸು ತಂತ್ರಜ್ಞಾನ - ಫಿನ್ ಟೆಕ್((fintech) ) ಕುರಿತ ಚಿಂತನಾ ನಾಯಕತ್ವ ವೇದಿಕೆ - ಇನ್ಫಿನಿಟಿ ಫೋರಂ (InFinity Forum) ಅನ್ನು ವಿಡಿಯೋ ಕಾನ್ಫರೆನ್ಸ್ (Video Conference)ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,' ಕಳೆದ ವರ್ಷ ಆನ್ ಲೈನ್ ಪಾವತಿಗಳಲ್ಲಾದ ಬೆಳವಣಿಗೆಗಳನ್ನು ಶ್ಲಾಘಿಸಿದರು. ಅಲ್ಲದೆ, ಮೊಬೈಲ್ ಪಾವತಿಗಳು ಹೇಗೆ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದ ಪ್ರಮಾಣವನ್ನು ಮೀರಿಸಿವೆ ಎಂಬುದನ್ನು ವಿವರಿಸಿದರು.

Finn Tech: ರಾಜ್ಯದಲ್ಲಿ ಬಂಡವಾಳ ಹೂಡಲು ಫಿನ್ ಟೆಕ್‌ಗೆ ಆಹ್ವಾನ

ಈ ಫಿನ್ ಟೆಕ್ ಉಪಕ್ರಮಗಳನ್ನು ಫಿನ್ ಟೆಕ್ ಕ್ರಾಂತಿಯನ್ನಾಗಿ ಬದಲಾಯಿಸೋ ಸಮಯ ಇದಾಗಿದೆ. ದೇಶದ ಪ್ರತಿ ಪ್ರಜೆಯು ಆರ್ಥಿಕ ಸಬಲೀಕರಣ ಸಾಧಿಸಲು ಈ ಕ್ರಾಂತಿ ನೆರವು ನೀಡಬೇಕು ಎಂದು ಪ್ರಧಾನಿ ಹೇಳಿದರು. ಸಂಪೂರ್ಣ ಡಿಜಿಟಲೀಕರಣಗೊಂಡಿರೋ ಬ್ಯಾಂಕುಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಮುಂದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈ ಬದಲಾವಣೆ ಸಾಮಾನ್ಯವಾಗಿರುತ್ತದೆ ಎಂದರು. ನಾವು ನಮ್ಮ ಜ್ಞಾನವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವ ಹಾಗೂ ಅವರಿಂದ ಕಲಿಯೋ ಪ್ರಕ್ರಿಯೆಯಲ್ಲಿ ನಂಬಿಕೆಯಿಟ್ಟಿದ್ದೇವೆ. ನಮ್ಮ ಸಾರ್ವಜನಿಕ ಡಿಜಿಟಲ್(Digital)  ಮೂಲಸೌಕರ್ಯ (Infrastructure) ಯೋಜನೆಗಳು ಜಗತ್ತಿನಾದ್ಯಂತವಿರೋ ಜನರ ಜೀವನವನ್ನು ಸುಧಾರಿಸಬಲ್ಲದು ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು. ಪ್ರಧಾನಿ ಕಚೇರಿಯ ಪತ್ರಿಕಾ ಪ್ರಕಟಣೆ ಪ್ರಕಾರ ಇಂಡೋನೇಷ್ಯಾ(Indonesia), ದಕ್ಷಿಣ ಆಫ್ರಿಕಾ(South Africa) ಮತ್ತು ಯುಕೆ(UK) ವೇದಿಕೆಯ ಮೊದಲನೇ ಆವೃತ್ತಿಯ ಪಾಲುದಾರ (Partner) ರಾಷ್ಟಗಳಾಗಿವೆ.

ಐಎಂಎಫ್ ಉಪ ವ್ಯವಸ್ಥಾಪಕ ನಿರ್ದೇಶಕಿ ಹುದ್ದೆಗೇರಿದ ಕನ್ನಡದ ಕುವರಿ

ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರ (IFSCA) ಭಾರತ ಸರ್ಕಾರದ  ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ. ಇದಕ್ಕೆ ಗಿಫ್ಟ್ ಸಿಟಿ ಮತ್ತು ಬ್ಲೂಮ್ ಬರ್ಗ್ ಸಹಯೋಗ ಕೂಡ ಇದೆ. ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಸುಮಾರು 70ಕ್ಕೂ ಅಧಿಕ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಲ್ಲರನ್ನು ಒಳಗೊಂಡ ಪ್ರಗತಿಗಾಗಿ ಹಣಕಾಸು(Finance) , ತಂತ್ರಜ್ಞಾನ, ಉದ್ಯಮ(business) ಮತ್ತು ಮುಖ್ಯವಾಗಿ ಮನುಕುಲಕ್ಕೆ ಸೇವೆ ಸಲ್ಲಿಸಲು ಹೇಗೆ  ತಂತ್ರಜ್ಞಾನ(technology) ಮತ್ತು ಆವಿಷ್ಕಾರಗಳನ್ನು ಬಳಸಿಕೊಳ್ಳಬಹುದು ಎಂಬ ಕುರಿತು ಚರ್ಚೆ ನಡೆಸಿ, ಯೋಜನೆ ಸಿದ್ಧಪಡಿಸಲಾಗುತ್ತದೆ. ಈ ಕಾರ್ಯಕ್ರಮ' ಬಿಯಾಂಡ್ ' ಘೋಷಣೆಯನ್ನು ಒಳಗೊಂಡಿದೆ.  ಜಾಗತಿಕ ಮಟ್ಟದಲ್ಲಿ ಫಿನ್ ಟೆಕ್ ಉದ್ಯಮದ ಬೆಳವಣಿಗೆಗೆ ಇರೋ ಅವಕಾಶಗಳ ಬಗ್ಗೆ ಚರ್ಚಿಸಲಾಗುತ್ತದೆ.. ಬಾಹ್ಯಾಕಾಶ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ಸೇರಿದಂತೆ ವಿವಿಧ ವಲಯಗಳಲ್ಲಿ ಜಾಗತಿಕ ಮಟ್ಟದ ಸಹಕಾರದೊಂದಿಗೆ ಫಿನ್ ಟೆಕ್ ಉದ್ಯಮವನ್ನು ಅಭಿವೃದ್ಧಿಪಡಿಸೋ ಬಗ್ಗೆ ಚರ್ಚಿಸಲಾಗುತ್ತಿದೆ. ವಿಶ್ವದ ವಿವಿಧ ರಾಷ್ಟ್ರಗಳು ಫಿನ್ ಟೆಕ್ ಉದ್ಯಮಕ್ಕೆ ಸಂಬಂಧಿಸಿ ತಮ್ಮ ಅನುಭವ ಹಾಗೂ ಆಲೋಚನೆಗಳನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಿವೆ. ನೀತಿ ಆಯೋಗ, ಇನ್ವೆಸ್ಟ್ ಇಂಡಿಯಾ, ಫಿಕಿ ಮತ್ತು ನ್ಯಾಸ್ ಕಾಂ ಇತರರು  ಈ ವರ್ಷದ ಪೋರಂನ ಪ್ರಮುಖ ಪಾಲುದಾರರಾಗಿದ್ದಾರೆ. ನಾಳೆ (ಡಿ.4) ಕೂಡ ಈ ಕಾರ್ಯಕ್ರಮ ನಡೆಯಲಿದೆ. ಗುಜರಾತ್ ಗಾಂಧಿನಗರದ  ಗಿಫ್ಟ್ ಸಿಟಿಯಲ್ಲಿ ಕೇಂದ್ರ ಕಚೇರಿ ಹೊಂದಿರೋ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರ (IFSCA)  2019ರ  ಅಂತಾರಾಷ್ಟ್ರೀಯ ಹಣಕಾಸು  ಸೇವೆಗಳ  ಕೇಂದ್ರ ಪ್ರಾಧಿಕಾರ ಕಾಯ್ದೆಯಡಿ  ಸ್ಥಾಪಿಸಲ್ಪಟ್ಟಿದೆ. ಇದು  ಭಾರತದಲ್ಲಿ ಹಣಕಾಸು ಉತ್ಪನ್ನಗಳು, ಸೇವೆಗಳು ಮತ್ತು ಅಂತಾರಾಷ್ಟ್ರೀಯ ಹಣಕಾಸು ಕೇಂದ್ರದಡಿ  ನಿಯಂತ್ರಣ ಮತ್ತು ಅಭಿವೃದ್ಧಿಗಾಗಿ ಒಗ್ಗೂಡಿ ಕೆಲಸ ಮಾಡಲಿವೆ.

 

Follow Us:
Download App:
  • android
  • ios